ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೋಕ್; ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೇಟ್

ಕಿತ್ತೂರು ವಿಜಯ 
ಚನ್ನಮ್ಮನ ಕಿತ್ತೂರು: ಕಳೆದ 6 ಭಾರಿ ಸಂಸದರಾಗಿ ದೇಶದಾದ್ಯಂತ ಹಿಂದು ಯುವಕರ ನೆಚ್ಚಿನ ನಾಯಕ, ಹಿಂದು ಹುಲಿ ಎಂದು ಹೆಸರು ಮಾಡಿದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಕೆನರಾ ಮತಕ್ಷೇತ್ರದ ಟಿಕೇಟ್ ತಪ್ಪಿದ್ದು ತೇಜಸ್ಸಿ ಹಿಂದು ಯುವಕರಿಗೆ ಸಾಕಷ್ಟು ನೋವಾಗಿದೆ.
ಈ ಬಾರಿ ಅನೇಕ ಹಾಲಿ ಸಂಸದರಿಗೆ ಕೋಕ್ ಕೊಟ್ಟು ಬೇರೆ ನಾಯಕರಿಗೆ ಟಿಕೇಟ್ ನೀಡುವ ಮೂಲಕ ಶತಾಯಗತಾಯ 400 ಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರದಾನ ಮಂತ್ರಿ ಮಾಡಬೇಕು ಎಂದು ಬಿಜೆಪಿ ಪಣ ತೊಟ್ಟಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಅಭ್ಯರ್ಥಿಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಇಂದು ಬಿಜೆಪಿಯ ಐದನೇ ಪಟ್ಟಿಯಲ್ಲಿ ಉತ್ತರ ಕನ್ನಡ ಮತಕ್ಷೇತ್ರಕ್ಕೆ ನಿಕಟಪೂರ್ವ ಸಭಾಧ್ಯಕ್ಷರು, ಸೌಮ್ಯ ಸ್ವಭಾವದ ಹಿರಿಯ ಜೀವಿ ಹಾಗೂ ಸಂಘದ ನಿಷ್ಟಾವಂತ ಸ್ವಯಂಸೇವಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಲಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ ಕೆನರಾ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷೋಲ್ಲಾಸ ಮುಗಿಲು ಮುಟ್ಟಿದ್ದು ಸಾಮಾಜಿಕ ಜಾತತಾಣಗಳಲ್ಲಿ ಮುಂಚಿತವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ವಿಜಯದ ಶುಭಾಶಯಗಳು ಸಲ್ಲಿಕೆಯಾಗುತ್ತಿವೆ.

ಈ ಕುರಿತು ನಮ್ಮ ಎಂ.ಕೆ. ವಾಣಿ ಮತ್ತು ಕಿತ್ತೂರು ವಿಜಯ ಪತ್ರಿಕೆಯಲ್ಲಿ ಮಾರ್ಚ 12 ರಂದು " ಸಂವಿಧಾನ ಬದಲಾವಣೆ ಹೇಳಿಕೆ; ಸಂಸದ ಅನಂತಕುಮಾರ್ ಹೆಗಡೆಗೆ ಟಿಕೇಟ್‌ ಡೌಟ್..?" ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಸುದ್ದಿಯಲ್ಲಿ ನಮ್ಮ ಚನ್ನಮ್ಮನ ಕಿತ್ತೂರು ವರದಿಗಾರರು ನಿಕಟಪೂರ್ವ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೇಟ್ ನೀಡುತ್ತಾರೆ ಎಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Post a Comment

0 Comments