ಕಿತ್ತೂರು PWD ನಾಮಪಲಕದಲ್ಲಿ ಐತಿಹಾಸಿಕ ನಗರದ ಹೆಸರಿಗೆ ಅವಮಾನ

ಕಿತ್ತೂರು ವಿಜಯ ಸುದ್ದಿ 

ಗತಕಾಲದ ವೈಭವವನ್ನು ಸಾರಬೇಕಾದ ಹೆಮ್ಮೆಯ ಕಿತ್ತೂರು ಅಧಿಕಾರಿಗಳ ಎಡವಟ್ಟಿಗೆ ನಾಮ ಫಲಕದಲ್ಲೂ ಜೊತೆಗೆ ಬಸ್ ನಿಲ್ದಾಣಕ್ಕೆ  ಸೂಕ್ತ ಪ್ರಗತಿ ಸೂಚಿಸವಲ್ಲಿ ವಿಫಲವಾದ ಘಟನೆ ನಗರದ ಬೀಡಿ ಕ್ರಾಸ ಬಳಿ ನಡೆದಿದೆ.
        ಐತಿಹಾಸಿಕ ನಗರವನ್ನ ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ನಾಮ ಫಲಕ ಅಳವಡಿಸಲಾಗಿದೆ ಆದರೆ ದುರ್ವಿಧಿ ಅಧಿಕಾರಿಗಳ ಸೂಕ್ತ ಗಮನವಿಲ್ಲದೆ ನಾಮಫಲಕದಲ್ಲೂ ಹೆಮ್ಮೆಯ ಕಿತ್ತೂರಿಗೆ ಅವಮಾನಕರ ಘಟನೆಗಳು ಸಂಭವಿಸುತ್ತಿರುವುದು ವಿಪರ್ಯಾಸ ಎಂದು ಸ್ಥಳೀಯ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
        ಜೊತೆಗೆ ಬೀಡಿ ಕ್ರಾಸ್ ಬಳಿ ಇರುವ ಬಸ್ ನಿಲ್ದಾಣ ಸಂಪೂರ್ಣ ಕೊಳಚೆ ಗುಂಡಿಯಾಗಿದ್ದು ಅದು ಬಸ್ ನಿಲ್ದಾಣವೂ ಅಥವಾ ಕಸ ಚೆಲ್ಲುವ ವಿಲೇವಾರಿ ಕಟ್ಟಡವೂ ಎಂಬುದು ನಾಗರಿಕರಿಗೆ ತಿಳಿಯದಿರುವುದು ವಿಪರ್ಯಾಸ.
     ಜೊತೆಗೆ ಕಿತ್ತೂರು ನಗರವನ್ನ ಸುತ್ತುವರಿದಿರುವ ಹಲವಾರು ಗ್ರಾಮಗಳಿಂದ ಆಗಮಿಸುವ ಸಾವಿರಾರು ನಾಗರಿಕರು ತಮ್ಮ ಗ್ರಾಮಗಳಿಗೆ ಸಂಪರ್ಕಿಸಲು ಉಪಯೋಗಿಸುವ ಬಸ್ ತಂಬುದಾನ ಕಸಾಯಿ ಕಾಣೆಯಂತೆ ಕಂಗೊಳಿಸುತ್ತಿದ್ದರು ಅಧಿಕಾರಿಗಳು ಎಸಿ ರೂಂಮಿನಲ್ಲಿ ಗಡದ್ದಾಗಿ ನಿದ್ದೆ ಮಾಡುತ್ತಿದ್ದು ಅಭಿವೃದ್ಧಿ ಕೆಲಸಗಳಿಗಾಗಿ ಕ್ಯಾರೇ ಎನ್ನುತ್ತಿಲ್ಲ.
     ತಕ್ಷಣವೇ ಅಧಿಕಾರಿಗಳು ಆಗುತ್ತಿರುವ ಘಟನೆಗಳಿಗೆ ಹಾಗೂ ಅವಮಾನಗಳಿಗೆ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕ ಸ್ಥಳಗಳಿಗೆ ಸೂಕ್ತ ಅಭಿವೃದ್ಧಿ ಪಥವಾಗಿ ಕೆಲಸಗಳನ್ನು ಸರಿಪಡಿಸುತ್ತಾರೋ ಎಂದು ಕಾದು ನೋಡೋಣ.

Post a Comment

0 Comments