ಕಿತ್ತೂರು ವಿಜಯ ನ್ಯೂಸ್
ಚನ್ನಮ್ಮನ ಕಿತ್ತೂರು: ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್ಲನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಲಕ್ಷ್ಮೀ ಇನಾಮದಾರ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ವೇಳೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದ್ವಿಚಕ್ರ ವಾಹನಕ್ಕೆ ಹಗ್ಗವನ್ನು ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ನಂತರ ರಾಣಿ ಚನ್ನಮ್ಮ ಸರ್ಕಲ್ಲನಿಂದ ತಾಲೂಕಾ ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ತರಳಿ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ ಅವರ ಮೂಲಕ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಅನುಭವಿಸಿದ ಕಾರಣ ರಾಜ್ಯದ ಜನರಿಗೆ ತೊಂದರೆ ಕೊಡಬೇಕು ಅನ್ನುವ ದೃಷ್ಠಿಯಿಂದ ಕಾಂಗ್ರೇಸ್‌ನವರು ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಚುನಾವಣೆಗಳನ್ನು ಇನ್ನೂ ಎರಡ್ಮೂರು ವರ್ಷ ಮಾಡುವ ವಿಚಾರದಲ್ಲಿ ಕಾಂಗ್ರೇಸ್ ಪಕ್ಷ ಇಲ್ಲ ಅದಕ್ಕಾಗಿ ಈಗ ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದು ತಾವು ಕೊಟ್ಟ ಗ್ಯಾರಂಟಿಗಳನ್ನು ನೀಡುವ ಉದ್ದೇಶದಿಂದ ಹಣ ಸಂಗ್ರಹಿಸಲು ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದಾರೆ. ಕೇವಲ ತೈಲ ಬೆಲೆ ಅಲ್ಲದೆ ಮನೆಗಳ ಸುಂಕ, ಸ್ಟ್ಯಾಂಪ್ ಚಾರ್ಜ್, ಹಾಲಿನ ದರ, ಬಾಂಡು ಸೇರಿದಂತೆ ಇನ್ನೂ ಅನೇಕ ದಿನಬಳಿಕೆ ವಸ್ತುಗಳ ಬೆಲೆ ಹೆಚ್ಚು ಮಾಡುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ತಂದಿದ್ದಾರೆ ಎಂದರು.
ಉದ್ಯಮಿ ಲಕ್ಷ್ಮೀ ಇನಾಮದಾರ ಮಾತನಾಡಿ ರಾಜ್ಯ ಸರ್ಕಾರ ಕೊಟ್ಟಂತ ಆಶ್ವಾಸನೆಗಳನ್ನು ಪೂರೈಸಲು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸಿರುವುದು ಖಂಡನೀಯ. ನಿಮಗೆ ಮತವನ್ನು ಕೊಟ್ಟಂತ ಜನರ ಹಿತವನ್ನು ಕಾಪಾಡುವುದು ಸರ್ಕಾರದ ಕೆಲಸ ಎಂದ ಅವರು ಕಾಂಗ್ರೇಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ವೇಳೆ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ ಬೆಲೆ ಏರಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೇಸ್ ಸರ್ಕಾರದ ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ಮುಖಂಡರಾದ ರವಿರಾಜ ಇನಾಮದಾರ, ಕುಮಾರ ಬಿಕ್ಕನ್ನವರ, ದಿನೇಶ ವಳಸಂಗ, ಸುಭಾಷ ರಾವಳ, ಚಂದ್ರು ಬೆಣ್ಣಿ, ಸರಸ್ವತಿ ಹೈಬತ್ತಿ, ಉಮಾದೇವಿ ಬಿಕ್ಕನ್ನವರ, ಪ್ರದೀಪ ದೊಡ್ಡಗೌಡರ, ಕಿರಣ ಪಾಟೀಲ, ಬಸವರಾಜ ಮಾತನವರ, ಮಂಜುನಾಥ ಅಡಬಟ್ಟಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
.jpg)
.jpg)

0 Comments