ಕಿತ್ತೂರು ವಿಜಯ ಸುದ್ದಿ.ಗಣೇಶ ಹಬ್ಬದ ನಿಮಿತ್ಯ ಕಿತ್ತೂರು ಪೊಲೀಸರಿಂದ ಶಾಂತಿ ಪಾಲನಾ ಸಭೆ ನಡೆಯಿತು.

ಗಣೇಶ ಹಬ್ಬದ ನಿಮಿತ್ಯ ಶಾಂತಿ ಪಾಲನಾ ಸಭೆಯಲ್ಲಿ ಗುಡಿಗಿದ ಗುಡಗನಟ್ಟಿ
ಚನ್ನಮ್ಮನ ಕಿತ್ತೂರು : ನಾವು ಪಟಾಕಿ ಹೊಡಯಲು ಮತ್ತು ಧ್ವನಿ ವರ್ಧಕ ಉಪಯೋಗಿಸಲು ಬೇಡ ಅಂದಿಲ್ಲ ಆದರೆ ಪಟಾಕಿ ಮತ್ತು ಧ್ವನಿ ವರ್ಧಕದ ಸದ್ದು ಕಾನೂನು ಶಾಂತಿ ಸುವೆವಸ್ಥೆಗೆ ವಿರುದ್ಧವಾಗಿ ಇರಬಾರದು. ಪಟಾಕಿ ಮತ್ತು ಧ್ವನಿ ವರ್ಧಕಗಳ ಧ್ವನಿ ಸರ್ವೋಚ್ ನ್ಯಾಯಾಲಯ ಸೂಚಿಸಿದಂತೆ ಇರಬೇಕು. ನೀವು ಕಾನೂನು ಗೌರವಿಸಿದರೆ ನಾವು ನಿಮ್ಮನ್ನು ಗೌರವಿಸುತ್ತೇವೆ. ಇಲ್ಲಾ ಅಂದರೆ ನಮ್ಮ ಕೆಲಸವನ್ನು ನಾವು ಮಾಡಬೇಕಾಗುತ್ತದೆ ಎಂದು ಕಿತ್ತೂರು ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.
ಅರಳಿಕಟ್ಟಿ ಹತ್ತಿರ ಇರುವ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಾ ಆಡಳಿತದ ಸಯುಂಕ್ತ ಆಶ್ರಯದಲ್ಲಿ ಗಣೇಶ ಹಬ್ಬದ ನಿಮಿತ್ಯ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು ಅವರು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮಂಡಳಿ ಮುಖ್ಯಸ್ಥರು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ತೆಗೆದುಕೊಂಡು ಬರುವ ಹಾಗೂ ವಿಸರ್ಜನೆಗೆ ತೆಗೆದುಕೊಂಡು ಹೋಗುವ ಮಾರ್ಗದ ಸಂಪೂರ್ಣ ಮಾಹಿತಿಯನ್ನು ಅನುಮತಿ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು. ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದ ಭಾಂದವರು ಒಂದಾಗಿ ಹಬ್ಬಗಳನ್ನು ಆಚರಿಸುವ ಮೂಲಕ ಭಾವೈಕ್ಯೆತೆಯನ್ನು ಮೆರೆಯಬೇಕು ಎಂದ ಅವರು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ನಮ್ಮ ಸಹಕಾರ ಯಾವತ್ತ ಇರುತ್ತದೆ ಎಂದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಮಾತನಾಡಿ ಪಿಓಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದೆ ಮಣ್ಣಿನಿಂದ ತಯಾರಿಸದ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಗಣೇಶ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಬೇಡಿ, ಒಂದು ವೇಳೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಿದರೆ ಗಣಪತಿ ಜೊತೆಗೆ ಅಲಂಕಾರ ಮಾಡಿದ ಪ್ಲಾಸ್ಟಿಕ್ ವಸ್ತುಗಳನ್ನು ನೀರಿನಲ್ಲಿ ಎಸೆಯಬೇಡಿ ಎಂದು ಗಣೇಶ ಮಂಡಳಿ ಸದಸ್ಯರಿಗೆ ಕಿವಿಮಾತು ಹೇಳಿದರು.
ಪಿಎಸ್ಐ ಪ್ರವೀಣ ಗಂಗೋಳ ಮಾತನಾಡಿ ಪಟ್ಟಣದಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಗಣಪತಿ ಮಂಡಳಿ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಎಲ್ಲ ಗಣೇಶ ಮಂಡಳಿ ಮುಖ್ಯಸ್ಥರು ಸರ್ಕಾರದ ಮಾರ್ಗಸೂಚಿಯಂತೆ ಇಲಾಖೆಗಳ ಅನುಮತಿ ಪಡೆಯಬೇಕು. ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಭಯ ಭಕ್ತಿಯಿಂದ ಗಣೇಶ ಮೂರ್ತಿಯನ್ನು ಕಾಯುವ ಕೆಲಸ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾವೈಕ್ಯೆತೆಯಿಂದ ಹಬ್ಬಗಳನ್ನು ಆಚರಿಸಬೇಕು. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಒಂದೇ ಮಾರ್ಗದ ಮೂಲಕ ರಾಷ್ಟ್ರೀಯ ಹೆದ್ದಾರಿ ಹತ್ತಿರ ಇರುವ ತುಂಬುಕೆರೆಯಲ್ಲಿ ವಿಸರ್ಜನೆ ಮಾಡಬೇಕು. ಕಾನೂನು ಬಾಹಿರವಾಗಿ ಘಟನೆಗಳು ನಡೆಯದಂತೆ ಎಲ್ಲ ಮಂಡಳಿ ಸದಸ್ಯರು ಮುನ್ನೆಚ್ಚರಿಕೆ ವಹಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಹೆಸ್ಕಾಂ ಸಂಸ್ಥೆಯ ಅಧಿಕಾರಿ ಶ್ರೀಶೈಲ. ಗಣೇಶ ಮಂಡಳಿ ಮುಖ್ಯಸ್ಥರಾದ ಶಿವಯೋಗಿ ಹಿರೇಮಠ, ಚಂದ್ರಶೇಖರ ತೆಗೂರ, ಬಸವರಾಜ ಸಂಗೊಳ್ಳಿ, ದಿನೇಶ ವಳಸಂಗ ಸೇರಿದಂತೆ ಇನ್ನೂ ಅನೇಕರು ಮಾತನಾಡಿದರು.
ಈ ವೇಳೆ ಚನ್ನಮ್ಮನ ಕಿತ್ತೂರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಗಣೇಶ ಮಂಡಳಿ ಮುಖ್ಯಸ್ಥರು ಇದ್ದರು.
ಕಿತ್ತೂರು ವಿಜಯ ಸುದ್ದಿ 

Post a Comment

0 Comments