ಕಿತ್ತೂರು ವಿಜಯ.ಸುದ್ದಿ. ಕೆರೆ ದಾಟಲು ವಿದ್ಯಾರ್ಥಿಗಳಿಂದ ಹರಸಾಹಸ. ಕುಲುವಳ್ಳಿ. ನಿಂಗಾಪುರ್ ಗ್ರಾಮಕ್ಕೆ ಶಾಸಕ ಬಾಬಾ ಸಾಹೇಬ್ ಪಾಟೀಲ್

ಕೆರೆ ದಾಟಲು ವಿದ್ಯಾರ್ಥಿಗಳಿಂದ ಹರ ಸಾಹಸ ಚನ್ನಮ್ಮನ ಕಿತ್ತೂರು:-ತಾಲೂಕಿನ ಕುಲವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಂಗಾಪುರ್ ಗ್ರಾಮದ ಸಮೀಪದಲ್ಲಿರುವ ಹುಲಿಕೆರೆಯು ಅತಿ ದೊಡ್ಡ ಕೆರೆ ಎಂದು ಹೆಸರುವಾಸಿಯಾಗಿದೆ ಅಂದಾಜು 93 ಎಕ್ಕರೆ ವಿಸ್ತೀರ್ಣವಾದ ಕೆರೆ ಇದಾಗಿದ್ದು 1208 ಹೆಕ್ಟರ್ ಜಮೀನಿಗೆ ನೀರಾವರಿ ಒದಗಿಸುತ್ತದೆ.
ಅತಿ ಹೆಚ್ಚಿನ ಪ್ರಮಾಣ ಮಳೆ ಆಗಿರುವ ಹಿನ್ನೆಲೆಯಲ್ಲಿ 
ನಿಂಗಾಪೂರ ಗ್ರಾಮವು ಕೆರೆಯ ಪಕ್ಕದಲ್ಲಿ ಇರುವುದರಿಂದ ಗ್ರಾಮದವರೆಗೆ ಈ ಕೆರೆಯ ನೀರು ನಿಂಗಪೂರ ಗ್ರಾಮದ ಸುತ್ತಲೂ ವ್ಯಾಪಿಸಿದೆ ನಿಂಗಾಪೂರ ಗ್ರಾಮದ ರೈತರ ಜಮೀನುಗಳು ಸಹ ನೀರಿನಲ್ಲಿ ಮುಳುಗಡೆಯಾಗಿವೆ. ಕೃಷಿಯನ್ನು ಅವಲಂಬಿಸಿಕೊಂಡ ಸುಮಾರು 25ಕ್ಕೂ ಅಧಿಕ ರೈತ ಕುಟುಂಬಗಳು ಈ ಗ್ರಾಮದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಸಂಪರ್ಕ ಸೇತುವೆ ಇಲ್ಲ ಎನ್ನುವುದೇ ಅವರಿಗಿರುವ ಚಿಂತೆಯಾಗಿದೆ ಮಳೆಗಾಲದಲ್ಲಿ ಕೆರೆ ಉಕ್ಕಿ ಹರಿಯುತ್ತದೆ ಶಾಲಾ ಮಕ್ಕಳು ಕೃಷಿಕರು ಮಹಿಳೆಯರು ಕೆರೆ ದಾಟಲು ಹರಸಾಹಸ ಪಡುತ್ತಾರೆ ಸಂಚಾರಕ್ಕೆ ಅಡಚಣೆ ಇರುತ್ತದೆ ಪರ್ಯಾಯವಾಗಿ ಒಂದು ದಡದಿಂದ ಇನ್ನೊಂದು ದಡಕ್ಕೆ ಹಗ್ಗ ಕಟ್ಟಿಕೊಂಡು ಗಾಳಿ ತುಂಬಿದ ಟ್ಯೂಬ್  ಮೂಲಕ ತಾತ್ಕಾಲಿಕ ದಡ ದಾಟುವ ಸ್ಥಿತಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. 
ಸುದ್ದಿ ತಿಳಿದ ತಕ್ಷಣ ಶಾಸಕ ಬಾಬಾ ಸಾಹೇಬ್ ಪಾಟೀಲ್ ಇವರು ಸ್ಥಳಕ್ಕೆ ಭೇಟಿ ನೀಡಿ ಸದ್ಯದ ಪರಿಸ್ಥಿತಿಯನ್ನು ಅವಲಂಬಿಸಿ ಬೆಳಗಾವಿಯ SDRF ತಂಡದ ಅಧಿಕಾರಿ ಸಮೇತ 11 ಜನರನ್ನು ಕರೆಸಿ 8 ಜನರನ್ನು ಹೊತ್ತೊಯ್ಯುವ ಬೋಟ್ ತರಿಸಿ ಅಲ್ಲಿಯ ಶಾಲಾ ಮಕ್ಕಳು ಹಾಗೂ ರೈತರಿಗೆ ಸದ್ಯದ ಮಟ್ಟಿಗೆ ಉಪಯೋಗವಾಗಲು ಸ್ಥಳೀಯರಿಗೆ  ತರಬೇತಿ ನೀಡುವುದರ ಹಾಗೂ ಮುಂದಿನ ದಿನಮಾನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

Post a Comment

0 Comments