200 ವರ್ಷದ ಉತ್ಸವದ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮನಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ಶುಚಿಗೊಳಿಸಿ, ಸ್ಮಾರಕಗಳನ್ನು ಸಂರಕ್ಷಿಸಲು ಕಿತ್ತೂರು ತಾಲೂಕು ಪಂಚಾಯತಿಯಿಂದ ಕ್ರಮವಹಿಸಲಾಗಿದೆ.
ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ನೀಡಿದ ಸೂಚನೆಯಂತೆ ಭಾರತದ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಅವರ ಹಾಗೂ ಕಿತ್ತೂರು ಸಂಸ್ಥಾನದ ಸ್ಮಾರಕ ಮತ್ತು ಐತಿಹಾಸಿಕ ಸ್ಥಳಗಳನ್ನು ಗುರುವಾರ ಶುಚಿಗೊಳಿಸಲಾಯಿತು.
ತಾಪಂ ಇಓ ಕಿರಣ್ ಘೋರ್ಪಡೆ ಅವರ ನೇತೃತ್ವದಲ್ಲಿ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿರುವ ಕಿತ್ತೂರು ಸಂಸ್ಥಾನದ ಸ್ಮಾರಕಗಳು ಹಾಗೂ ಐತಿಹಾಸಿಕಗಳನ್ನು ಸ್ವಚ್ಛಗೊಳಿಸುತ್ತಿದ್ದು, ತಾಲೂಕು ಪಂಚಾಯತಿ ಕಿತ್ತೂರು ಹಾಗೂ ಗ್ರಾಮ ಪಂಚಾಯತಿ ದೇವರಶೀಗಿಹಳ್ಳಿ ಸಹಯೋಗದಲ್ಲಿ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ (ಸ್ವಚ್ಛತಾ ಸೇವಾ) ಕಾರ್ಯಕ್ರಮದಡಿ ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಹಳ್ಳದ ಬಸವಣ್ಣ ದೇವಾಸ್ಥಾನ ಸುತ್ತಲೂ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ. ಇಓ ಕಿರಣ್ ಘೊರ್ಪಡೆ,
ಪಿಡಿಓ ವಿನಯಕುಮಾರ ಕೊರವಿ, ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಕಾರ್ಯದರ್ಶಿ ಮಡಿವಾಳಿ ಕಲಭಾಂವಿ, ಉಮೇಶ ಹೈಬತ್ತಿ, ಶಿವಪುತ್ರ ಹುಕ್ಕೇರಿ, ಬಸವರಾಜ ಗುಂಡಗಾವಿ, ಕರೆಪ್ಪ ಪೂಜಾರ, ಮಾಹದೇವಿ ಬಬಲಿಕೊಪ್ಪ, ಗಂಗವ್ವ ಬಬಲಿಕೊಪ್ಪ, ಶಾಂತವ್ವ ಬಬಲಿಕೊಪ್ಪ ಸೇರಿದಂತೆ ಗ್ರಾ.ಪಂ. ಸರ್ವ ಸದಸ್ಯರು, ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.
0 Comments