ನೀರಾವರಿ ನೌಕರ ನೀರಾವರಿ ಕಚೇರಿ ಆವರಣದಲ್ಲಿಯೇ ನೇಣಿಗೆ ಶರಣು

ಕಿತ್ತೂರು ವಿಜಯ 
ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಿಪ್ಪರಗಿ ಆಣೆಕಟ್ಟು ನೀರಾವರಿ ನಿಗಮದ ನೌಕರ ಕಚೇರಿಯ ಹೊರಾಂಗಣದಲ್ಲಿ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕುಮಾರ ಬಸಯ್ಯ ಧುಮಕಿಮಠ (49) ಮೃತ ದುರ್ದೈವಿ. ನೀರಾವರಿ ಇಲಾಖೆ ಆವರಣದ ಪಕ್ಕದಲ್ಲಿ ಇರುವ ಬೇವಿನ ಮರಕ್ಕೆ ಗುರುವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. ತನಿಕಾ ಕಾರ್ಯ ಮುಂದುವರೆದಿದೆ.
ಸುಮಾರು ಎರಡು ದಶಕಗಳಿಂದ ಸರ್ಕಾರಿ ನೌಕರಿಯಲ್ಲಿ ಸೇವೆಸಲ್ಲಿಸುತ್ತಿದ್ದ ಕುಮಾರ ಅವರು ಕಳೆದ ಮೂರು ತಿಂಗಳಿಂದ ಕೆಲಸಕ್ಕೆ ಬಾರದೆ ರಜೆಯಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇದುವರೆಗೂ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.

Post a Comment

0 Comments