
ತಹಶೀಲ್ದಾರ ರವೀಂದ್ರ ಹಾದಿಮನಿ
ಎಂ.ಕೆ. ವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿನಲ್ಲಿ ಬರ ಪೀಡಿತ ರೈತರಿಗೆ ನೆರವು ನೀಡಲು ಈಗಾಗಲೇ ಎರಡು ಹಂತಗಳಲ್ಲಿ ರ‍್ಕಾರ 88 ಪ್ರತಿಶತ ರೈತರ ಖಾತೆಗಳಿಗೆ ಬರ ಪರಿಹಾರದ ಹಣವನ್ನು ಜಮೆ ಮಾಡಲಾಗಿದೆ ಎಂದು ತಹಶೀಲ್ದಾರ ರವೀಂದ್ರ ಹಾದಿಮನಿ ಪತ್ರರ‍್ತರಿಗೆ ತಿಳಿಸಿದರು.
ಬರ ಪರಿಹಾರದ ವಿವರ: ಮೊದಲನೇಯ ಹಂತದಲ್ಲಿ ಸುಮಾರು 16,126 ಜನ ರೈತರಿಗೆ ರೂ 3.88 ಕೋಟಿ ಹಾಗೂ ಎರಡನೇಯ ಹಂತದಲ್ಲಿ ಸುಮಾರು 12572 ಜನ ರೈತರಿಗೆ ರೂ 11.67 ಕೋಟಿ ಬರ ಪರಿಹಾರದ ಹಣ ಜಮೆಯಾಗಿದೆ. ಇನ್ನುಳಿದ 1401 ಜನ ರೈತರ ಹಣ ತಾಂತ್ರಿಕ ದೋಷದಿಂದ ಜಮೆ ಆಗದೆ ಉಳಿದಿತ್ತು ಅದರ ಪೈಕಿ 973 ರೈತರ ಬರ ಪರಿಹಾರದಲ್ಲಾದ ತಾಂತ್ರಿಕ ದೋಷವನ್ನು ಸರಿಪಡಿಸಿ ರ‍್ಕಾರಕ್ಕೆ ವರದಿ ಕಳಿಸಲಾಗಿದೆ ಹಂತಹಂತವಾಗಿ ಆ ಖಾತೆಗಳಿಗೂ ಸಹ ಹಣ ಜಮೆ ಆಗುತ್ತದೆ. ಇನ್ನುಳಿದ 428 ಪ್ರಕರಣಗಳ ಪೈಕಿ 75 ಜನ ರೈತರು ಪರಸ್ಥಳಗಳಲ್ಲಿ ವಾಸವಾಗಿದ್ದಾರೆ, 60 ಜನ ರೈತರು ಮರಣಹೊಂದಿದ್ದಾರೆ, 10 ಜನ ರೈತರ ಖಾತೆಗಳು ಬಂದ ಆಗಿವೆ. 6 ಜನ ರೈತರ ಖಾತೆಗಳು ಬ್ಲಾಕ್ ಆಗಿವೆ, 4 ಜನ ರೈತರ ಖಾತೆಗಳು ಆಧಾರ ಜೋಡಣೆ ಕಾರಣ ನಿಷ್ಕ್ರಿಯವಾಗಿವೆ, 273 ಜನ ರೈತರ ಖಾತೆಗಳು ಆಧಾರ ಲಿಂಕ್ ಆಗದ ಕಾರಣ ಬರ ಪರಿಹಾರದ ಹಣ ಜಮೆ ಆಗಿಲ್ಲ.
ಯಾವ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಜಮೆ ಆಗಿರುವುದಿಲ್ಲ ಅಂತಹ ರೈತರಿಗೆ ನಮ್ಮ ಇಲಾಖೆ ಅಧಿಕಾರಿಗಳಿಂದ ಕರೆ ಮೂಲಕ ಆಧಾರ್ ಮತ್ತು ಬ್ಯಾಂಕ್ ಪಾಸ್ ಬುಕ್ ಪರಿಶೀಲನೆ ಮಾಡಲು ತಿಳಿಸಲಾಗಿದೆ ಅವರು ಅವರವರ ಖಾತೆಗಳಲ್ಲಾದ ದೋಷಗಳನ್ನು ಸರಿ ಮಾಡಿಸಿದಲ್ಲಿ ಅವರ ಖಾತೆಗಳಗೆ ನೇರವಾಗಿ ರ‍್ಕಾರದಿಂದ ಹಣ ಜಮಾ ಆಗುತ್ತದೆ. ನಮ್ಮ ತಾಲೂಕಿನಲ್ಲಿ ಸುಮಾರು 88 ಪ್ರತಿಶತ ರೈತರ ಖಾತೆಗಳಗೆ ಹಣ ಜಮೆ ಆಗಿದ್ದು ಇನ್ನೂಳಿದ 12 ಪ್ರತಿಶತ ರೈತರಿಗೆ ಆದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸ ನಮ್ಮ ಇಲಾಖೆಗೆ ನೀಡಿದಲ್ಲಿ ಅವರ ಖಾತೆಗಳಿಗೆ ಹಣ ಜಮಾ ಮಾಡಿಸು ನಿಟ್ಟಿನಲ್ಲಿ ನಮ್ಮ ಇಲಾಖೆ ವತಿಯಿಂದ ಶ್ರಮ ವಹಿಸಲಾಗುವುದು ಎಂದು ತಿಳಿಸಿದ ಅವರು ಕೆಲವು ರೈತರ ಖಾತೆಗಳಿಗೆ ಜಮೆಯಾದ ಬರ ಪರಿಹಾರದ ಹಣವನ್ನು ಸಾಲ ಖಾತೆಗೆ ಜಮಾ ಮಾಡಿಕೊಂಡು ರೈತರಿಗೆ ಹಣ ಕೊಡದ ಕೆಲವು ಬ್ಯಾಂಕಗಳ ಮ್ಯಾನೇಜರ್ ಜೊತೆ ಮಾತನಾಡಿ ರೈತರು ಸಂಕಷ್ಟದಲ್ಲಿದ್ದಾರೆ ಅವರ ಖಾತೆಗೆ ಬಂದ ಬರ ಪರಿಹಾರದ ಹಣವನ್ನು ಸಾಲಖಾತೆಗೆ ಜಮಾ ಮಾಡಿಕೊಳ್ಳದೆ ರೈತರಿಗೆ ಕೊಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
0 Comments