![]() |
| ಕಕಾನಿಪ ಸಂಘದ ಕಿತ್ತೂರು ವಿಜಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಪತ್ರಕರ್ತರು |
ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ಹಾಗೂ ತಾಲೂಕಿನಲ್ಲಿ ಕಳೆದ ೨ ದಶಕಗಳಿಂದ ನಕಲಿ ಹಾಗೂ ಅಸಲಿ ಪತ್ರಕರ್ತರ ಕುರಿತು ನಡೆಯುತ್ತಿರುವ ಚೆರ್ಚೆಗಳು ಬಾರಿ ಗೊಂದಲವನ್ನು ಸೃಷ್ಟಿ ಮಾಡಿದ್ದು. ಕಳೆದ ಸುಮಾರು ೨೦ ವರ್ಷಗಳಿಂದ ಕಿತ್ತೂರು ಪತ್ರಕರ್ತರ ಸಂಘದ ಹೆಸರು ಹೇಳಿಕೊಂಡು ಅನೇಕ ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಹಣದ ಬೇಡಿಕೆ, ಸರ್ಕಾರಿ ಶಾಲೆಯ ಶಿಕ್ಷಕರಿಂದ ಹಣ ವಸೂಲಿ, ಮಧ್ಯದಂಗಡಿ ಮಾಲೀಕರನ್ನು ಹೆದರಿಸಿ ಬೆರದರಿಸಿ ಅಂಗಡಿಯಲ್ಲಿ ಪ್ರತಿದಿನ ಮಧ್ಯಪಾನ ಮಾಡುವುದು, ಕಿತ್ತೂರು ಕೆ.ಐ.ಎ,ಡಿ.ಬಿ ಹತ್ತಿರ ಇರುವ ಸರ್ಕಾರಿ ಗೈರಾಣಿನಲ್ಲಿ ಅನಧಿಕೃತವಾಗಿ ಜಮೀನು ಸಾಗುವಳಿ ಮಾಡಿಕೊಂಡು ಉಪಬೋಗ ಮಾಡುವುದು, ಅಮಾಯಕ ರೈತರನ್ನು ಕೆಲವು ವಿಷಯಗಳಲ್ಲಿ ಪ್ರಚೋದಿಸಿ ಅವರಿಂದ ಸರ್ಕಾರದ ವಿರುದ್ಧ ಪ್ರತಿಭಟಿಸಲು ಪ್ರೇರಿಪಿಸುವುದು ಸೇರಿದಂತೆ ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಇವುಗಳಿಗೆ ಕಡಿವಾಣ ಹಾಕುವಂತೆ ಇಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಹಾಗೂ ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘಗಳ ಸಯುಂಕ್ತ ಆಶ್ರಯದಲ್ಲಿ ತಾಲೂಕಾ ದಂಡಾಧಿಕಾರಿ ರವೀಂದ್ರ ಹಾದಿಮನಿ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಅವರುಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಜಿ ಪರಮೇಶ್ವರ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಚನ್ನಮ್ಮನ ಕಿತ್ತೂರು ತಾಲೂಕಾ ಅಧ್ಯಕ್ಷ ಬಸವರಾಜ ಚಿನಗುಡಿ, ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣ್ಣವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಕಕಾನಿಪ ಧ್ವನಿ ಸಂಘದ ಉಪಾಧ್ಯಕ್ಷ ಮಹಾಂತೇಶ ಕರಬಸನ್ನವರ, ಖಜಾಂಚಿ ವಿಠ್ಠಲ ಮಿರಜಕರ, ಕಿತ್ತೂರು ವಿಜಯ ಪತ್ರಿಕೆ ವರದಿಗಾರ ವಿರೇಶ ಹಿರೇಮಠ, ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.

0 Comments