ಕಾರ್ಲಕಟ್ಟಿ ತಾಂಡಾದಲ್ಲಿ ಸಂಭ್ರಮದ ಹೋಳಿ ಹಬ್ಬ

ಕಿತ್ತೂರು ವಿಜಯ 
ಬೈಲಹೊಂಗಲ: ಸಮೀಪದ ಕಾರ್ಲಕಟ್ಟಿ ತಾಂಡಾದಲ್ಲಿ ಭಾನುವಾರ ಹೋಳಿ ಹಬ್ಬ ಸಂಭ್ರಮದಿಂದ ನೆರವೇರಿತು. ಮಕ್ಕಳು, ಯುವಕರು, ಹಿರಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಸಂಭ್ರಮ ಸವಿದರು.

ಬೆಳಗ್ಗೆಯಿಂದ ಸಂಜೆಯವರೆಗೆ ಹೋಳಿ ಮಿಲನದಲ್ಲಿ ಮಿಂದೆದ್ದ ಗ್ರಾಮದ ಮಕ್ಕಳು, ಯುವಕರು, ಹಿರಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ನಕ್ಕು,ನಲಿದಾಡಿದರು. ಹೋಳಿ ಹಬ್ಬದ ಗೀತೆಗಳಿಗೆ ನೃತ್ಯ ಮಾಡಿದರು. ತಾಂಡಾದ ಗಲ್ಲಿ, ಗಲ್ಲಿಗಳಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಮನನ್ನ ಮೂರ್ತಿ ಮಾಡಿ ಮೆರವಣಿಗೆ ಮಾಡಿದರು. ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಕಾಮನ ಮೂರ್ತಿ ದಹನ ಮಾಡಿದರು.
 ತಾಂಡಾದ ಹಿರಿಯರಾದ ಶ್ರೀ ಶಂಕರ್ ಶಿವಪ್ಪ ಕಾರಭಾರಿ, ಶಂಕರ್ ಪೂಜೇರ, ಮಾ. ತಾ. ರಾಠೋಡ್, ಸೋಮಪ್ಪ ಲಕ್ಷ್ಮಣ್ ಲಮಾಣಿ, ವೆಂಕಟೇಶ್ ನಾಯ್ಕ್, ಹಾಗು ಗುರು ಹಿರಿಯರು ಉಪಸ್ಥಿತರಿದ್ದರು.

Post a Comment

0 Comments