ಕಿತ್ತೂರು ವಿಜಯ
ದೆಹಲಿ: ಕಳೆದ ಎರಡ್ಮೂರು ತಿಂಗಳುಗಳಿಂದ ನಡೆದ ಪ್ರಜಾಪ್ರಭುತ್ವದಲ್ಲಿ 5 ವರಷಕೊಮ್ಮೆ ಬರುವ ಹಬ್ಬ ಎಂದು ಹೇಳುವ ಲೋಕಸಭಾ ಚುನಾವಣೆ ಕಣದಲ್ಲಿ ಒಟ್ಟು 8390 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಅದರ ಪೈಕಿ 121 ಜನ ಅನಕ್ಷರಸ್ಥರು, 359 ಜನ 5ನೇ ತರಗತಿ ಪಾಸಾದವರು, 647 ಜನ 8ನೇ ತರಗತಿ ತೆರ್ಗಡೆಯಾದವರು,1303 ಜನ ಶಾಲಾ ಶಿಕ್ಷಣ ಪೂರೈಸಿದವರು, 1502 ಜನ ಪದವೀಧರರು,198 ಜನ ಡಾಕ್ಟರೇಟ್ ಪಡೆದಿರುವವರು ಸ್ಪರ್ಧೆಗೆ ಇಳಿದಿದ್ದರು.
ಗೆದ್ದವರಲ್ಲಿ 105 ಅಭ್ಯರ್ಥಿಗಳು ಐದರಿಂದ 12 ತರಗತಿವರಗೆ ಓದಿದ್ದರೆ, ಇತರ 420 ಜನ ಪದವಿ ಅಥವಾ ಉನ್ನತ ಶಿಕ್ಷಣ ಪಡೆದವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮ (ಎಡಿಆರ್) ಸಂಸ್ಥೆ ಮಾಧ್ಯಮಕ್ಕೆ ಮಾಹಿತಿ ನೀಡಿದೆ.
ಮಹಾಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಪ್ರಮಾಣ ಪತ್ರದ ಆಧಾರದಲ್ಲಿ ಈ ಅಂಕಿಅಂಶಗಳನ್ನು ನೀಡಲಾಗಿದ್ದು 17 ಜನ ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಪಡೆದವರಾಗಿದ್ದರೆ ಓರ್ವರು ಕೇವಲ ಓದುಬರಹ ಮಾತ್ರ ತಿಳಿದವರು. ಅನಕ್ಷರಸ್ಥರೆಂದು ಘೋಷಿಸಲಾದ ಎಲ್ಲಾ 121 ಜನ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಗೆಲುವು ಸಾಧಿಸಿದ ಅಭ್ಯರ್ಥಿಗಳಲ್ಲಿ 5 ಜನ 5 ನೇ ತರಗತಿ ಓದಿದ್ದರೆ, 4 ಜನ 8ನೇ ತರಗತಿ ಓದಿದ್ದಾರೆ. 34 ಜನ ಎಸ್.ಎಸ್.ಎಲ್.ಸಿ ಹಾಗೂ 65 ಜನ ಪಿಯುಸಿ, ತೆರ್ಗಡೆಯಾಗಿದ್ದಾರೆ.
ಗುಜರಾತಿನ ಶೇ 65 ಜನ ಅಭ್ಯರ್ಥಿಗಳು, ಮಧ್ಯಪ್ರದೇಶದ ಶೇ 27 ಜನ ಅಭ್ಯರ್ಥಿಗಳು ಹಾಗೂ ಛತ್ತೀಸಗಢದ ಶೇ 9 ಜನ ಅಭ್ಯರ್ಥಿಗಳು ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ. ಶೇ 7 ಅಭ್ಯರ್ಥಿಗಳು ವಕೀಲರು, ಶೇ 4 ಜನ ಅಭ್ಯರ್ಥಿಗಳು ವೈದ್ಯರು ಹಾಗೂ 3 ಜನ ಅಭ್ಯರ್ಥಿಗಳು ಮಹಿಳಾ ಸಂಸದರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


0 Comments