ಪ್ರಮುಖಾಂಶಗಳು
8,000 ಮೈಲು ದೂರ ರಥಯಾತ್ರೆ
ಕ್ರಮಿಸಲಿದೆ.
ರಥಯಾತ್ರೆ ಸಾಗುವ ಪ್ರಾಂತ್ಯಗಳು 48.
851 ದೇವಾಲಯಗಳಿಗೆ ರಥ ಸಾಗಲಿದೆ.
60ದಿನ ಯಾತ್ರೆ ನಡೆಯಲಿದೆ.
ಕಿತ್ತೂರು ವಿಜಯ
ವಾಷಿಂಗ್ಟನ್: ಅಮೆರಿಕದ ವಿಶ್ವಹಿಂದೂ
ಪರಿಷತ್ ಸಂಘಟನೆಯು (ಅವಿಹಿಂಪ)
ಪ್ರಥಮ ಬಾರಿಗೆ ದೇಶವ್ಯಾಪಿ ರಾಮ
ಮಂದಿರ ರಥಯಾತ್ರೆಯನ್ನು ಆಯೋ
ಜಿಸಿದ್ದು, ಸೋಮವಾರ ಚಿಕ್ಯಾಗೋದಿಂದ
ರಥ ಯಾತ್ರೆ ಆರಂಭವಾಗಲಿದೆ. ಸುಮಾರು
60 ದಿನಗಳ ಕಾಲ ಒಟ್ಟು 12,974 ಕಿಮೀ
ಕ್ರಮಿಸಿ, ಅಮೆರಿಕದ 48 ಪ್ರಾಂತ್ಯಗಳಲ್ಲಿ ಇರುವ
851 ದೇವಾಲಯಗಳನ್ನು ಹಾಗೂ ಕೆನಡಾದ 150 ದೇಗುಲಗಳಿಗೆ ಯಾತ್ರೆತಲುಪಲಿದೆ ಎಂದು ಅಮೆರಿಕದ ವಿಹಿಂಪನ ಪ್ರಧಾನ ಕಾರ್ಯದರ್ಶಿ
ಅಮಿತಾಭ್ ಮಿತ್ತಲ್ ಹೇಳಿದ್ದಾರೆ.ಟೊಯೊಟಾ ಸಿಯೆನ್ನಾ ವ್ಯಾನ್ ಮೇಲೆ ಈ ರಥವನ್ನು ಅಳವಡಿಸಲಾಗಿದ್ದು, ಶ್ರೀರಾಮ, ಸೀತೆ, ಲಕ್ಷ್ಮಣ,
ಹನುಮಾನ್ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುವುದು
ಅಯೋಧ್ಯೆಯ ಶ್ರೀ ರಾಮಮಂದಿರದಿಂದ ತರಲಾದ ವಿಶೇಷ ಪ್ರಸಾದ ಮತ್ತು ಪ್ರಾಣ ಪ್ರತಿಷ್ಠೆಯ ಅಕ್ಷತೆ ಇರುವ ಕಳಶವೂ ರಥದಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಜಾಗೃತಿ ಮತ್ತು ಧರ್ಮದ ಸಬಲೀಕರಣವೇ ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಹಿಂದೂ ಮಂದರಿ ಸಬಲೀಕರಣ ಸಮಿತಿಯ ತೇಜಲ್ ಶಾ ಮಾಹಿತಿ ನೀಡಿದ್ದಾರೆ.
0 Comments