ಚನ್ನಮ್ಮನ ಕಿತ್ತೂರು :- ರಾಜಗುರು ಸಂಸ್ಥಾನ ಕಲ್ಮಠ ಮತ್ತು ತಾಲೂಕ ಕನ್ನಡ ಸಾಹಿತ್ಯ
ಪರಿಷತ್ತು ಚನ್ನಮ್ಮನ ಕಿತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರವಿವಾರ ದಿನಾಂಕ 15 ರಂದು ಸಾಯಂಕಾಲ 7 ಗಂಟೆಗೆ ಶ್ರೀ ಶಂಕರ ಚಂದರಗಿ ಸಭಾಭವನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಶಿವಕೀರ್ತನ, ಸಂಗೀತ ಮತ್ತು ಶಿವಭಜನೆ ಕಾರ್ಯಕ್ರಮಗಳು ಜರುಗಲಿವೆ ಎಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಇವರ ಸಾನಿಧ್ಯದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ನಿಚ್ಚಣಕಿಯ ಶ್ರೀ ಮಡಿವಾಳೇಶ್ವರ ಮಠದ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸುವರು.
ಶ್ರೀ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಸಿದ್ದರಾಮ ಶಾಸ್ತ್ರಿಗಳು ಹಿರೇಮಠ, ಹುಲ್ಲೂರು (ಬೈಲಹೊಂಗಲ) ಇವರಿಂದ ಶಿವಕೀರ್ತನೆ ನಡೆಯುವದು. ಮುಖ್ಯ ಅತಿಥಿಗಳಾಗಿ ಕಿತ್ತೂರಿನ ಸಿ.ಪಿ.ಐ ಶ್ರೀ ಶಿವಾನಂದ ಗುಡುಗನಟ್ಟಿ, ದಂತ ವೈದ್ಯರಾದ ಡಾ|ಜಗದೀಶ ಹಾರೂಗೊಪ್ಪ ಮತ್ತು ನಿವೃತ್ತ ಶಿಕ್ಷಕರಾದ ಶ್ರೀ ಎಂ.ಎಸ್.ಕಲ್ಮಠ ಆಗಮಿಸುವರು. ಶ್ರೀ ಈಶ್ವರ ಗಡಿಬಿಡಿ ಮತ್ತು ಶ್ರೀ ಪ್ರಲ್ಟಾದ ಶಿಗ್ಗಾಂವಿ ಇವರಿಂದ ಸಂಗೀತ ಮತ್ತು ಹಿರೇನಂದಿಹಳ್ಳಿ.ಯ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ ಭಜನಾ ಮಂಡಳಿಯವರಿಂದ ಶಿವಭಜನೆ ಕಾರ್ಯಕ್ರಮಗಳು ನಡೆಯಲಿದ್ದು ಕಿತ್ತೂರ ನಾಡಿನ ಸದ್ಭಕ್ತರು ಶಿವರಾತ್ರಿ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.
0 Comments