ಐತಿಹಾಸಿ ಚನ್ನಮ್ಮನ ಕಿತ್ತೂರು ನಾಡಿನ ನಾಮದೇವ ಸಿಂಪಿ ಸಮಾಜದ ಮೂವರಿಗೆ ರಾಜ್ಯ ಮಟ್ಟದ ಪ್ರಶಸ್ತಿಐತಿಹಾಸಿ ಚನ್ನಮ್ಮನ ಕಿತ್ತೂರು ನಾಡಿನ ನಾಮದೇವ ಸಿಂಪಿ ಸಮಾಜದ ಮೂವರಿಗೆ ರಾಜ್ಯ ಮಟ್ಟದ ಪ್ರಶಸ್ತಿ

 

ಐತಿಹಾಸಿ ಚನ್ನಮ್ಮನ ಕಿತ್ತೂರು ನಾಡಿನ  ಮೂವರಿಗೆ ರಾಜ್ಯ ಮಟ್ಟದ ಪ್ರಶಸ್ತಿ


ಕಿತ್ತೂರು ವಿಜಯ

ನ್ನಮ್ಮನ ಕಿತ್ತೂರು: ಕರ್ನಾಟಕ ರಾಜ್ಯ ಪತ್ರಕರ್ತರ ಧ್ವನಿ ಸಂಘ ರಿ ವತಿಯಿಂದ ಪ್ರತಿವರ್ಷ ಪದ್ದತಿಯಂತೆ ಕೊಡಮಾಡುವ 2024 ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಸಾಮಾಜಿಕ ಸೇವಾ ರತ್ನ” ಪ್ರಶಸ್ತಿಯನ್ನು ಸಮಾಜ ಸೇವಕಿ ರಂಜನಾ ರವಿ ಬುಲಬುಲೆ ಮತ್ತು ಕೋರ್ಟ ಉದ್ಯೋಗಿ ಉತ್ತಮ ಶಿವಾನಂದ ಮಾಳೋದೆ ಹಾಗೂ “ಕರ್ನಾಟಕ ಮಾಧ್ಯಮ ಸೇವಾ ರತ್ನ” ಪ್ರಶಸ್ತಿಯನ್ನು  ಸಯುಂಕ್ತ  ಕರ್ನಾಟಕ  ದಿನಪತ್ರಿಕೆ  ಕಿತ್ತೂರು ತಾಲೂಕಾ  ವರದಿಗಾರ ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಖಜಾಂಚಿ ವಿಠ್ಠಲ ಮಿರಜಕರ ಇವರುಗಳು ಪಡೆದಿದ್ದಾರೆ.

ರಂಜನಾ ಬುಲಬುಲೆ

ರಂಜನಾ ಬುಲಬುಲೆ: ಕಳೆದ ಒಂದ ದಶಕದಿಂದ ವಿವಿಧ ಸಮಾಜಪರ ಕೆಲಸಗಳಲ್ಲಿ ತೊಡಗಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆಯನ್ನು ಮಾಡುತ್ತಿರುವ ರಂಜನಾ ಬುಲುಬುಲೆ ಅವರು ಪ್ರಚಾರ ಬಯಸದೇ ಎಲೆ ಮರೆ ಕಾಯಿಯಂತೆ ಸದಾ ಮಹಿಳಾ ಪರ ಹೋರಾಟ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕಾಗಿ ಹಗಲಿರಳು ಶ್ರಮ ವಹಿಸಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಐತಿಹಾಸಿಕ ಕಿತ್ತೂರು ಪಟ್ಟಣ ಹಾಗೂ ತಾಲೂಕಿನ ಶರಣೆಯರನ್ನು ತಮ್ಮ ಜೊತೆ ಕರೆದುಕೊಂಡು “ಕದಳಿ ಮಹಿಳಾ ವೇದಿಕೆ” ಕಟ್ಟಿ ಇದರ ಮೂಲಕ ಬಸವಾದಿ ಶರಣರ ತತ್ವವನ್ನು ಪ್ರಸಾರ ಮಾಡುವ ಮೂಲಕ ತಮ್ಮದೆಯಾದ ಚಾಪೂ ಮೂಡಿಸಿದ್ದಾರೆ. ಅದಲ್ಲದೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಸದಸ್ಯರಾಗಿ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಪರಿಸರ ಜಾಗೃತಿ ಆಂದೋಲನ ಮತ್ತು ಸಂರಕ್ಷಣೆ, ಮಹಿಳಾ ಜಾಗೃತಿ ಕಾರ್ಯಕ್ರಮ, ಪ್ರತಿ ತಿಂಗಳು ನಡೆಯುವ ಶಿವಾನುಭವ ಕಾರ್ಯಕ್ರಮದಲ್ಲಿ ವಚನ ಗಾಯನ ಮೊದಲಾದ ಸಂಗೀತ ಸೇವೆ, ರಕ್ತದಾನ ಶಿಬಿರ ಮೊದಲಾದ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವೂ ತೊಡಗಿಕೊಂಡಿದ್ದಾರೆ. 

ರಾಣಿ ಚನ್ನಮ್ಮನ ವಿಜಯೋತ್ಸವದ ಸವಿನೆನಪಿಗಾಗಿ ಪ್ರತಿವರ್ಷ ನಡೆಯುವ ಕಿತ್ತೂರು ಉತ್ಸವದಲ್ಲಿ ಜಾನಪದ ನೃತ್ಯ, ಮ್ಯೂಸಿಕಲ್ ಚೇರ್, ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಎಲ್ಲ ಸಮಾಜ ಸೇವೆಯನ್ನು ಪರಿಗಣಿಸಿ ಇವರಿಗೆ ಪ್ರಶಸ್ತಿ ನೀಡಿ ಗೌರಸಲಾಗಿದೆ.

