ಕಿತ್ತೂರು ವಿಜಯ ನ್ಯೂಸ್
ಚನ್ನಮ್ಮನ ಕಿತ್ತೂರು: ಸಮಿಪದ ದೊಡವಾಡ ಗ್ರಾಮದ ವೀರಭದ್ರಗೌಡ ಪಾಟೀಲ್ ಅವರಿಗೆ ಯುರೋಪ್ ಚೆಕ್ ಗಣರಾಜ್ಯದ ಪರ್ಡುಬಿಸ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಚೆಕ್ ಗಣರಾಜ್ಯದ ಪ್ರೊ|| ಸ್ವಾಟೋಪ್ಲುಕ್ ಜೆಮೆನ್ ಅವರ ಮಾರ್ಗದರ್ಶನದಲ್ಲಿ ಕೆಮಿಕಲ್ ಟೆಕ್ನಾಲಜಿಯ Energetic Materials and their application in rocket propellants" ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಸ್ತುತ ಯುರೋಪನ ಚೆಕ್ ರಿಪಬ್ಲಿಕ್ ರಾಷ್ಟ್ರದ ಯುನಿವರ್ಸಿಟಿ ಆಫ್ ಪರ್ಡುಬಿಸ್ ನಲ್ಲಿ 2020 ರಿಂದ ಕೆಮಿಕಲ್ ಟೆಕ್ನಾಲಜಿ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವೀರಭದ್ರಗೌಡ ಪಾಟೀಲ ದೊಡ್ಡವಾಡ ಗ್ರಾಮದಲ್ಲಿ ಬಡತನದಲ್ಲಿ ಬೆಳೆದು ಬಂದ ಪ್ರತಿಭಾವಂತ ವಿದ್ಯಾರ್ಥಿ.
ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿ, ಪಿಯುಸಿ ಸೈನ್ಸ್ ನ ನಂತರ 2013 ರಲ್ಲಿ ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಬಿ ಎಸ್ ಸಿ ಪದವಿಯನ್ನು ಪೂರ್ಣಗೊಳಿಸಿದರು.
2015 ರಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪ್ರೊಫೆಸರ್ ಎಸ್ ಟಿ ನಂದಿ ಬೇವೂರ ಅವರ ಮಾರ್ಗದರ್ಶನದಲ್ಲಿ ಭೌತಿಕ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ M'SC in physical chemistry ಪೂರ್ಣಗೊಳಿಸಿದರು. ನಂತರ ಡಾ. ಕೆ ಬಿ ಸೋನಾವಾನೆ ಅವರ ಮಾರ್ಗದರ್ಶನದಲ್ಲಿ ಪುಣೆಯ ಸಿ ಎಸ್ ಸಿ ಆರ್ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಿಂದ ಬೇಸಿಗೆ ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸಿದರು.
ಪ್ರತಿಷ್ಠಿತ ಸಿಪ್ಲಾ ಲಿಮಿಟೆಡ್ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಸಕ್ರಿಯ ಔಷಧಿ ಘಟಕದಲ್ಲಿ ಗುಣಮಟ್ಟದ ಭರವಸೆ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಇವರು 2018 ರಲ್ಲಿ ಪ್ರೊ ಎ ವೆಂಕಟರಾಮನ್ ಅವರ ಮಾರ್ಗದರ್ಶನದಲ್ಲಿ ಜಿ ಯು ಜಿ ಪೀ ಇ ಎಲ್ ಯೋಜನೆ ಪ್ರೀಮಿಯಂ ಎಕ್ಸ್ ಪೋಸಿವ್ಸ್ ಲಿಮಿಟೆಡ್ ಗೆ ಸೇರಿಸಿದರು.
ನಂತರ ಯುರೋಪಿನ ಚೆಕ್ ರಿಪಬ್ಲಿಕ್ ನಲ್ಲಿ "ಶಕ್ತಿಯುತ ವಸ್ತುಗಳ ಸಂಸ್ಥೆ " ರಾಸಾಯನಿಕ ತಂತ್ರಜ್ಞಾನದ ಬೋಧಕ ವರ್ಗದ ಪರ್ಡುಬಿಸ್ ವಿಶ್ವ ವಿದ್ಯಾಲಯದಿಂದ ಪ್ರೊ|| ಸ್ವಾಟೋಪ್ಲುಕ್ ಜೆಮೆನ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಿ ಎಚ್ ಡಿ ಯನ್ನು ಅಧ್ಯಯನ ಮಾಡಿದರು.
ಇವರು 50 ಕ್ಕೂ ಹೆಚ್ಚು ಜರ್ನಲ್ ಮತ್ತು ಕಾನ್ಪರೆನ್ಸ್ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ 550 ಕ್ಕೂ ಹೆಚ್ಚು ಉಲ್ಲೇಖಗಳನ್ನು ಹೊಂದಿದ ಇವರು ವಿವಿಧ ಸಮ್ಮೇಳನಗಳಲ್ಲಿ ಮತ್ತು ಆಹ್ವಾನಿತ ಉಪನ್ಯಾಸಗಳಲ್ಲಿ ಭಾಷಣಗಳನ್ನು ಮಾಡಿದ್ದಾರೆ.
"ಗುರಿಯ ಕಡೆಗೆ ಶೃದ್ಧೆ ಮತ್ತು ಸಮರ್ಪಣೆ ಇದ್ದರೆ ಬಡತನ ಎಂದಿಗೂ ಅಡ್ಡ ಬರುವುದಿಲ್ಲ, ಸತತ ಶ್ರಮವಹಿಸಿ ಅಧ್ಯಯನ ಮಾಡಿದರೆ ಅವಕಾಶಗಳನ್ನು ಭಗವಂತ ಸೃಷ್ಟಿಸುತ್ತಾನೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಛಲ ಬಿಡದೆ ಗುರಿಯತ್ತ ಸಾಗಿದಾಗ ನಾವು ಸಾಧನೆಗೆ ಹತ್ತಿರವಾಗುತ್ತೇವೆ, ನನಗೆ ಮಾರ್ಗದರ್ಶನ ಮಾಡಿದ ನನ್ನೆಲ್ಲ ಗುರುಗಳಿಗೆ ನಾನು ಅನಂತ ಧನ್ಯವಾದಗಳು" ಡಾ ವೀರಭದ್ರಗೌಡ ಪಾಟೀಲ ದೊಡವಾಡ
0 Comments