ಬೈಲಹೊಂಗಲ ನಗರಕ್ಕೆ ತುಂಬಲಾರದ ನಷ್ಟ ವೈಧ್ಯಕೀಯ ಲೊಕದಲ್ಲಿ ಹೊಸತನಕ್ಕೆ ಹೆಸರಾದ ಡಾ ಚಿದಂಬರ ಕುಲಕರ್ಣಿ ನಿಧನ

ಮೃತ ಡಾ ಚಿದಂಬರ ಕುಲಕರ್ಣಿ ಅವರ ಭಾವಿಚಿತ್ರ

ಕಿತ್ತೂರು ವಿಜಯ

ಬೈಲಹೊಂಗಲ: ವೈಧ್ಯಕೀಯ ಲೊಕದಲ್ಲಿ ಹೊಸತನಕ್ಕೆ ಹೆಸರಾದ ಖ್ಯಾತ ಎಲಬು ಕೀಲು ತಜ್ಞರು, ನಗರದ ಚನ್ನಮ್ಮ ಸಮಾಧಿ ರಸ್ತೆಯಲ್ಲಿ ಇರುವ ಶ್ರೀ ಚಿದಂಬರ ಚೈತನ್ಯ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದ ಬಸವನಗರ ನಾಲ್ಕನೇ ಅಡ್ಡ ರಸ್ತೆಯ ನಿವಾಸಿ ಡಾ ಚಿದಂಬರ ದತ್ತಾತ್ರೇಯ ಕುಲಕರ್ಣಿ (47) ಅವರು ಅನಾರೋಗ್ಯ ಕಾರಣದಿಂದ ಇಂದು ನಿಧನರಾಗಿದ್ದಾರೆ. 

ಇವರ ಅಗಲಿಕೆ ಬೈಲಹೊಂಗಲ ಭಾಗಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ. ಜನಾನುರಾಗಿಯಾಗಿ ನಿಸ್ವಾರ್ಥದಿಂದ ಬಡ ರೋಗಿಗಳ ಸೇವೆ ಸಲ್ಲಿಸಿದ್ದು ಇವರು ಬೈಲಹೊಂಗಲ ನಗರಕ್ಕೆ ಪ್ರಪ್ರಥಮವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಎಲ್ಲ ತರಹದ ರೋಗಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿದ್ದರು. 

ಬೈಲಹೊಂಗಲದ ರೋಟರಿ ಕ್ಲಬ್ ಅಸಿಸ್ಟೆಂಟ್ ಗೌವರ್ನರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ, ಬ್ರಾಹ್ಮಣ ಸಮಾಜದ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್ತಿನ ಗೌರವ ಅಧ್ಯಕ್ಷ, ಬಸವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಅನೇಕ ಸಮಾಜಪರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾನ್ಯ ಜನರ ಪಾಲಿನ ದೇವರಾಗಿದ್ದರು.

ಮೃತರ ಅಂತ್ಯಕ್ರಿಯೆ ಇಂದು ಮದ್ಯಾಹ್ನ 12 ಗಂಟೆಗೆ ಬೆಳಗಾವಿ ರಸ್ತೆಯಲ್ಲಿ ಇರುವ ಪ್ರಶಾಂತಿ ಮುಕ್ತಿಧಾಮ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಮೃತರ ಕುಟುಂಭಸ್ಥರು ತಿಳಿಸಿದ್ದಾರೆ.

ಮೃತರು ತಂದೆ ನಿವೃತ್ತ ಉಪ ತಹಶೀಲ್ದಾರ ದತ್ತಾತ್ರೇಯ ಕುಲಕರ್ಣಿ, ಪತ್ನಿ ಖ್ಯಾತ ಅರವಳಿಕೆ ತಜ್ಞ ಡಾ ರಾಜಶ್ರೀ ಕುಲಕರ್ಣಿ, ಪುತ್ರ ಆರುಷ ಕುಲಕರ್ಣಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅವರ ಅಳಿಯ ಡಾ ಸಾಗರ ಕುಲಕರ್ಣಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಅವರ ಸಂಪರ್ಕ ಸಂಖ್ಯೆ 9164559752

ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಡಾ ಜಗದೀಶ ಹಾರುಗೊಪ್ಪ, ಕಿತ್ತೂರು ವಿಶ್ವ ಹಿಂದು ಪರಿಷತ್ತ ಘಟಕದ ಮುಖ್ಯಸ್ಥ ಸಾಗರ ಕಾಮಕರ ಹಾಗೂ ಕಾರ್ಯಕರ್ತರು, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ, ಉಪಾಧ್ಯಕ್ಷ ಮಹಾಂತೇಶ ಕರಬಸನ್ನವರ, ಖಜಾಂಚಿ ವಿಠಲ ಮಿರಜಕರ ಹಾಗೂ ಸರ್ವ ಸದಸ್ಯರು, ಅಶೋಕ ಸವದತ್ತಿ, ಸೇರಿದಂತೆ ಇನ್ನೂ ಅನೇಕರು ಸಂತಾಪ ಸೂಚಿಸಿದ್ದಾರೆ.



Post a Comment

0 Comments