Belagavi : 2 ಕರಡಿಗಳೊಂದಿಗೆ ವೀರಾವೇಶದೊಂದಿಗೆ ಹೋರಾಡಿದ 71ರ ಹರೆಯದ ವೃದ್ಧ: 20 ನಿಮಿಷದ ಹೋರಾಟ ಬಳಿಕ ಕರಡಿಗಳು ಪರಾರಿ!

2 ಕರಡಿಗಳೊಂದಿಗೆ ವೀರಾವೇಶದೊಂದಿಗೆ ಹೋರಾಡಿದ 71ರ ಹರೆಯದ ವೃದ್ಧ: 20 ನಿಮಿಷದ ಹೋರಾಟ ಬಳಿಕ ಕರಡಿಗಳು ಪರಾರಿ!

ಮಹಾರಾಷ್ಟ್ರ ಮೂಲದ 71 ವರ್ಷದ ವೃದ್ಧರೊಬ್ಬರು ಬರೊಬ್ಬರಿ 2 ಕರಡಿಗಳೊಂದಗೆ ವೀರಾವೇಶದಿಂದ ಹೋರಾಡಿ ಬಚಾವಾದ ಘಟನೆ ಬೆಳಗಾವಿಯಿಂದ ವರದಿಯಾಗಿದೆ. ​​ಮಹಾರಾಷ್ಟ್ರದ ಚಂದಗಡ ತಾಲೂಕಿನ ಮಾಲುಂಗೆ ಗ್ರಾಮದ ವಿಠ್ಠಲ ತಾನಾಜಿ ಶಿಳಕೆ ಕರಡಿ ದಾಳಿಗೆ ತುತ್ತಾದ ವೃದ್ಧರಾಗಿದ್ದು ತೀವ್ರ ಗಾಯಗೊಂಡಿರುವ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ​​ಮಹಾರಾಷ್ಟ್ರದ ಚಂದಗಡ ತಾಲೂಕಿನ ಮಾಲುಂಗೆ ಗ್ರಾಮದ ವಿಠ್ಠಲ ತಾನಾಜಿ ಶಿಳಕೆ ಎಂಬವರೇ ಕರಡಿ ದಾಳಿಯನ್ನು ಎದುರಿಸಿದ ವೃದ್ಧರಾಗಿದ್ದಾರೆ.

ಬೆಳಗಾವಿ: ಕರಡಿ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡರೆ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ತಪ್ಪಿಸಿಕೊಂಡು ಬಚಾವಾದರೇ ದೊಡ್ಡ ವಿಷಯ. ಅಂಥದ್ದಲ್ಲಿ 72 ವರ್ಷದ ವೃದ್ಧರೊಬ್ಬರು ಎರಡು ಬಲಿಷ್ಠ ಕರಡಿಗಳೊಂದಿಗೆ ಬರೋಬ್ಬರಿ 20 ನಿಮಿಷಗಳ ಕಾಲ ಹೋರಾಡಿ ಬದುಕಿ ಬಂದ ರೋಚಕ ಘಟನೆ ಜೂನ್‌ 21ರಂದು ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ವೃದ್ಧರನ್ನು ಇಲ್ಲಿನ ವಿಜಯಾ ಆರ್ಥೋ ಆ್ಯಂಡ್‌ ಟ್ರಾಮಾ ಸೆಂಟರ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರದ ಚಂದಗಡ ತಾಲೂಕಿನ ಮಾಲುಂಗೆ ಗ್ರಾಮದ ವಿಠ್ಠಲ ತಾನಾಜಿ ಶಿಳಕೆ ಕರಡಿ ದಾಳಿಗೆ ತುತ್ತಾದ ವೃದ್ಧ. ವಿಠ್ಠಲ ಅವರು ಉತ್ತರ ಕನ್ನಡದ ಜಗಲಪೇಟೆ ಸಮೀಪದ ಹಳ್ಳಿಯಲ್ಲಿರುವ ತಮ್ಮ ಸೊಸೆಯ ಮನೆಯಿಂದ ಮೊಮ್ಮಗನನ್ನು ಕರೆತರಲು ಮಾಲುಂಗೆಯಿಂದ ಬಂದಿದ್ದರು. ಅರಣ್ಯದ ದಾರಿಯಲ್ಲಿನಡೆದು ಹೋಗುತ್ತಿರುವಾಗ ಎರಡು ಕರಡಿಗಳು ವಿಠ್ಠಲ ಅವರ ಮೇಲೆ ದಾಳಿ ಮಾಡಿವೆ.

2 ಕರಡಿಗಳೊಂದಿಗೆ 20 ನಿಮಿಷ ಕಾದಾಟ

ವಿಠ್ಠಲ ಅವರು 2 ಬಲಿಷ್ಠ ಕರಡಿಗಳ ಜತೆ ಸುಮಾರು 20 ನಿಮಿಷ ಹೋರಾಡಿದ್ದಾರೆ. ಬಳಿಕ ಕರಡಿಗಳು ವಿಠ್ಠಲ ಅವರನ್ನು ಬಿಟ್ಟು ಅರಣ್ಯದೊಳಗೆ ಹೋಗಿವೆ. ಆದರೆ, ಕರಡಿಗಳ ಜತೆಗಿನ ಹೋರಾಟದಲ್ಲಿ ವಿಠ್ಠಲ ಅವರ ಎಡಗಣ್ಣು ಸಂಪೂರ್ಣ ನಾಶವಾಗಿತ್ತು. ಮುಖದ ಭಾಗ ಕರಡಿಗಳ ಹರಿತವಾದ ಉಗುರಿನಿಂದ ಬಗೆಯಲ್ಪಟ್ಟಿತ್ತು. ಅಪಾರ ಪ್ರಮಾಣದ ರಕ್ತ ಸೋರಿಕೆಯಾಗಿತ್ತು. ಆದರೂ ಛಲ ಬಿಡದೆ ವಿಠ್ಠಲ ಅವರು ಸುಮಾರು 2 ಕಿಮೀ ನಡೆದು ತಮ್ಮ ಸಂಬಂಧಿಗಳ ಮನೆ ತಲುಪಿದ್ದಾರೆ.

ಘಟನೆಯ ಮಾಹಿತಿ ತಿಳಿದ ಜಗಲಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಠ್ಠಲ ಅವರನ್ನು ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ತೀವ್ರ ಸ್ವರೂಪದ ಗಾಯಗಳು ಉಂಟಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವಿಠ್ಠಲ ಅವರನ್ನು ಬೆಳಗಾವಿಯ ವಿಜಯ ಆರ್ಥೋ ಆ್ಯಂಡ್‌ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು.

Post a Comment

0 Comments