ಕಿತ್ತೂರು ವಿಜಯ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಪಟ್ಟಣದ ಆರ್ಎಂಪಿ ವೈದ್ಯ ಅಬ್ದಲ್ ಗಫಾರಖಾನ್ ಲಾಡಖಾನ ಹಾಗೂ ಚಂದನ ಸುಬೇದಾರ ಹಾಗೂ ಮೂರು ಜನ ಸೇರಿ ಮಕ್ಕಳ ಮಾರಾಟ ಮಾಡುವ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ.
ಹೌದು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಆರ್ಎಂಪಿ ವೈದ್ಯ ಡಾ ಅಬ್ದಲ್ ಗಫಾರಖಾನ್ ಲಾಡಖಾನ ಮತ್ತು ಡಾ ಚಂದನ ಸುಬೇದಾರ ಹಾಗೂ ಮೂರು ಜನ ಸೇರಿ ಮಕ್ಕಳ ಮಾರಾಟ ಮಾಡುವ ಜಾಲವೊಂದನ್ನು ರವಿವಾರ ಬಂಧಿಸಿದ್ದಾರೆ. ಈ ಆರೋಪಿಗಳು ಮದುವೆಗೂ ಮುನ್ನ ಹಾಗೂ ಮದುವೆಯಾದ ಗರ್ಭಿಣಿಯರನ್ನ ಅಬಾರ್ಷನ ಮಾಡಿಸಬೇಕು ಅನ್ನುವರನ್ನು ಟಾರ್ಗೆಟ್ ಮಾಡಿ ಏಳೆಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ನಂತರ ಆ ಮಗುವನ್ನು ನಾವೇ ರಕ್ಷಣೆ ಮಾಡಿ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡುವ ಮೂಲಕ ಹಣ ಮಾಡುತ್ತಿದ್ದ ಜಾಲೋಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆಯ ವಿವರ: ಕಳೆದ ಎರಡು ದಶಕಗಳಿಂದ ಡಾ.ಅಬ್ದುಲ್ ಗಫಾರ್ ಲಾಡಖಾನ್ ಎಂಬ ಆರ್‌ಎಮ್‌ಪಿ ವೈದ್ಯ ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಹೆಣ್ಮುಕ್ಕಳ ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳಿಲ್ಲದವರಿಗೆ ಲಕ್ಷಾಂತರ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ಪೊಲೀಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಈ ಜಾಲವನ್ನು ಭೇದಿಸಲು ಮೊದಲು ಮಕ್ಕಳ ಮಾರಾಟ ಜಾಲದ ಮಹಾದೇವಿ ಜೈನ್ಗೆ ನಮಗೊಂದು ಮಗು ಬೇಕು ಎಂದು ಸಂಪರ್ಕಿಸಿದ್ದರು. ಈ ವೇಳೆ ಆರೋಪಿ ಮಹಾದೇವಿ ಮಗುವಿನ ವ್ಯವಹಾರ ಕುದುರಿಸಿ 1.40 ಲಕ್ಷ ರೂಪಾಯಿಗೆ ಮಗು ನೀಡುವುದಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಇದಕ್ಕೆ ಒಪ್ಪಿ ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಅಧಿಕಾರಿಗಳು ತಿಳಿಸಿದ್ದರು. ಈ ವೇಳೆ ಮಗುವಿನ ಜೊತೆಗೆ ಬಂದ ಮಹಾದೇವಿ ಮತ್ತು ಅವರ ಗ್ಯಾಂಗ್ ತಗಲಾಕ್ಕೊಂಡಿದೆ.
ಕಿಂಗ್ ಪಿನ್ ಆರ್‌ಎಮ್‌ಪಿ ವೈದ್ಯ ಡಾ.ಅಬ್ದುಲ್ ಗಫಾರ್ ಲಾಡಖಾನ್ ನಿಂದ ಅರವತ್ತು ಸಾವಿರಕ್ಕೆ ಮಗು ಖರೀದಿ ಮಾಡಿದ್ದ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಬಳಿಕ ರೂ 1..40 ಲಕ್ಷ ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಜೈಲು ಸೇರಿದ್ದಾರೆ.
