
ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಮನವಿ ನೀಡುತ್ತಿರುವುದು
ಕಿತ್ತೂರು ವಿಜಯ
ಚನ್ನಮ್ಮನ ಕಿತ್ತೂರ: ರೈತರು ದೇಶದ ಬೆನ್ನಲಬು ಅಂತ ಆಳುವ ಸರ್ಕಾರಗಳು ಮತ್ತು ಸಕ್ಕರೆ ಕಾರ್ಖಾನೆಗಳು ಹೇಳುತ್ತವೆ. ಸಕ್ಕರೆ ಕಾರ್ಖಾನೆಗಳಿಗೆ ಕಳಿಸಿದ ಕಬ್ಬಿನ ಬಿಲ್ಲು ಬಾರದ ರೈತರ ಸಕಂಟ ಗೋಳು ಕೇಳುವವರು ಯಾರು ಇಲ್ಲ ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕ ಜಗದೀಶ ಕಡೋಲಿ ಹೇಳಿದರು.
ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ ಅವರ ಮೂಲಕ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಐತಿಹಾಸಿಕ ಚನ್ನಮ್ಮನ ಕಿತ್ತೂರು ಭಾಗದಲ್ಲಿ ಕಬ್ಬು ಬೆಳೆದ ರೈತರು ಸಮೀಪದ ಸಂಕೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿದ್ದರು. ಕಬ್ಬು ಕಳಿಸಿ ವರ್ಷ ಕಳೆದರು ಕಬ್ಬಿನ ಬಿಲ್ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೆಲವು ರೈತರ ಕಬ್ಬಿನ ಬಿಲ್ ಬಂದಿದೆ ಇನ್ನೂ ಕೆಲವು ರೈತರ ಕಬ್ಬಿನ ಬಿಲ್ ಬಂದಿಲ್ಲ. ರೈತರು ಕಬ್ಬು ಬೆಳೆಸುವ ಮತ್ತು ಕಳಿಸುವ ಸಂದರ್ಭದಲ್ಲಿ ಲಕ್ಷಾಂತರ ರೂ ಸಾಲ ಸೂಲ ಮಾಡಿ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಾರೆ ಆದರೆ ಸರಿಯಾದ ಸಮಯಕ್ಕೆ ಕಬ್ಬಿನ ಬಿಲ್ ಬಾರದಿದ್ದರೆ ಸಾಲ ಮಾಡಿದ ರೈತನ ಗತಿ ಏನಾಗಬೇಕು, ಅವರ ಹೊಟ್ಟಗೆ ಮಕ್ಕಳ ಶಿಕ್ಷಣ ಅರಿವೆ ಅಂಚಡಿಗೆ ಏನು ಮಾಡಬೇಕು?
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಸಕ್ಕರೆ ಖಾರ್ಕಾನೆ ಮಾಲೀಕರು ಮತ್ತು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಬಿಲ್ಲು ಕೊಡದ ಕಾರ್ಖಾನೆ ಮಾಲೀಕರ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಈಗ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಬರದಿಂದ ನಡೆಯತ್ತಿದೆ ರೈತರು ಬಿತ್ತನೆ ಬೀಜ ಗೊಬ್ಬರ ತಂದು ಬಿತ್ತನೆ ಕರ‍್ಯ ಪ್ರಾರಂಭ ಮಾಡಬೇಕು ಆದರೆ ಇದುವರೆಗೆ ರೈತರ ಕಬ್ಬಿನ ಬಿಲ್ ಕೈ ಸೇರಿಲ್ಲ ಬಿತ್ತನೆ ಬೀಜ ಮತ್ತು ಗೊಬ್ಬರ ತರುವದಕ್ಕೆ ಹಣ ಇಲ್ಲದೆ ಕಬ್ಬು ಕಳಿಸಿದ ರೈತರು ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಒಂದು ಕಡೆ ಕಬ್ಬು ಕಳುಹಿಸಿ ಬಿಲ್ಲು ಬಾರದೇ ಸಂಕಷ್ಟ ಅನಿಭವಿಸಿದರೆ, ಇನ್ನೂಂದ ಕಡೆ ಕಬ್ಬು ಕಳುಹಿಸುವಾಗ ಮಾಡಿದ ಸಾಲ ತೀರಿಸುವುದಕ್ಕೆ ಪರದಾಡುತ್ತಿದ್ದಾರೆ. ಸಂಕೇಶ್ವರ ಸಕ್ಕರೆ ಕಾರ್ಖಾನೆಯ ಮಾಲೀಕರು ಮತ್ತು ಅಧಿಕಾರಿಗಳು ಕೊಡಲೇ ರೈತರ ಬಾಕಿ ಇರುವ ಬಿಲ್ ಅವರವರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಮನವಿ ಮಾಡಿದ ಅವರು. ಎಂಟು ದಿನದ ಒಳಗಾಗಿ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
0 Comments