ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಬೆಳಗಾವ ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಹಾಗೂ ಸಂಶೋಧನಾ ಕೇಂದ್ರ ಲಾಯಿಲ್ ಉಜರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರ ಇವರುಗಳ ಮಾರ್ಗದರ್ಶನದೊಂದಿಗೆ ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೇಪಬೆಳಗಿಸಿ, ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ ಮಾತನಾಡಿದರು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಧ್ಯ ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಇನ್ನೊಬ್ಬರಿಗೆ ವ್ಯಸನ ಮುಕ್ತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗಡೆಯವರು ಕಾರ್ಯ ಕೈಯೆತ್ತಿಕೊಂಡಿದ್ದಾರೆ. ಇದಕ್ಕೆ ನಾವು-ನೀವೆಲ್ಲರೂ ಕೈಜೋಡಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡೋಣ ನಾನು ನಿಮ್ಮೊಂದಿಗಿದ್ದೇನೆ ಎಂದರು.
ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಜಿಪಂ ಸದಸ್ಯನಿ ಹಾಗೂ ಜನಜಾಗೃತಿ ವೇದಿಕೆ ಸದಸ್ಯನಿ ರಾಧಾ ಕಾದ್ರೋಳ್ಳಿ .ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಧ್ಯ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ನಿಮ್ಮ ಹಾಗೂ ಮಕ್ಕಳ ಮತ್ತು ಕುಟುಂಬದ ಉಜ್ವಲ ಭವಿಷ್ಯ ರೂಪಿಸಿಕೊಂಡು ಉತ್ತಮ ಸಮಾಜ ಕಟ್ಟಲು ಮುಂದಾಗಿ ಎಂದು ಕರೆ ನೀಡಿದರು.
ಸಾನಿಧ್ಯವಹಿಸಿ ಆರ್ಶೀವಚನ ನೀಡಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಯೋಗೀಂದ್ರ ಸ್ವಾಮಿಜೀ ವ್ಯಸನ ಮುಕ್ತ ಸಮಾಜ ರೂಪಿಸಲು ಹೋರಾಟ ಮಾಡುವಾಗ ಸಹಜವಾಗಿ ಸಮಾಜದಿಂದ ಅನೇಕ ರೀತಿಯಲ್ಲಿ ವಿರೋಧಗಳು ವ್ಯಕ್ತವಾಗುತ್ತವೆ. ಎಂದು ಹಿಂಜರಿಯಬಾರದು. ಮಂಜುನಾಥನ ಕೃಪೆಯಿಂದ ಕೆಲವೇ ದಿನಗಳಲ್ಲಿ ನೀವು ಹೆಂಡ ಕುಡಿಯುವುದನ್ನು ಬಿಡುತ್ತೀರಿರೆಂಬುವುದು ನನಗೆ ಆತ್ಮವಿಶ್ವಾಸವಿದೆ. ಪ್ರಕೃತಿಯಲ್ಲಿ ಅತಿ ಹೆಚ್ಚಾಗಿ ಮಳೆಯಾದರೆ ಗುಡ್ಡ ಕುಸಿಯುತ್ತದೆ. ಅದೇ ರೀತಿ ಅತಿ ಹೆಂಡ ಸೇವನೆ ಮಾಡುವುದರಿಂದ ನಮ್ಮ ಶರೀರ ಹಾಳಾಗುವುದರೊಂದಿಗೆ ಕುಟುಂಬ ಬೀದಿಗೆ ಬರುವ ಪೂರ್ವದಲ್ಲಿ ನಶ ಮುಕ್ತರಾಗಬೇಕು ದುಶ್ಚಟಕ್ಕೆ ಬಲಿಯಾದವರು ಚಟದಿಂದ ಮುಕ್ತರಾಗಲು ಬಹಳ ಕಷ್ಟವಾಗುತ್ತದೆ. ಆದರೆ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅನೇಕ ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿ ಸಾರ್ಥಕಜೀವನ ನಡೆಸಲು ಪ್ರೋತ್ಸಾಹ .ನೀಡುತ್ತಿದ್ದಾರೆ.. ಧರ್ಮಾಧಿಕಾರಿಗಳು ಲಕ್ಷಾಂತರ ಮಹಿಳೆಯರಿಗೆ ಸಾಲ ನೀಡಿ ಸ್ವಾವಲಂನೆಯ ಬದುಕಿಗೆ ದಾರಿ ದೀಪವಾಗಿದ್ದಾರೆಂದರು.
ಸಭೆಯ ಅಧ್ಯಕ್ಷತೆ ಬಸವರಾಜ ಸೊಪ್ಪಿಮಠ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ, ಅತಿಥಿಗಳಾಗಿ ಪೋಲಿಸ್ ಇಲಾಖೆ ಎಂ.ಬಿ. ದರಗಾಥ, ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಸತೀಶ ನಾಯಕ, ಬಸವರಾಜ ಬಡಿಗೇರ ಅಧ್ಯಕ್ಷರು ವಿಶ್ವಕರ್ಮ ದೇವಸ್ಥಾನ ಬಸ್ಸಾಪೂರ, ಕೃಷ್ಣಾಜೀ ಕುಲಕರ್ಣಿ ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ, ಅದೃಶ್ಯಪ್ಪಾ ಗದ್ದಿಹಳ್ಳಿ ಸದಸ್ಯರು ಜಿಲ್ಲಾ ಜನಜಾಗೃತಿ, ಇವರುಗಳು ವ್ಯಸನ ಮುಕ್ತ ಕುರಿತು ಮಾತನಾಡಿದರು.
ಈ ವೇಳೆ ಕಿತ್ತೂರ ವಲಯ ಮೇಲ್ವಿಚಾರಕ ಸಿದ್ದಪ್ಪಾ ಪಡತಾರೆ, ಯೋಜನಾಧಿಕಾರಿ ಸಂದೀಪ್ ಡಿ. ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿ,ಗಳು, ಪದಾಧಿಕಾರಿಗಳು, ಒಕ್ಕೂಟದ ಪದಾದಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿದ್ದರು.
0 Comments