kittur vijay news.ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಕಾರ್ಯದರ್ಶಿಯಾಗಿ ಪ್ರಭಾವತಿ ಫಕೀರಪುರ ಅಧಿಕಾರ ಸ್ವೀಕಾರ

ಕಿತ್ತೂರು ವಿಜಯ ಸುದ್ದಿ.
ಸವದತ್ತಿ : ದಕ್ಷಿಣ ಭಾರತದ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಪ್ರಭಾವತಿ ಫಕೀರಪುರ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಮಾಧ್ಯಮದವರೊಂದಿಗೆ
ಬಳಿಕ ಮಾತನಾಡಿದ ಅವರು, ಈ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ತಮ್ಮ ಪುಣ್ಯ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಧಾರ್ಮಿಕ ಕೇಂದ್ರ ಇದಾಗಿದ್ದು, ಬರುವ ಲಕ್ಷಾಂತರ ಭಕ್ತರ ಹಿತ ಕಾಪಾಡುವುದೇ ತಮ್ಮ ಪ್ರಮುಖ ಗುರಿಯಾಗಿದೆ ಎಂದರು.

ಫೆಬ್ರವರಿ ತಿಂಗಳ ಅಂತ್ಯದೊಳಗಡೆ ದೇವಸ್ಥಾನ
ಆರಂಭವಾಗಲಿವೆಯೇ ಅಭಿವೃದ್ಧಿ ಕಾಮಗಾರಿಗಳು
ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು,
ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕುರಿತು ಗಮನಕ್ಕಿದೆ. ಈ ಕುರಿತು ಪರಿಶೀಲಿಸಿ ಸಂಪೂರ್ಣ ಮಾಹಿತಿ ಪಡೆದು. ಕ್ಷೇತ್ರದ ಸರ್ವಾ೦ಗೀಣ ಪ್ರಗತಿಗಾಗಿ ಇಲ್ಲಿನ ಎಲ್ಲ ಅಧಿಕಾರಿ, ಸಿಬ್ಬಂದಿಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ಸ್ಥಳೀಯ ಪಥದತ್ತ ಕೊಂಡೊಯ್ಯಲು ಶ್ರಮಿಸುವುದಾಗಿ ಭರವಸೆ ಶಾಸಕರ ಸಹಕಾರದೊಂದಿಗೆ ಪ್ರಾಧಿಕಾರವನ್ನು ಅಭಿವೃದ್ಧಿ
ನೀಡಿದರು.
ಇದಕ್ಕೂ ಮೊದಲು ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ
ನೀಡಿದ ಇವರು, ದೇವಿಯ ದರ್ಶನ ಆಶೀರ್ವಾದ
ಪಡೆದರು. ನೂತನ ಕಾರ್ಯದರ್ಶಿ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ತಹಶೀಲ್ದಾರ್ ಎಂ.ಎನ್. ಹೆಗ್ಗಣ್ಣವರ, ಪ್ರಾಧಿಕಾರದ ಉಪ ಕಾರ್ಯದರ್ಶಿ ನಾಗರತ್ನಾ ಚೋಳಿನ, ಜೆಇ ಶಂಕರ ದಂಡಿನ, ಶೀತಲ ಕಡಟ್ಟಿ, ಅಮೀರ ಗೋರಿನಾಯಕ, ವೀರೇಶ ಬ್ಯಾಹಟ್ಟಿ, ಮಲ್ಲು ಜಕಾತಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Post a Comment

0 Comments