ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರಿನ ಪಟ್ಟಣದ ಗುರುವಾರಪೇಟೆಯ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ

ಚನ್ನಮ್ಮನ ಕಿತ್ತೂರು:- ಪಟ್ಟಣದ ಗುರುವಾರಪೇಟೆಯ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಜೀಮ್ ಪ್ರೇಮಜಿ ಫೌಂಡೇಶನ ವತಿಯಿಂದ ಹಾಗೂ ಪಿಎಂ ಪೋಷಕ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ. ತಾಲೂಕ ಪಂಚಾಯತ ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ವತಿಯಿಂದ ಶಾಲಾ ಮಕ್ಕಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರವಾದ ಮೊಟ್ಟೆ. ಶೇಂಗಾ ಚಕ್ಕಿ. ಬಾಳೆಹಣ್ಣು ವಿತರಣೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಎಸ್. ವಾಯ್. ಕಾಶಪ್ಪನವರ ಮಾತನಾಡಿ ಸರ್ಕಾರದ ನಿಯಮದಂತೆ ಮೊಟ್ಟೆ. ಬಾಳೆಹಣ್ಣು. ಶೇಂಗಾ ಚಕ್ಕಿ ಎಲ್ಲಾ ಮಕ್ಕಳಿಗೆ ವಿತರಿಸಲಾಗುವುದು. ಸರ್ಕಾರದ ನಿಯಮದಂತೆ ಸಮಿತಿಯನ್ನು ಸಭೆಯಲ್ಲಿ ಸರ್ವಾನು ಮತದಿಂದ ರಚಿಸಲಾಗಿದೆ. ಸಮಿತಿಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ ಹಡಪದ. ಪ್ರಧಾನ ಗುರುಗಳಾದ ಎಸ್. ವಾಯ್. ಕಾಶಪ್ಪನವರ. ಶಂಭುಲಿಂಗ ಕುಲಕರ್ಣಿ. ರುದ್ರಪ್ಪ ಕಟ್ಟಿಮನಿ. ಶಿಕ್ಷಕ ಎಸ್.ಎಫ್. ಶಿವಪ್ಪನವರ. ಶಿಕ್ಷಕಿ ಶ್ರೀಮತಿ ಎಮ್. ಬಿ. ಪಾಟೀಲ. ಶೃತಿಕಾ ಮುರಗೋಡ. ಭಾರತಿ ಗೌಡ್ರ ಇವರನ್ನು ನೇಮಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಮಗ್ರ ದೈಹಿಕ ಆರೋಗ್ಯ ಮತ್ತು ಬೆಳವಣಿಗೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿರುವ ಪೌಷ್ಟಿಕತೆ ಮತ್ತು ರಕ್ತ ಹೀನತೆಯನ್ನು ನಿವಾರಿಸುವುದರ ನಿಮಿತ್ಯ. ಶಾಲಾ ಮಕ್ಕಳ ಹಿತಾ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ವಾರದಲ್ಲಿ 4 ದಿನ ಮೊಟ್ಟೆಗಳನ್ನು ಹಾಗೂ 2 ದಿನ ಚ್ಚಕಿ ಬಾಳೆಹಣ್ಣು ವಿತರಣೆ ಮಾಡಲಾಗುವುದು ಎಂದು ಶಿಕ್ಷಕ ಅರ್ಜುನ ಕಾಗ್ಯಪಗೋಳ ತಿಳಿಸಿದರು.
ಶಿಕ್ಷಕರಾದ ಶ್ರೀಮತಿ ಶ್ರೀದೇವಿ ಕಾರಜೋಳ. ಶ್ರೀಮತಿ ರುಕ್ಮಿಣಿ ಲೋಕಪುರ. ಶ್ರೀಮತಿ ಮಹಾದೇವಿ ಪಾಟೀಲ. ಅಶೋಕ ಗಿರಿಯಪ್ಪಗೊಳ. ಅಶೋಕ ಕುರುಬೆಟ್ಟ. ಖಾಲಿಬಾಯಿ. ಶ್ರೀಮತಿ ಮಂಜುಳಾ ಪಾಟೀಲ. ಎಸ್ ಡಿ. ಎಮ್. ಸಿ. ಸದಸ್ಯರಾದ ಕೃಷ್ಣ ವಾಸ್ಟರ. ಬಸವರಾಜ ಭಜಂತ್ರಿ. ರವಿ ಭೋವಿ. ಶಾರದಾ ಮಣ್ಣವಡ್ಡರ. ಶಾಇನಬಾನು ಹಾಗೂ ಪಾಲಕರು ಉಪಸ್ಥಿತರಿದ್ದರು.

Post a Comment

0 Comments