ಕಿತ್ತೂರು ವಿಜಯ
ಚನ್ನಮ್ಮನ ಕಿತ್ತೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನಲೆಯಲ್ಲಿ ತಾಲೂಕ ಆಡಳಿತ ಮತ್ತು ತಾಲೂಕು ಪಂಚಾಯತ ಹಾಗೂ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ಜಾಗೃತಿ ಮೂಡಿಸು ನಿಟ್ಟಿನಲ್ಲಿ ಮಾ 28 ರಂದು ಮುಂಜಾನೆ
10-30 ಕ್ಕೆ ಬೈಕ್ ಜಾಥ ಹಮ್ಮಿಕೊಳ್ಳಲಾಗಿದ್ದುಸಹಾಯಕ ಚುನಾವಣಾ ಅಧಿಕಾರಿ ಕ್ಯಾಪ್ಟನ್‌ಶ್ರೀನಿವಾಸಗೌಡ,
ತಹಶಿಲ್ದಾರ ರವೀಂದ್ರ ಹಾದಿಮನಿ ಹಾಗೂ ತಾಲೂಕ ಸ್ವೀಪ್ ಅಧ್ಯಕ್ಷ ಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಬೈಕ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ.
ಬೈಕ್‌ಜ್ಯಾಥಾ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಇರುವ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಬಸರಕೋಡ, ದೇವಗಾಂವ,
ಬೈಲೂರು, ತಿಗಡೊಳ್ಳಿ, ಅಂಬಡಗಟ್ಟಿ, ಉಗರಖೋಡ ಗ್ರಾಮಗಳಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.
0 Comments