ಕಿತ್ತೂರ ವಿಜಯ ಸಮಾಚಾರ
ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ
ವಿಶ್ವವಿದ್ಯಾಲಯದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಇವರಿಗೆ ಬೆಳಗಾವಿಯ ಸಮೃದ್ಧಿ ಶಿಕ್ಷಣ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (SEARD) ರಾಜ್ಯಮಟ್ಟದ “ರಾಷ್ಟಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮ” ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರತಿ ವರ್ಷ ಪದ್ದತಿಯಂತೆ ವಿವಿದ ಕ್ಷೇತ್ರಗಳಲ್ಲಿ ಸಾಧನೆ
ಮಾಡಿದ ಸಾಧಕರಿಗೆ ಬೆಳಗಾವಿಯ ಸಮೃದ್ಧಿ ಶಿಕ್ಷಣ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (SEARD) ನಾನಾ ತರಹದ
ಪ್ರಶಸ್ತಿಗಳನ್ನು ಕೊಡುವ ಮೂಲಕ ಸಾಧಕರಿಗೆ ಸಾಧನೆ ಮಾಡಲು ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತದೆ.
ಡಾ.ಮೈತ್ರೇಣಿ ಗದಿಗೆಪ್ಪಗೌಡರ ಇವರ ಶಿಕ್ಷಣಕ್ಷೇತ್ರ, ಸಾಹಿತ್ಯ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನು, ಮನ, ಧನದೊಂದಿಗೆ ತಮ್ಮನ್ನು ಸಮರ್ಪಿಸಿಕೊಂಡು ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಬೆಳಗಾವಿಯ ಸಮೃದ್ಧಿ ಶಿಕ್ಷಣ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾರ್ಚ 02 ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 8 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ “ರಾಷ್ಟಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಗೆ ಇವರ ಸಾಧನೆ ಇಮ್ಮಡಿಗೊಂಡು ಇವರ ಹೆಸರು ಅಜರಾಮರವಾಗಿ ಇವರ ಭವಿಷ್ಯ ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಲಿ ಎಂದು (SEARD) ಅಧ್ಯಕ್ಷ ನಾಗನಗೌಡ ಪಾಟೀಲ, ಉಪಾಧ್ಯಕ್ಷೆ ಶಿವಲೀಲಾ ಪಾಟೀಲ ಹಾಗೂ ಪೂಜ್ಯ ವಾಗ್ದೇವಿ ಮಾತಾಜೀ ಮತ್ತು ಕುಮುದಿನಿ ಮಾತಾಜೀ ಅವರು ಹಾರೈಸಿದ್ದಾರೆ.
"ಪ್ರಶಸ್ತಿ ಪಡೆದ ಖುಷಿ ಒಂದಡೆಯಾದರೆ ದಂಪತಿಗಳಿಗೆ ಸನ್ಮಾನ ಮಾಡಿದ್ದು ನಿಜಕ್ಕೂ ಸಂತೋಷವಾಯಿತು. ಯಾವಾಗಲೂ ಪ್ರಶಸ್ತಿ ಪಡೆದವರಿಗೆ ಮಾತ್ರ ಸನ್ಮಾನ ಮಾಡುತ್ತಾರೆ ಆದರೆ ಸಾಧಕರ ಹಿಂದಿನ ನಿಜವಾದ ಶಕ್ತಿಗಳಿಗೆ ಸಲ್ಲಬೇಕಾದ ಗೌರವ ಸಿಗುವುದಿಲ್ಲ. ನನ್ನ ಹಿಂದಿನ ಬಹುದೊಡ್ಡ ತಾಕತ್ತು ನನ್ನ ಮನೆಯವರಾದ ನೀಲಕಂಠ ಮಕಲಣ್ಣನವರ. ಅವರು ಸದಾ ಹಸನ್ಮುಖಿ ಮೃದು ಹೃದಯದ ಸಂಗಾತಿ ಅವರ ಪ್ರೋತ್ಸಾಹಕ್ಕೆ ಸದಾ ಚಿರಋಣಿ. ಹೀಗೊಂದು ವಕಾಶವನ್ನು ಕಲ್ಪಿಸಿದ ಬೆಳಗಾವಿಯ ಸಮೃದ್ಧಿ ಶಿಕ್ಷಣ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (SEARD) ಧನ್ಯವಾದಗಳನ್ನು ಅರ್ಪಿಸುತ್ತೇನೆ" ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ


0 Comments