ಕಾಡು ಬೆಳೆಸಿ ನಾಡು ಉಳಿಸಿ ಆಂದೋಲನ ಪ್ರಾರಂಭವಾಗಬೇಕಿದೆ : ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು
ಚನ್ನಮ್ಮನ ಕಿತ್ತೂರು : ಹವಾಮಾನದ ವೈಪರಿತ್ಯಕ್ಕೆ ವಾಯು ಮಾಲಿನ್ಯ ಕಾರಣವಾಗಿದ್ದು ಸಸಿಗಳನ್ನು ನೆಡುವ ಮೂಲಕ ಕಾಡು ಬೆಳೆಸಿ ನಾಡು ಉಳಿಸಿ ಆಂದೋಲನ ಪ್ರಾರಂಭವಾಗಬೇಕಿದೆ ಎಂದು ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ರವಿವಾರ ಸ್ಥಳೀಯ ಜಂಗಮ ಯುವ ವೇದಿಕೆ ಹಾಗೂ ಅರಣ್ಯ ಇಲಾಖೆಯ ಸಯುಕ್ತ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಅಂಗವಾಗಿ ಐತಿಹಾಸಿಕ ಚೌಕಿಮಠದ ಪಕ್ಕದಲ್ಲಿರು ರುದ್ರಭೂಮಿಯಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಆಮ್ಲಜನಕದ ಕೊರತೆಯಿಂದ ಆಗುವ ಅನಾಹುತಗಳನ್ನು ಕರೋನ ಬಂದ ಸಮಯದಲ್ಲಿ ಎಲ್ಲರೂ ಕಣ್ಣಾರೆ ಕಂಡುಕೊಂಡಿದ್ದಾರೆ.
ಇಷ್ಟೆಲ್ಲಾ ಅನಾಹುತಗಳು ನಡೆದರು ಸಾರ್ವಜನಿಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗಿಡ ಮರಗಳನ್ನು ರಕ್ಷಿಸಿದರೆ ಮಾತ್ರ ನಮಗೆ ಆಮ್ಲಜನಕ ದೊರೆಯುತ್ತದೆ. ಹಾಗೆಯೇ ಗೀಡಗಳನ್ನು ನಾವು ರಕ್ಷಿಸಿದಾಗ ಮಾತ್ರ ಗಿಡಗಳು ನಮ್ಮನ್ನು ರಕ್ಷಿಸುತ್ತವೆ ಎಂದು ಹೇಳಿದರು.
ಪ್ರತಿ ಗ್ರಾಮಗಳಲ್ಲಿನ ಶಾಲಾ ಆವರಣಗಳಲ್ಲಿ ಹಾಗೂ ಖಾಲಿ ಇರುವ ಸರ್ಕಾರಿ ಸ್ಥಳಗಳಲ್ಲಿ ಸಸ್ಯಗಳನ್ನು ನೆಡುವ ಕೆಲಸವಾಗಬೇಕು ಮತ್ತು ನೆಟ್ಟ ಗಿಡಗಳನ್ನು ರಕ್ಷಿಸುವ ಕೆಲಸವಾಗಬೇಕು. ಗಿಡಗಳನ್ನು ರಕ್ಷಿಸಿದರೆ ಜನಜೀವನಕ್ಕೆ ಉತ್ತಮ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗಬೇಕು ಎಂದು ಅವರು ಹೇಳಿದರು.
ನಂತರ ಜಂಗಮ ಯುವ ವೇದಿಕೆಯ ಮುಖಂಡ ಪ್ರಭು ಪಾಟೀಲ್ ಮಾತನಾಡಿ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಪಾಲನೆ ಮಾಡುವುದು ಮುಖ್ಯ. ಜೊತೆಗೆ ಗಿಡಗಳನ್ನು ಹೆಚ್ಚಾಗಿ ಬೆಳಸುವ ಮೂಲಕ ಆಮ್ಲಜನಕವನ್ನು ನಾವು ಪಡೆಯಬೇಕು ಹಾಗೇ ಮರಗಳನ್ನು ಹೆಚ್ಚಾಗಿ ಬೆಳೆಸುವ ಅಗತ್ಯ ಕೂಡಾ ಇದೆ ಎಂದು ಹೇಳಿದವರು
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಂಜು ಮಗದುಂಮ್ ಹಾಗೂ ಸಿಬ್ಬಂದಿ ವರ್ಗ, ಜಂಗಮ ಯುವ ವೇದಿಕೆ ಅಧ್ಯಕ್ಷ ವೀರೇಶ್ ಹಿರೇಮಠ ಉಪಾಧ್ಯಕ್ಷ ಮಂಜುನಾಥ ಶಿವಳ್ಳಿಮಠ ಖಜಾಂಚಿ ಆನಂದ ನರೇಂದ್ರ ಮಠ ಸದಸ್ಯರಾದ ಶಿವಯೋಗಿ ಹಿರೇಮಠ ಅಜ್ಜಪ್ಪ ಹಿರೇಮಠ , ಸಂಗಯ್ಯ ಹಿರೇಮಠ, ಗಂಗಯ್ಯ ಗುರುವೈನವರ, ಶಿವರುದ್ರಯ್ಯ ಕಟ್ಟಿಮಠ, ಆನಂದ ವಸ್ತ್ರದ, ಬಸಯ್ಯ ಪೂಜಾರ, ಈರಣ್ಣ ಹಿರೇಮಠ, ಸಂತೋಷ ಕಲ್ಮಠ, ಕಲ್ಲಯ್ಯ ಪತ್ರಿಮಠ, ಗುರು ಹಿರೇಮಠ, ರಾಜು ಆಸಂಗಿಮಠ, ಅಪ್ಪೇಶ ಹಿರೇಮಠ, ಕಾರ್ತಿಕ್ ಹಿರೇಮಠ, ವಿಜಯ ಬೈಲೂರಮಠ, ಅಪ್ಪಯ್ಯ ವಸ್ತ್ರದ, ಹಿರಿಯರಾದ ಎಸ್ ಬಿ ಹಿರೇಮಠ ಸುರೇಶ್ ಮುರುಡಿಮಠ ಹಾಗೂ ಸಂಘದ ಎಲ್ಲ ಸದಸ್ಯರು ಹಾಗೂ ಸಮಸ್ತ ಜಂಗಮ ಬಂಧುಗಳು ಜೊತೆಗೆ ಸಾರ್ವಜನಿಕರು ಉಪಸ್ಥಿತರಿದ್ದರು.
0 Comments