ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಅಪಹರಣಕ್ಕೆ ಒಳಗಾದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ.
ಇಂದು ಪಟ್ಟಣ ಪಂಚಾಯತ ಸದಸ್ಯ ನಾಗರಾಜ ಅಸುಂಡಿ ಅವರನ್ನು ಬೈಲಹೊಂಗಲ ಕೋರ್ಟ್ ನಲ್ಲಿ ಪೊಲೀಸರು ಹಾಜರುಪಡಿಸಲು ಕರೆತಂದಿದ್ದಾರೆ. ಇದೇ
ಸೆಪ್ಟೆಂಬರ್ ಮೂರರಂದು ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಅಷ್ಟರಲ್ಲಿ ಅವರನ್ನು ಅಪಹರಣ ಮಾಡಿರುವ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಅವರನ್ನು ಅಪಹರಣ ಮಾಡಿದ್ದರು ಎನ್ನಲಾದ ವಾಹನ ಬೆಂಗಳೂರು ರೆಸಾರ್ಟ್ ಬಳಿ ಪತ್ತೆಯಾಗಿತ್ತು. ಬಿಜೆಪಿ ಪಕ್ಷದ ಸದಸ್ಯರಾದ ನಾಗರಾಜ ಅಸುಂಡಿ ಇವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಬಿಜೆಪಿ ಪಕ್ಷ ತೀವ್ರ ಪ್ರತಿಭಟನೆ ನಡೆಸಿತ್ತು. ನಾಗರಾಜ ಅಸುಂಡಿ ಅವರ ತಾಯಿ ಸಹ ಮಗನ ಅಪಹರಣದಿಂದ ಬೇಸರಗೊಂಡು ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೂ ನಾಗರಾಜ ಅಸುಂಡಿ ಅವರು ಪತ್ತೆಯಾಗಿದ್ದರಿಂದ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ.
ವಕಾಲತು ವಹಿಸಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮೊದಲ ಬಾರಿ
ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದು ಗಮನ ಸೆಳೆಯಿತು.
0 Comments