ಚ,ಕಿತ್ತೂರು: ಸ್ಥಳೀಯ ಪ್ರಸಿದ್ಧ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಚೇರಮನ್ನರಾಗಿ ಶಂಕರ ವಳಸಂಗ ಹಾಗೂ ವೈಸ್ ಚೇರಮನ್ನರಾಗಿ ಜಗದೀಶ ಬಿ. ಘಟನಟ್ಟಿ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಮಾಜಿ ಚೇರಮನ್ನರಾದ ಜಗದೀಶ ವಸ್ರದ ಈ ಸಂದರ್ಭದಲ್ಲಿ ಮಾತನಾಡಿ ನೂತನ ಚೇರಮನ್ನರು ಹಾಗೂ ವೈಸ್ ಚೇರಮನ್ನರು ಸಂಸ್ಥೆಯ ಅಭಿವೃದ್ಧಿಗೆ ಇನ್ನೂ ಉತ್ತಮ ಸೇವೆ ಸಲ್ಲಿಸಿ ಸಂಸ್ಥೆಗೆ ಹೆಸರು ತರುವಂತಾಗಲಿ ಎಂದು ಹಾರೈಸಿದರು.
ಮಾಜಿ ವೈಸ್ ಚೇರಮನ್ನರಾದ ಪಿ.ಆರ್.ಶೆಟ್ಟರ, ಗೌರವ ಕಾರ್ಯದರ್ಶಿಗಳಾದ ಶ್ರೀ ಜಗದೀಶ ಬಿಕ್ಕಣ್ಣವರ, ಆಡಳಿತ ಮಂಡಳಿ ಸದಸ್ಯರಾದ ಎನ್.ವಿ.ತಡಕೋಡ, ಎಂ.ಬಿ.ದಳವಾಯಿ, ಎನ್.ಎಸ್.ಹಿರೇಮಠ, ಪಿ.ಆರ್.ಪಾಟೀಲ, ವೈ.ಡಿ.ಭಾರತಿ, ಡಿ.ಎಲ್.ಪಾಟೀಲ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ನಾಗರಾಜ ಎಚ್.ಕೆ, ಎಂ.ಎಸ್.ಪಾಟೀಲ, ಐ.ಕೆ.ಅಂಗಡಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
0 Comments