--------------------------------------------
ಚನ್ನಮ್ಮನ ಕಿತ್ತೂರು - ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಜೋಡು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನ ಕೆರೆ ಅಭಿವೃದ್ಧಿ ಕಾಮಗಾರಿಯ ನೆಪವೊಡ್ಡಿ, ಅಥಣಿ ಪುರಸಭೆ ಅಧಿಕಾರಿಗಳು ರಾತ್ರೋರಾತ್ರಿ ಭಾರತ ಸ್ವಾತಂತ್ರ್ಯ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರ ಪ್ರಥಮ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬೋರ್ಡ್ ಅನ್ನು ತೆರವುಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಯುವ ಕಾರ್ಯದರ್ಶಿ ಬಸವರಾಜ ಭೀಮರಾಣಿ ಅವರು ಮಾತನಾಡಿ ರಾತ್ರೋರಾತ್ರಿ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಗುಡಿಮನಿ ಅವರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಮಹಾನ್ ವ್ಯಕ್ತಿಗಳ ಹೆಸರಿನ ಬೋರ್ಡ್‌ಗಳನ್ನು ಏಕಾಏಕಿ ತೆರವು ಮಾಡುವುದು ಸರಿಯಲ್ಲ. ಇದು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ,
ವೀರ ರಾಣಿ ಕಿತ್ತೂರ ಚನ್ನಮ್ಮನ ತೆರವುಗೊಳಿಸಲಾದ ನಾಮಫಲಕವನ್ನು ಕೊಡಲೇ ಅನಾವರಣ ಮಾಡಿ ಗೌರವಯುತವಾಗಿ ಯಥಾಸ್ಥಿತಿಯಲ್ಲಿ ಮರುಸ್ಥಾಪಿಸಬೇಕು. ತಪ್ಪಿದಲ್ಲಿ ರಾಣಿ ಚನ್ನಮ್ಮ ನವಭಾರತ ಸೇನೆ ವತಿಯಿಂದ ಹೋರಾಟವನ್ನು ಮಾಡಲಾಗುವುದು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕರಾದ ಜಗದೀಶ ಕಡೋಲಿ ಅವರು ಎಚ್ಚರಿಸಿದ್ದರು.
0 Comments