ಪ್ರೀತಿ ಪವಿತ್ರ ಅಂತಾರೆ ಅಂತಹ ಪ್ರೀತಿಯಲ್ಲಿ ಬಿದ್ದು ಎಡವಿ ಜೈಲು ಸೇರಿದ ಪವಿತ್ರಾ ಮತ್ತು ಪ್ರವೀಣ್ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕ ಬೆಳಿಸಿ ಪವಿತ್ರಾ ಏಳು ತಿಂಗಳು ಗರ್ಭಿಣಿಯಾಗುತ್ತಾಳೆ. ಮನೆಯಲ್ಲಿ ಗೊತ್ತಾದ್ರೆ ಸಮಸ್ಯೆ ಆಗುತ್ತೆ ಅಂತಾ ಕಿತ್ತೂರಿನಲ್ಲಿರುವ ಆರ್‌ಎಮ್‌ಪಿ ವೈದ್ಯ ಡಾ.ಅಬ್ದುಲ್ ಗಫಾರ್ ಲಾಡಖಾನ್ ಬಳಿ ಈ ಜೋಡಿ ಹೋಗುತ್ತೆ. ಈ ವೇಳೆ ಇಪ್ಪತ್ತು ಸಾವಿರ ಹಣ ಪಡೆದು ಆಪರಷನ್ ಮಾಡಿ ವೈದ್ಯ ಅಬ್ದುಲ್ ಮಗು ತೆಗೆದು ನಂತರ ಅರವತ್ತು ಸಾವಿರಕ್ಕೆ ಮಹಾದೇವಿಗೆ ಮಾರಾಟ ಮಾಡಿದ್ದನು.
ಈ ಕುರಿತು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ಸಂಬಂಧ ಕಿಂಗ್ ಪಿನ್ ಕಿತ್ತೂರಿನ ಆರ್‌ಎಮ್‌ಪಿ ವೈದ್ಯ ಡಾ.ಅಬ್ದುಲ್ ಗಫಾರ್ ಲಾಡಖಾನ್, ಡಾ ಚಂದನ ಸುಬೇದಾರ್, ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಪವಿತ್ರಾ ಮತ್ತು ಪ್ರವೀಣ್ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಆರ್‌ಎಮ್‌ಪಿ ವೈದ್ಯ ಡಾ.ಅಬ್ದುಲ್ ಗಫಾರ್ ಲಾಡಖಾನ್ ಇವನು ಕಳೆದ ಎರಡು ದಶಕಗಳಿಂದ
ಭ್ರೂಣಹತ್ಯೆ, ಶಿಶು ಮಾರಾಟ ಸೇರಿದಂತೆ ಇನ್ನೂ ಅನೇಕ ಅಕ್ರಮ ಕಾರ್ಯಗಳನ್ನು ಮಾಡುತ್ತಿದ್ದನು. ಈ ವಿಷಯದ ಕುರಿತು
ಅನೇಕ ಮೇಲಾಧಿಕಾರಿಗಳ ಗಮನಕ್ಕೆ ಇದ್ದರು ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿದ್ದರು. ಕೆಲವರು ಆತನ ಜೊತೆ ಕೈ
ಮಿಲಾಯಿಸಿದ್ದರು ಎಂಬ ಗಾಳಿ ಸುದ್ದಿ ನಮ್ಮ ಕಿವಿಗಳಿಗೆ ಬಿದ್ದಿತ್ತು. ಅಮಾನ್ ಹೊಂಗಲ, ಮುಸ್ಲಿಂ ಮುಖಂಡರು ಕಿತ್ತೂರು


0 Comments