ವಿಠ್ಠಲ ಮಿರಜಕರ

ವಿಠ್ಠಲ ಮಿರಜಕರ: ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮದಲ್ಲಿ ಕಳೆದ 5 ವರ್ಷಗಳಿಂದ ಕಿತ್ತೂರು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರ ಹಲವಾರು ಸಮಸ್ಯೆಗಳನ್ನು ತಮ್ಮ ವಿಶೇಷ ಲೇಖನಗಳ ಮೂಲಕ ಸರಕಾರ ಮತ್ತು ರಾಜ್ಯ ಮತ್ತು ಸ್ಥಳಿಯ ಜನಪ್ರತಿನಿಧಿಗಳ  ಗಮನ ಸೆಳೆದು, ನೊಂದ ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ವಿಠ್ಠಲ ಮಿರಜಕರ ಅವರು ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಜೊತೆಗೆ ಕಳೆದ ಆರೇಳು ವರ್ಷಗಳಿಂದ ಮಳೆ ಚಳಿ ಬೇಸಿಗೆ ಕಾಲಗಳನ್ನು ಲೆಕ್ಕಿಸದೇ ಕರೋನಾ ಮಹಾಮರಿ ಸಂದರ್ಭದಲ್ಲಿಯೂ ಸಹ ಮೂರನ್ಕಾಲು ದಿನ ಪತ್ರಿಕೆಗಳನ್ನು ಪಟ್ಟಣದಾದ್ಯಂತ ಸರಬರಾಜು ಮಾಡುವು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಸಮಾಜ ಸೇವೆಯನ್ನು ಪರಿಗಣಿಸಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.

ಉತ್ತಮ ಮಾಳೋದೆ 
 ಉತ್ತಮ ಮಾಳೋದೆ:  ಇವರು ಕೋರ್ಟನಲ್ಲಿ ಉದ್ಯೋಗಿಯಾಗಿ ಸಾಮಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಅಳಿಲು ಸೇವೆ ಸಲ್ಲಿಸುವ ಮೂಲಕ ಸಮಾಜ ಸೇವಕರಾಗಿದ್ದಾರೆ. ಮಹಾಮಾರಿ ಕರೋನಾ ಸಂದರ್ಭದಲ್ಲಿ ಅಸಹಾಯಕರಿಗೆ ಉಚಿತವಾಗಿ ಮಾಸ್ಕಗಳ ವಿತರಣೆ ಹಾಗೂ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಕೂಲ ಬ್ಯಾಗು, ಪೆನ್ನು, ಕಂಪಾಸ್ ಸೇರಿದಂತೆ ಇತರೆ ಪಟ್ಟೇತರ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಶ್ರೀ ನಾಮದೇವ ಸಿಂಪಿ ಸಮಾಜದ ಹರಿ ಮಂದಿರದಲ್ಲಿ ರಂಗೋಲಿ, ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ಸ್ಪರ್ದಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಹುಮಾನಗಳನ್ನು ವಿತರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಸಮಾಜ ಸೇವೆಯನ್ನು ಪರಿಗಣಿಸಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.


ಐತಿಹಾಸಿಕ ಕಿತ್ತೂರು ತಾಲೂಕಿನಿಂದ ಆಯ್ಕೆಯಾದ ಮೂರು ಜನ ನಾಮದೇವ ಸಿಂಪಿ ಸಮಾಜದವರು ಇದು ಕಾಕತಾಳಿಯ. ಮೂವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ' ಸಂಘ ಮಾರ್ಚ ೨೪ ರಂದು ಬೆಂಗಳೂರು ನೆಲಮಂಗಲದಲ್ಲಿರುವ ಎಮ್ ಎಮ್‌ ವಿ ಎಮ್ ಕನ್ವೆನ್ಷನ್ ಹಾಲ್‌ನಲ್ಲಿ  ಜರುಗಿದ 2 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ. ಸುಪ್ರೀಂ ಕೋರ್ಟನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಲೋಕಾಯುಕ್ತರಾದ ಸಂತೋಷ ಹೆಗಡೆ, ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶಟ್ಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಜೋಗತಿ ಮಂಜಮ್ಮ. ಚಿಂತಕರು, ಚಲನಚಿತ್ರ ನಟರಾದ ಅಹಿಂಸಾ ಚೇತನ. ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಸೇರಿದಂತೆ ಇನ್ನೂ ಅನೇಕ ಗಣ್ಯಾತಿಗಣ್ಯರ ಸಮ್ಮಖದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಪ್ರಶಸ್ತಿ ಪುರಸ್ಕೃತ ಮೂರು ಜನ ಸಾಧಕರನ್ನು ಐತಿಹಾಸಿಕ ಕಿತ್ತೂರು ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಂಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಕನ್ನಡ ಸಾಹಿತ್ತಯ ಪರಿಷತ್ತ ಅಧ್ಯಕ್ಷ ಡಾ ಎಸ್. ಬಿ. ದಳವಾಯಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ, ಉಪಾಧ್ಯಕ್ಷ ಮಹಾಂತೇಶ ಕರಬಸನ್ನವರ, ನಖೀಲ ಹವಳ, ಸಂತೋಷ ಅರಶಿಣಕರ, ಸಂತೋಷ ಖಟಾವಕರ್, ಸಂತೋಷ ಹುಂಬಿ, ಅರುಣ ಬೆಳವಡಿ  ಸೇರಿದಂತೆ ಇತರರು ಅಭಿನಂದಿಸಿದ್ದಾರೆ. 




Post a Comment

0 Comments