ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾದದ್ದು ಅದನ್ನು ಕಾಪಾಡಿಕೊಂಡು ಹೋಗಬೇಕು ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃಧ್ದಿ ಮಾಡಲು ಶಿಕ್ಷಕರ ಪಾತ್ರ ನಿರ್ಣಾಯಕವಾಗಿದ್ದು. ಸ್ಫರ್ಧಾತ್ಮಕ ಯುಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಕಾರಣ ಶಿಕ್ಷಕರನ್ನು ಪೂಜ್ಯ ಭಾವನೆಯಿ೦ದ ಗೌರವಿಸದರೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದ ಅವರು ನಮ್ಮ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಬಹಳ ಹಿಂದುಳಿದ ಕಾರಣ ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅನುದಾನ ಕೊಟ್ಟಿದ್ದು ಶೈಕ್ಷಣಿಕವಾಗಿ ಬೆಳೆಯಲು ಶಿಕ್ಷಕರು ಶ್ರಮ ವಹಿಸಬೇಕು.
ಶಿಕ್ಷಣಕ್ಕೆ ಬೇಕಾಗುವ ಸವಲತ್ತು ಪೂರೈಸುವ ಕೆಲಸ ನನ್ನದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ತರುವ ಕೆಲಸ ನಿಮ್ಮದು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಮಾತನಾಡಿ ಶಿಕ್ಷಕರು ಕ್ರಿಯಾಶೀಲರಾಗಬೇಕು ಮಕ್ಕಳಿಗೆ ಗ್ರಂಥಾಲಯದ ಓದಿನ ರುಚಿ ಹಚ್ಚಿಸಬೇಕು ಶಿಕ್ಷಕರು ಸಹಿತ ಅಧ್ಯಯನದಲ್ಲಿ ನಿರತರಾಗುವ ಮೂಲಕ ಪ್ರಯತ್ನ ಮಾಡಬೇಕು ಎಂದ ಅವರು ಶಾಲೆಗಳಲ್ಲಿ ಇರುವ ಗ್ರಂಥಾಲಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅಥಣಿ ತಾಲೂಕಿನ ರಡ್ಡೆರಹಟ್ಟಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕಿ ಡಾ ಅರ್ಚನಾ ಅಥಣಿ ಮಾತನಾಡಿ ಕಿತ್ತೂರು ನಾಡು ಎಂದರೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆಲದ ಶಿಕ್ಷಕರಾದ ನೀವು ಮಕ್ಕಳೊಂದಿಗೆ ಶೈಕ್ಷಣಿಕವಾಗಿ ಪೂರ್ಣಪ್ರಮಾಣದಲ್ಲಿ ತೋಡಗಿಸಿಕೊಳ್ಳಬೇಕು. ಮಕ್ಕಳೇ ನಮಗೆ ನಡೆದಾಡುವ ದೇವರು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ವಾಯ್ ತುಬಾಕದ ಮಾತನಾಡಿದರು. ಸಾನಿದ್ಯ ವಹಿಸಿದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ರಾಜ್ಯ ಮಟ್ಟದ ಇನ್ಸ್ಪೈರ್ಡ ಪ್ರಶಸ್ತಿಗೆ ಆಯ್ಕೆಯಾದ ದೇಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಾಗರತ್ನಾ ಕೊಳ್ಳಿ ಹಾಗೂ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ಪಡೆದ ಖೋದಾನಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅನ್ನಪೂರ್ಣೇಶ್ವರಿ ತಳವಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ತಾಲೂಕ ದಂಡಾಧಿಕಾರಿ ರವೀಂದ್ರ ಹಾದಿಮನಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಸಿಪಿಐ ಶಿವಾನಂದ ಗುಡಗನಟ್ಟಿ, ಬಿ ಆರ್ ಸಿ ಗಾಯತ್ರಿ ಅಜ್ಜನ್ನವರ ಅಕ್ಷರ ದಾಸೋಹ ಅಧಿಕಾರಿ ಪಿ ಡಿ ಮೆಳವಂಕಿ, ಶಿಕ್ಷಕರ ಸಂಘದ ಪದಾಧಿಕಾರಿಗಾಳದ ಗಜಾನಂದ ಸೊಗಲನ್ನವರ, ವಿ ಎಸ್ ಬರಗಾಲಿ, ಈಶ್ವರ ಉಪರಿ, ಸಿದ್ದಯ್ಯ ಹಿರೇಮಠ, ಎಮ್ ಎಸ್ ಕಲ್ಮಠ, ವಿಠ್ಠಲ ನನ್ನೂರ, ಮೀನಾಕ್ಷಿ ಪಾತ್ರೋಟ, ಮೀನಾಕ್ಷಿ ಸೂಡಿ, ಜಿ ಎಮ್ ಗಣಾಚಾರಿ, ಶಿವಪ್ಪ ನಂದಿಹಳ್ಳಿ, ಬಸವರಾಜ ಹುಲ್ಲೂರ, ಬಿ ಆರ ಪಿ ಹಾಗೂ ಸಿ ಆರ್ ಪಿಗಳು, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ತಾಲೂಕಿನ ಸಮಸ್ತ ಗುರುಬಳಗ ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಇತರರು ಇದ್ದರು.
0 Comments