ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್ಲನಲ್ಲಿ ವಿಜಯೋತ್ಸವ

ಕಿತ್ತೂರು ವಿಜಯ ಸಮಾಚಾರ

ಚನ್ನಮ್ಮನ ಕಿತ್ತೂರು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗೆಲುವು ಆಗುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಭರ್ಜರಿ ವಿಜಯೋತ್ಸವ ಆಚರಿಸಿದರು.ಪಟ್ಟಣದ  ರಾಣಿ ಚನ್ನಮ್ಮಾ ವೃತ್ತದಲ್ಲಿ ಜಮಾಯಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು‌ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಘೋಷಣೆ ಕೂಗಿದರು. 

ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಕಾಗೇರಿಯವರ ಭರ್ಜರಿ ಗೆಲುವಿನ ಅಂತರದ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಹಿನ್ನೆಲೆಯಲ್ಲಿ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು.

ಈ ವೇಳೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸುರೇಶ ಮಾರಿಹಾಳ, ಲಕ್ಶ್ಮೀ ಇನಾಂದಾರ, ಬಸವರಾಜ ಪರವಣ್ಣವರ, ರವಿರಾಜ ಇನಾಂದಾರ, ವಿಠ್ಠಲ ಪಾಗಾದ, ಬಸನಗೌಡ ಶಿದ್ರಾಮನಿ, ದಿನೇಶ ವಳಸಂಗ, ಕುಮಾರ ಬಿಕ್ಕನ್ನವರ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು‌ ವಿಜಯೋತ್ಸವದಲ್ಲಿ  ಪಾಲ್ಹೊಂಡಿದ್ದರು.

Post a Comment

0 Comments