ಸರ್ಕಾರಿ ಕಟ್ಟಡ ಖಾಸಗೀಕರಣದ ಮಾರ್ಗ ಹಿಡಿದಿರುವುದು ಕಿತ್ತೂರು ಪಟ್ಟಣ ಪಂಚಾಯತಿ ಆಸ್ತಿಯಲ್ಲಿ

     ಕಿತ್ತೂರು ವಿಜಯ ಸುದ್ದಿ 

       ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ನಗರದಲ್ಲಿ ಅತಿಕ್ರಮಣ(ದಾಖಲೆ) ಇಲ್ಲದೇ ಹವಾಲತಿಯ ಮೇಲೆ ಕೆಲ ಸಂಘಟನೆಗಳು ತಮ್ಮ ದರ್ಬಾರ್ ಮಾಡಲು ಇಲಾಖೆಯ ಕಣ್ಣಿಗೆ ಮಣ್ಣೆರಚ್ಚುವ ಕಾರ್ಯಕ್ಕೆ ಕೈ ಹಾಕಿವೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದ್ದೆ.
       ಹೌದು ಕಿತ್ತೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಇದ್ದು. ಅವುಗಳೆಲ್ಲವೂ ಇಂದು ದುರ್ಬಳಕೆಯ ಮಾರ್ಗ ಹಿಡಿದಿರುವುದು ವಿಪರ್ಯಾಸ. ಜೊತೆಗೆ ಅಚ್ಚರಿಯಾದದ್ದು ಸಮಾಜದ ಅಂಕು ಡೊಂಕು ತಿದ್ದ ಬೇಕಾದವರೇ ದಾರಿ ತಪ್ಪಿ ಇಲಾಖೆಯ ಕಣ್ಣಿಗೆ ಮಣ್ಣೆರಚ್ಚುವ ಹವ್ಯಾಸ ಬೆಳೆಸಿಕೊಂಡಿದ್ದು ಮಾತ್ರ ನಾಚ್ಚಿಕೆಗೇಡು.
          ಬಾಯಿ ತೆರೆದರೆ ಮಾರುದ್ದ ಮಾತನಾಡುವ ಬಂಡಲ ಬಡಾಯಿ ವ್ಯಕ್ತಿಗಳಿಗೆ ಗೊತ್ತಿಲ್ಲ ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುದಿಲ್ಲ ಅಂತ. ಆದ್ರೆ ಕಾನೂನು ಯಾರ ಅಪ್ಪನ ಸ್ವತ್ತಲ್ಲ ಅದು ಎಲ್ಲರಿಗೂ ಒಂದೇ ಅದರ ಅಡಿಯಲ್ಲಿ ನಾವುಗಳು ಸಾಗಬೇಕು.
         ಅಷ್ಟಕ್ಕೂ ಕಿತ್ತೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕೆಲ ಸರ್ಕಾರಿ ಕಟ್ಟಡಗಳಲ್ಲಿ ಅತಿಕ್ರಮಣಗಳ ಹೊಗೆ ದಟ್ಟವಾಗಿದ್ದು. ಸರ್ಕಾರಿ ಕಟ್ಟಡಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ವಿಫಲವಾಗಿರುವ ಕಿತ್ತೂರು ಪಟ್ಟಣ ಪಂಚಾಯತಿ ತತಕ್ಷಣವೇ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ನೀಡಿರುವ ದಾಖಲಾತಿಯನ್ನು ಪರಿಶೀಲಿಸಿ ಅತಿಕ್ರಮಣ ಹಾಗೂ ಅನಧಿಕೃತವಾಗಿ ಬಳಕೆಯಾಗುತ್ತಿರುವುದನ್ನು ತಪ್ಪಿಸಬೇಕೆಂಬುದು ನಾಗರಿಕರ ವಾದವಾಗಿದೆ.
      ವಿಪರ್ಯಾಸವೆಂದರೆ ಕೆಲ ಕಟ್ಟಡಗಳ ಅಧಿಕೃತ ಮಾಹಿತಿಯು ಸಹ ಇಲಾಖೆಯಲ್ಲಿ ಕಣ್ಣಾಮುಚ್ಚಾಲೆ ಆಗಿರುವುದರ ಹಿಂದೆ ಕಾನನ ಕೈಗಳ ಕೈವಾಡ ಶಂಕೆ ವ್ಯಕ್ತವಾಗುತ್ತಿದ್ದೆ ಎಂಬುದು ನಾಗರಿಕರ ವಾದ. ಜೊತೆಗೆ ಪಟ್ಟಣ ಪಂಚಾಯತಿಗೂ ಸಹ ತಮ್ಮ ಕಟ್ಟಡದಲ್ಲಿ ಯಾರು ಯಾವುದಕ್ಕಾಗಿ ಯಾರ ಅಪ್ಪಣೆಯ ಮೆರೆಗೆ ಇದ್ದಾರೆ ಅದಕ್ಕಿರುವ ಪರವಾನಿಗೆ ವ್ಯಾಪ್ತಿ ಏನು..? ಎಂಬುದು ತಿಳಿಯದಿರುವುದು ವಿಪರ್ಯಾಸ.
       ಜೊತೆಗೆ ಯಾರು ಯಾವುದಕ್ಕಾಗಿ ಸರ್ಕಾರಿ ಕಟ್ಟಡಗಳನ್ನು ಸಂಘಟನೆಗಳಿಗೆ ನೀಡಿದ್ದಾರೆ. ಜೊತೆಗೆ ನೀಡುವಾಗ ಯಾವ ಷರತ್ತು ವಿಧಿಸಿದ್ದಾರೆ ಎಷ್ಟು ವರ್ಷಕ್ಕೆ ಗುತ್ತಿಗೆ ನೀಡಿದ್ದಾರೆ. ಯಾವ ಉದ್ದೇಶದಿಂದ ಕಟ್ಟಡ ನೀಡಿದ್ದಾರೆ ಎಂಬ ಸ್ಪಷ್ಟ ಮಾಹಿತಿಯು ಸಹ ಇಲಾಖೆಯಲ್ಲಿ ಇಲ್ಲ ಅಂದ ಮೇಲೆ ಅಲ್ಲಿರುವ ದಬ್ಬಾಳಿಕೆಯ ಕಾನನ ಕೈ ಯಾವುದು ಎಂಬುದು ನಿಗೂಢವಾಗಿದೆ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೂ ಕಾರಣವಾಗಿದೆ.
       ಜೊತೆಗೆ ಅಧಿಕಾರಿಗಳ ಕೈವಾಡ ಅಥವಾ ಒಳ ಮಸಳತ್ತು ಏನಾದರೂ...? ಇದೆಯೋ.. ಅಥವಾ ಇಲ್ಲವೋ.. ಎಂಬುದನ್ನು ಸ್ವತಃ ಅಧಿಕಾರದ ಮಾಲಿಕರಾದ ಕಿತ್ತೂರು ಪಟ್ಟಣ ಪಂಚಾಯತ ಅಧಿಕಾರಿಗಳು ಉತ್ತರಿಸಬೇಕು ಜೊತೆಗೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿರುವ ಸರ್ಕಾರಿ ಕಟ್ಟಡಗಳ ಪರವಾನಿಗೆ ಕುರಿತು ಸಾರ್ವಜನಿಕರಿಗೆ ಉತ್ತರ ನೀಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

Post a Comment

0 Comments