MK.vani ಸುದ್ದಿ. ಚೆನ್ನಮ್ಮ ಕಿತ್ತೂರು.PSI ಪ್ರವೀಣ್ ಗಂಗೋಳ. ಕಿತ್ತೂರಿನ ಸೋಮವಾರ ಸಂತೆಯಲ್ಲಿ ಖಡಕ್ ಎಚ್ಚರಿಕೆ.

ನಿನ್ನೆ ನಡೆದ ಕಿತ್ತೂರು ಸೋಮವಾರ ಸಂತೆಯಲ್ಲಿ ತರಕಾರಿ ಮಾರುವವರಿಗೆ ರಸ್ತೆ ಬದಿ ತರಕಾರಿ ಮಾರುವವರಿಗೆ ಟ್ರಾಫಿಕ್ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ  ಪ್ರತಿ ಸೋಮವಾರ ಸಂತೆಯಲ್ಲಿ ಟ್ರಾಫಿಕ್ ನಿಂದ ಜನರಿಗೆ. ಓಡಾಡಲು ಬಹಳ ತೊಂದರೆ ಆಗುತ್ತಿದೆ ಅದಕ್ಕಾಗಿ ಸಹಕರಿಸಿ. ಇದು ಮುಖ್ಯರಸ್ತೆ ಸರಕಾರಿ ಆಸ್ಪತ್ರೆ ಇರುವುದರಿಂದ ಅಂಬುಲೆನ್ಸ್ ಸಂಚರಿಸಲು ಹರಸಾಹಸ ಪಡಬೇಕಾಗಿದೆ ಮತ್ತು ಕಿತ್ತೂರು ತಾಲೂಕಿನ ಪ್ರತಿ ಒಂದು ಗ್ರಾಮದ ಜನರು ಇಲ್ಲಿ ಬರುತ್ತಾರೆ  ಅದಕ್ಕಾಗಿ ಇಲ್ಲಿ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿ ಸೋಮವಾರ ಇದರ ಬಗ್ಗೆ ನಿಗಾ ವಹಿಸಿದರು ಜನರು ಕೇಳುತ್ತಿಲ್ಲ. ಒಂದು ಬದಿ ವ್ಯಾಪಾರ ಮಾಡಿದರೆ. ಮತ್ತೊಂದು ಬದಿಯವರಿಗೆ ಸಿಟ್ಟು ಅದಕ್ಕಾಗಿ ಪೊಲೀಸ್ ಇಲಾಖೆ ಪ್ರತಿ ಸೋಮವಾರ ಇಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಮತ್ತು ಟು ವೀಲರ್ ಫೋರ್ ವೀಲರ ವೈಕಲ್ ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ ಎಂದು ಇಲ್ಲಿ ಓಡಾಡುವ ಜನರ ಅಳಲು. ಇದಕ್ಕೆ ಯಾವ ರೀತಿ ಪರಿಹಾರ ಸಿಗುತ್ತದೆ ಕಾದು ನೋಡಬೇಕು

 MK. ವಾಣಿ ಸುದ್ದಿ ಚೆನ್ನಮ್ಮ ಕಿತ್ತೂರು
http://www.mkvani.com/2023/06/belagavi_26.html

Post a Comment

0 Comments