kittur vijay news.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಜೀವನಕ್ಕೆ ಬೆಳಕಾದ ವಾತ್ಸಲ್ಯ ಮನೆ ಕಿತ್ತೂರು ತಾಲೂಕಿನ ಅಂಬಡಗಟ್ಟ


ಪುಂಡಲಿಕಪ್ಪನವರ ಜೀವನಕ್ಕೆ ಬೆಳಕಾದ ವಾತ್ಸಲ್ಯ ಮನೆ
*ಇವತ್ತಿನ ದಿನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ವಲಯದ ಅಂಬಡಗಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅಮ್ಮನವರ ಕನಸಿನ ಕೂಸು ಕಾರ್ಯಕ್ರಮ ಅಡಿಯಲ್ಲಿ ನಿರ್ಗತಿಕರಾದ ಶ್ರೀ ಪುಂಡಲಿಕಪ್ಪ ಕಮ್ಮಾರ್ ಇವರ ದಂಪತಿಗಳಿಬ್ಬರಿಗೂ ವಾಸ್ತಲ್ಯ ಮನೆ ನಿರ್ಮಾಣವನ್ನು ಮಾಡಿ ಇವತ್ತಿನ ದಿನ ಮನೆಯನ್ನು ಹಸ್ತಾಂತರ ಮಾಡಲಾಯಿತು ಈ ಸಮಯದಲ್ಲಿ ಬೆಳಗಾಂವ -01 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ. ಸತೀಶ್. ನಾಯಕ್ ಸರ್ ಅವರು ಮತ್ತು ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಶ್ರೀ. ಜಿ. ಆರ್. ಸೋನೆರ್ ಸರ್ ಮತ್ತು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ. ಬಿ. ಆರ್. ಯೋಗೀಶ್ ಸರ್ ಮತ್ತು ಜಿಲ್ಲಾ ಜನಜಾಗೃತಿ ಸದಸ್ಯರಾದ ಶ್ರೀಮತಿ. ಉಮಾದೇವಿ ಬಿಕ್ಕನವರ್. ಮೇಡಂ ಮತ್ತು ಊರಿನ ಮುಖಂಡರು ಮತ್ತು ಆರಕ್ಷಕರಾದ ಶ್ರೀ ಎಂ ಬಿ. ವಸ್ತ್ರದ(ASI) ಮತ್ತು ಶ್ರೀಮತಿ ಜಿ.ಎಸ್ .ಸಾಲಿಮಠದ (pc) ಮೇಡಂ ಅವರು ಕೂಡ ಉಪಸ್ಥಿತರಿದ್ದರು. ಮತ್ತು ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳಾದ ಶ್ರೀಮತಿ. ಸವಿತಾ ಮೇಡಂ ಮತ್ತು ಮತ್ತು ವಲಯದ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಊರಿನ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Post a Comment

0 Comments