Kittur. ವಾರ್ಷಿಕ ಸ್ನೇಹ ಸಮ್ಮೇಳನ. ಕಿತ್ತೂರು ವಿಜಯ. ಸುದ್ದಿ

ಜೀವನದಲ್ಲಿ ಆಹಾರ ವಿಹಾರ ಮತ್ತು ವಿನೋದ ಬಹುಮುಖ್ಯ- ಡಾ. ಸ್ಫೂರ್ತಿ ಮಾಸ್ತಿ ಹೊಳಿ
ಚನ್ನಮ್ಮನ ಕಿತ್ತೂರು: ಜೀವನದಲ್ಲಿ ಯಶಸ್ಸು ಕಾಣಲು ನಿಯಮಿತ ಆಹಾರ ಪದ್ಧತಿ, ಪ್ರತಿ ನಿತ್ಯ ವಿಹಾರ ಮತ್ತು ಮನಸ್ಸು
ವಿನೋದದಿಂದ ಕೂಡಿರುವುದು ಬಹುಮುಖ್ಯವಾಗಿದೆ ಎಂದು ಶಿವೋಹಂ ಸ್ಪಿರಿಚವಲ್ ಹಬ್‌ದ ಸಿ.ಇ.ಒ ಹೋಮಿಯೋಪತಿಕ್
ವೈದ್ಯ ಡಾ. ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.
ಸ್ಥಳೀಯ ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ೪೯ನೇ ವಾರ್ಷಿಕ ಸ್ನೇಹ ಸಮ್ಮೇಳನ
ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಸ್ಫೂರ್ತಿ
ಮಾಸ್ತಿಹೊಳಿ, ವಿದ್ಯಾರ್ಥಿಗಳು ನಿಯಮಿತವಾಗಿ ಸರಿಯಾದ ಸಮಯಕ್ಕೆ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು.
ಹಾನಿಕಾರವಾಗುವ ಪಾಸ್ಟ್‌ಫುಡ್ ತಿನಿಸುಗಳನ್ನು ಸೇವಿಸುವುದರಿಂದ ಅವು ನಮ್ಮ ಆರೋಗ್ಯವನ್ನು
ಹಾಳುಮಾಡುವುದಲ್ಲದೆ ದೈಹಿಕ ಬೆಳವಣಿಗೆ ಕುಂಟಿತಗೊಳಿಸುತ್ತವೆ. ಪ್ರತಿನಿತ್ಯವು ನಿಯಮಿತವಾಗಿ ವ್ಯಾಯಾಮ, ವಿಹಾರವನ್ನು
ಕೈಗೊಳ್ಳುವುದರಿಂದ ದೈಹಿಕವಾಗಿ ಸದೃಢಗೊಳ್ಳುತ್ತೇವೆ. ದೈಹಿಕ ಬೆಳವಣಿಗೆ ಜೊತೆಗೆ ನಮ್ಮ ಮಾನಸಿಕ ಬೆಳವಣಿಗೆ ಹಾಗೂ
ಸದೃಢತ అకి ಅವಶ್ಯವಾಗಿದೆ. ನಾವು ಎಷ್ಟು ವಿನೋದದಿಂದ ಇರುತ್ತೇವೆಯೋ ಅಷ್ಟು ನಮ್ಮ ಮನಸ್ಸು
ಪ್ರಶಾಂತವಾಗಿರುತ್ತದೆ. ಉತ್ತಮವಾದ ವಿಚಾರವನ್ನು ನಾವು ಮೈಗೂಡಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಕೆಡುಬಯಸುವುದು
ಹಾಗೂ ಕೆಟ್ಟ ಆಲೋಚನೆಗಳನ್ನು ಮಾಡುವುದರಿಂದ ನಮ್ಮ ಮನಸ್ಸು ಕುಗ್ಗುತ್ತದೆ. ಯಾವ ವ್ಯಕ್ತಿ ಈ ಮೂರು ಆಹಾರ,
ವಿಹಾರ ಮತ್ತು ವಿನೋದ ಇವುಗಳನ್ನು ನಿಯಮಿತವಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆಯೋ ಆವ್ಯಕ್ತಿ
ಯಶಸ್ಸುಗಳಿಸುತ್ತಾನೆ ಎಂದು ಹೇಳಿದರು.
ಸಮಾರಂಭದಲ್ಲಿ ಇಟಗಿ ಬಿ.ಎಮ್.ಸಾಣಿಕೊಪ್ಪ ಪ.ಪೂ ಕಾಲೇಜಿನ ಪ್ರೊ. ಶ್ರೀಧರ ಶಾಸ್ತ್ರಿ, ಗಂದಿಗವಾಡ
ಪರಂಜ್ಯೋತಿ ಪ.ಪೂ ಕಾಲೇಜಿನ ಪ್ರೊ. ನಾಗನಗೌಡ ಬೈಲೂರ ಹಾಗೂ ಕಿತ್ತೂರಿನ ಪ.ಪೂ
ಕಾಲೇಜಿ ಪ್ರೊ.
ಎಮ್.ಎಸ್.ಪಾಟೀಲ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಧರ ಶಾಸ್ತ್ರಿ ನಮ್ಮ ನಾಡಿನ
ಹಿರಿಯರು ಬಹಳ ಶ್ರಮವಹಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ಶಿಕ್ಷಣ
ದೊರೆಯುವಂತೆ ಮಾಡಿದ್ದಾರೆ ಅದರ ಸದುಪಯೋಗವನ್ನು ನಾವು ಪಡೆಯಬೇಕು ಎಂದರು. ಗಂದಿಗವಾಡ ಪ.ಪೂ ಕಾಲೇಜಿನ
ಪ್ರೊ. ನಾಗನಗೌಡ ಪಾಟೀಲ ಮಾತನಾಡಿ ನಾವು ಈ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನಮಾಡಿದ ವಿದ್ಯಾರ್ಥಿಯಾಗಿದ್ದು ನಮ್ಮ
ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ನಗರದ ಶಿಕ್ಷಣ ಸಂಸ್ಥೆಗಳಂತೆ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುನೀಡಿತ್ತಿವ ಇದರ ಸದಪಯೋಗವನ್ನು ವಿದ್ಯಾರ್ಥಿಗಳ
ಬಳಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಕಿ.ನಾ.ವಿ.ವ.ಸಂಘದ ಚೇರಮನ್ನರಾದ ಜಗದೀಶ ವಸ್ತ್ರದ,
ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದಾಗ ನಾವು ಶ್ರಮವಹಿಸಿದ್ದು ಸಾರ್ಥಕವಾಗುತ್ತದೆ. ಪಾಲಕರು ನಿಮ್ಮ ಮೇಲೆ
ಅಪಾರವಾದ ನಂಬಿಕೆಯಿಟ್ಟು ತಮಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು ಅವರ ನಂಬಿಕೆಯನ್ನು ಹುಸಿಗೊಳಿಸದೆ ಜೀವನದಲ್ಲಿ
ಗುರಿಯನ್ನು ಹೊಂದಿ ಗುರಿಯ ಕಡೆಗೆ ಸಾಗಬೇಕು. ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳನ್ನು ಪರಿಹರಿಸಿಕೊಂಡು
ಸಾಧನೆಯ ಮೆಟ್ಟಿಲನ್ನು ಏರಬೇಕು ಎಂದರು.
ಶ್ರೀ
ಮಂಡಳಿ
ಸಮಾರಂಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳರಾಜಯೋಗೀಂದ್ರ ಸ್ವಾಮಿಜೀ
ಸಾನಿಧ್ಯವಹಿಸಿದ್ದರು. ಕಿನಾವಿವ ಸ೦ಘದ
ಅರುಣಕುಮಾರ ಚಿಕ್ಕಣ್ಣವರ, ಆಡಳಿತ
ನಿರ್ದೇಶಕರುಗಳಾದ ಎನ್.ವೈ.ತಡಕೋಡ, ಎಸ್.ಎಸ್.ವಳಸಂಗ, ಯು.ಡಿ.ಭಾರತಿ, ಜೆ.ಬಿ.ಘಟ್ಟ, ಎನ್.ಎಸ್.ಹಿರೇಮಠ,
ಡಿ.ಎಲ್.ಪಾಟೀಲ, ವಿ.ಆರ್.ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಕ್ಷತಾ ಮಾನೊಳ್ಳಿ, ವಿದ್ಯಾರ್ಥಿನಿ
ಪ್ರತಿನಿಧಿ ತೇಜಶ್ವಿನಿ ಮೆಟ್ಟಿನ, ಕ್ರೀಡಾ ಕಾರ್ಯದರ್ಶಿ ವೈಷ್ಣವಿ ದೇಗಾಂವಿ ವೇದಿಕೆಯಲ್ಲಿದ್ದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹೇಳಿದರು, ವಿದ್ಯಾರ್ಥಿ ಒಕ್ಕೂಟದ ಸಹ-ಕಾರ್ಯದರ್ಶಿ
ಡಾ. ಸಂಗೀತಾ ತೋಲಗಿ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು. ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಸ್ವಾಗತಿಸಿ
ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಎಚ್.ಕೆ.ನಾಗರಾಜ ವಂದಿಸಿದರು, ಪ್ರೊ. ಸಿ.ಎಮ್.ಗರಗದ ನಿರೂಪಿಸಿದರು.
ಪೋಟೊ:
ಕಿ.ನಾ.ವಿ.ವ.ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ೪೯ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ
ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಸ್ಫೂರ್ತಿ ಮಾಸ್ತಿಹೊಳಿ
ಮಾತನಾಡಿದರು. ಕಿ.ನಾ.ವಿ.ವ.ಸಂಘದ ಚೇರಮನ್ನರಾದ ಜಗದೀಶ ವಸ್ತ್ರದ, ನಿರ್ದೇಶಕರುಗಳಾದ ಎನ್.ವಿ.ತಡಕೋಡ,
ಎಸ್.ಎಸ್.ವಳಸಂಗ ಯು.ಡಿ.ಭಾರತಿ, ಜೆ.ಬಿ.ಘಟ್ನಟ್ಟಿ, ಎನ್.ಎಸ್.ಹಿರೇಮಠ, ಡಿ.ಎಲ್.ಪಾಟೀಲ,
ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ ಉಪಸ್ಥಿತರಿದ್ದರು.
ವೈ.ಆರ್.ಪಾಟೀಲ,

Post a Comment

0 Comments