ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳದಂತೆ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು; ಶಾಸಕ ಬಾಬಾಸಾಹೇಬ ಪಾಟೀಲ

ಕಿತ್ತೂರು ವಿಜಯ 
ಚನ್ನಮ್ಮ ಕಿತ್ತೂರು : ಮಳೆಗಾಲ ಆರಂಭಗೊಂಡಿದ್ದು ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಗೊಳ್ಳದಂತೆ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಹಾಗೂ ನೀರು ಸರಬರಾಜು ಮಾಡುವ ಪೈಪ್‌ಗಳು ಹಾಳಾಗಿದ್ದರೇ ಕೂಡಲೇ ದುರಸ್ತಿಗೊಳಿಸಿ ಶುದ್ಧ ನೀರನ್ನೇ ಪೂರೈಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಪಟ್ಟಣದಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದ್ದು, ಅದನ್ನು ಪಿಡಿಒ, ವಾಟರಮನ್ ಸೇರಿದಂತೆ ಇಡೀ ಗ್ರಾಪಂ ಸಿಬ್ಬಂದಿಯು ನಿರ್ವಹಿಸಬೇಕು. ಪೈಪ್ ಲೈನ್‌ಗಳು ಹಾಳಾಗಿದ್ದರೇ. ಒಡೆದಿದ್ದರೇ, ಮಳೆ ನೀರು ಮಿಶ್ರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ತಕ್ಷಣವೇ ಅವುಗಳನ್ನು ಸರಿಪಡಿಸುವ ಮೂಲಕ ಸಂಭವನೀಯ ಅಪಾಯವನ್ನು ತಡೆಗಟ್ಟಬೇಕು ಎಂದರು.
ಕಿತ್ತೂರು ತಾಪಂ ಕಾರ್ಯನಿರ್ವಾಹಕರ ಅಧಿಕಾರಿ ಕಿರಣ ಘೋರ್ಪಡೆ ಹಾಗೂ ಬೈಲಹೊಂಗಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಅವರು ಮಾತನಾಡಿ, ಗ್ರಾಮಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ವಾಟರಮನ್‌ಗಳು ಆಗಾಗ ಶುಚಿಗೊಳಿಸುತ್ತಿರಬೇಕು. ಅಲ್ಲದೇ, ಇದೀಗ ವಿತರಿಸಿರುವ ಎಫ್‌ಟಿಕೆ ಕಿಟ್‌ಗಳ ಮೂಲಕ ನೀರು ಪರೀಕ್ಷಿಸಿ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ, ಎಲ್ಲ ಗ್ರಾಪಂಗಳಿಗೆ ಎಫ್‌ಟಿಕೆ ಕಿಟ್ ಮೂಲಕ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಲ್ಲದೇ, ಕುಡಿಯುವ ನೀರಿನ ಜಾಗೃತಿ ಕುರಿತಾದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಸುರೇಶ ನಾಗೋಜಿ, ಲಿಂಗರಾಜ ಹಲಕರ್ಣಿಮಠ, ಸಹಾಯಕ ಲೆಕ್ಕಾಧಿಕಾರಿ ಈರಣ್ಣ ಕಮ್ಮಾರ, ಟಿಪಿಒ ಸಿ.ಎಂ.ಚನ್ನಬಸನಗೌಡರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ. ತಾ.ಪಂ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Post a Comment

0 Comments