kittur vijay news.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಿತ್ತೂರ ತಾಲೂಕು ವಾಕ್ಸಲ್ಲಿ ಕಿಟ್ ವಿತರಣೆ ಕಾರ್ಯಕ್ರಮ

ಕಿತ್ತೂರು ವಿಜಯ ಸುದ್ದಿ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಿತ್ತೂರ ತಾಲೂಕು..
 
*ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ:*

ಈ ದಿನ ಸಂಗೊಳ್ಳಿ ಗ್ರಾಮದಲ್ಲಿ ಮಾಸಾಶನ ಫಲಾನುಭವಿಯಾದ ಶ್ರೀಮತಿ ಪಾತಿಮಾ ದಡ್ಡಿಮನಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತಿ ತಿಂಗಳು 1000/- ಮಾಸಾಶನ ನೀಡಲಾಗುತ್ತದೆ ಮತ್ತು ಈ ದಿನ ರಾಜ್ಯಾದ್ಯಂತ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಅದರಲ್ಲಿ ಪಾತಿಮ ಅವರಿಗೆ ದೈನಂದಿನ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳು ದಿಂಬು, ಚಾಪೆ, ಬಟ್ಟೆ, ಸೀರೆ, ಸೋಪು,ಹೊದಿಕೆ ಬಾಚಣಿಕೆ, ಇನ್ನಿತರ ಸಾಮಗ್ರಿಗಳನ್ನು 
ಈ ಸದಸ್ಯರಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ *"ವಾತ್ಸಲ್ಯ ಕಿಟ್"* ನೀಡಲಾಯಿತು..

ಇದೆ ರೀತಿ ತಾಲೂಕಿನಲ್ಲಿರುವ 5 ಜನರಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗಿದೆ....

ಶ್ರೀಮತಿ ದಯಾಶೀಲ ಪ್ರಾದೇಶಿಕ ನಿರ್ದೇಶಕರು ಧಾರವಾಡ *ಶ್ರಿ ಸತೀಶ ನಾಯಕ* ಜಿಲ್ಲಾ ನಿರ್ದೇಶಕರು , * ಶ್ರೀ ಬಾಬು ಖುದ್ದುನ್ನವರ ಗ್ರಾಮ ಪಂಚ್ಜಯತಿ ಸದಸ್ಯರು, *ಶ್ರೀ ಮಕ್ತುಮ್ ಸಾಭ್ ಮಕಾನದಾರ್ jvk ಕೇಂದ್ರ ಅದ್ಯಕ್ಷರಾದ ಗೌರಮ್ಮ್ ,
 ಉಪಸ್ಥಿತಿಯಲ್ಲಿ ಪಾತಿಮ ಅವರಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು....

ಕಿಟ್ ವಿತರಣೆ ಮಾಡಿದ ನಂತರ ಮಾತನಾಡಿದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರಾ ನಿರ್ಗತಿಗರನ್ನೂ ಗುರುತಿಸಿ ಅವರ ಮನೆ ಬಾಗಿಲಿಗೆ ಬಂದು ಸೌಲಭ್ಯ ಒದಗಿಸುತ್ತದೆ, ಇಂತಹ ಪುಣ್ಯದ ಕೆಲಸ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅವರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು....

ಈ ಸಂದರ್ಭದಲ್ಲಿ, ವಲಯದ ಮೇಲ್ವಿಚಾರಕರಾದ ಗಂಗಪ್ಪ, ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಸವಿತಾ, ಸ್ಥಳೀಯ ಸೇವಾ ಪ್ರತಿನಿಧಿ,ಶಿಲ್ಪಾ ಸಂಘದ ಸದಸ್ಯರು ಉಪಸ್ಥಿತರಿದ್ದರು...

Post a Comment

0 Comments