ಕಿತ್ತೂರು ವಿಜಯ ಸುದ್ದಿ. ಫಿಲಂ ಸ್ಟಾರ್ ದರ್ಶನ್&. ಪವಿತ್ರ ಗೌಡ ಕೂಡ ನನ್ನ ಮಗನ ರೀತಿಯಾಗಿಯೇ ಸಾಯಬೇಕು ಎಂದು ರೇಣುಕಾ ಸ್ವಾಮಿ ಮತ್ತು ಪೋಷಕರು ಆಕ್ರೋಶ

ಕಿತ್ತೂರು ವಿಜಯ ಸುದ್ದಿ ದರ್ಶನ್, ಪವಿತ್ರ ಗೌಡ ಕೂಡ ನನ್ನ ಮಗನ ರೀತಿಯೇ ಸಾಯಬೇಕು: ದರ್ಶನ್ ಗ್ಯಾಂಗ್ ವಿರುದ್ಧ
 ರೇಣುಕಾಸ್ವಾಮಿ ಪೋಷಕರ ಆಕ್ರೋಶ
ದರ್ಶನ್ & ಪವಿತ್ರಾ ಗೌಡ ವಿರುದ್ಧ ಕೇಳಿಬಂದ ಕೊಲೆ ಆರೋಪ ಈಗ ಭಾರಿ ಸಂಚಲನ ಕೂಡ ಸೃಷ್ಟಿ ಮಾಡಿದೆ. ಈವರೆಗೆ ಇತಿಹಾಸದಲ್ಲೇ ಯಾವುದೇ ದೊಡ್ಡ ಸಿನಿಮಾ ನಟ, ದರ್ಶನ್ ಅವರ ರೀತಿ ಕೊಲೆ ಆರೋಪ ಎದುರಿಸಿರಲಿಲ್ಲ ಎನ್ನಬಹುದು. ಆದ್ರೆ ಇದೀಗ ನಟ ದರ್ಶನ್ ವಿರುದ್ಧ ಕೇಳಿ ಬಂದಿರುವ ಭೀಕರ ಕೊಲೆ ಆರೋಪ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಹಾಗೇ ಕೊಲೆ ಆಗಿರುವ ರೇಣುಕಾಸ್ವಾಮಿ ಪೋಷಕರು ಏನು ಹೇಳುತ್ತಿದ್ದಾರೆ ಗೊತ್ತಾ? 
ಕೊಲೆ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಸದ್ದು ಮಾಡಿತ್ತು. ದರ್ಶನ್ ಹಾಗು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಕೆಲವು ತಿಂಗಳ ಹಿಂದಷ್ಟೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ ಅವ್ರು, ಪವಿತ್ರ ಗೌಡಳ ಬಗ್ಗೆ ಕೆಟ್ಟದಾಗಿ ಕಮೆಂಟ್‌ಗಳನ್ನ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅದೇ ರೇಣುಕಾಸ್ವಾಮಿ ಕೊಲೆ ಆಗಿದ್ದು, ಖುದ್ದಾಗಿ ನಟ ದರ್ಶನ್ ಈ ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ಈ ಘಟನೆ ಬಗ್ಗೆ ಮೃತ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ ಏನು ಹೇಳಿದ್ರು? 
ದರ್ಶನ್ & ಪವಿತ್ರ ಗೌಡ ಅವರಿಂದಲೇ ನನ್ನ ಮಗನ ಸಾವು ಆಗಿದೆ, ಹೀಗಾಗಿ ನನ್ನ ಮಗನಂತೆ ದರ್ಶನ್ & ಪವಿತ್ರ ಗೌಡ ಕೂಡ ಸಾಯಬೇಕು ಎಂದಿದ್ದಾರೆ ಮೃತ ರೇಣುಕಾಸ್ವಾಮಿ ಪೋಷಕರು. ನಿನ್ನೆ ಪೂರ್ತಿ ಬಿಕ್ಕಿ, ಬಿಕ್ಕಿ ಅತ್ತಿರುವ ರೇಣುಕಾಸ್ವಾಮಿ ಅವರ ಪೋಷಕರು & ಪತ್ನಿ, ದರ್ಶನ್‌ನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು. ಅದ್ರಲ್ಲೂ ಯಾವ ರೀತಿ ನನ್ನ ಮಗ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆಯೋ, ಅದೇ ರೀತಿ ದರ್ಶನ್‌ಗೆ ಕೂಡ ಶಿಕ್ಷೆ ಕೊಡಿ. ಹಾಗೇ ಪವಿತ್ರಾ ಗೌಡಗೆ ಕೂಡ ಇದೇ ರೀತಿ ಕಠಿಣ ಶಿಕ್ಷೆ ನೀಡಬೇಕು ಅಂತಿದ್ದಾರೆ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ.
ನಟ ದರ್ಶನ್ ವಿರುದ್ಧ ಇದೀಗ ಕೇಳಿಬಂದಿರುವುದು ಕೊಲೆ ಆರೋಪ ಆಗಿದೆ. ಈ ಕಾರಣಕ್ಕೆ ದರ್ಶನ್ ಸುಲಭವಾಗಿ ಜಾಮೀನು ಪಡೆಯುವುದು ಅಸಾಧ್ಯ. ಮತ್ತೊಂದ್ಕಡೆ ಈಗ ಜಾಮೀನಿಗೆ ಪ್ರಯತ್ನ ಶುರು ಮಾಡಿದರೂ ಮುಂದಿನ 3 ತಿಂಗಳ ಕಾಲ ಜಾಮೀನು ಸಿಗುವುದೇ ಅನುಮಾನ ಅಂತಿದ್ದಾರೆ ಕಾನೂನು ತಜ್ಞರು. ಹೀಗಾಗಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಮತ್ತೊಂದು ಕಡೆ, ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವುದು ಕೂಡ ಬಹುತೇಕ ಪಕ್ಕಾ ಅಂತಿದ್ದಾರೆ ಅವರ ವಿರೋಧಿಗಳು ಈ ನಡುವೆ ಮೃತ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ, ಪತ್ನಿ ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗೇ ರೇಣುಕಾಸ್ವಾಮಿ ಅವರ ಪತ್ನಿ ಈಗ ಗರ್ಭಿಣಿ ಆಗಿದ್ದಾರೆ.

Post a Comment

0 Comments