ನಾಳೆ ದೇಗುಲಹಳ್ಳಿಯ ಗುರುಮಡಿವಾಳೇಶ್ವರ 143 ನೇ ಜಾತ್ರಾ ಮಹೋತ್ಸವ ಜರುಗುವುದು

 



ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರ: ತಾಲೂಕಿನ ದೇಗುಲಹಳ್ಳಿ ಗ್ರಾಮದ ವೈರಾಗ್ಯ ಚಕ್ರವರ್ತಿ, ಚಿರಕುಲ ಸಾರ್ವಭೌಮ ಶ್ರೀ ಗುರು ಮಡಿವಾಳೇಶ್ವರ ಶಿವಯೋಗಿ ಅವರ ೧೪೩ನೇ ಜಾತ್ರಾ ಮಹೋತ್ಸವ ನಾಳೆ ಜರುಗುವುದು.

ಜಾತ್ರೆಯ ಸಾನಿಧ್ಯ ಶ್ರೀ ವೀರೇಶ್ವರ ಸ್ವಾಮಿಜೀ ವಹಿಸುವರು. ಫೆಬ್ರುವರಿ 13 ರಂದು ಸಾಯಂಕಾಲ 7 ಘಂಟೆಗೆ ಮಠದ ಆವರಣದಲ್ಲಿ ಧರ್ಮಸಭೆ ಇದರ ಸಾನಿಧ್ಯ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರ, ಅಧ್ಯಕ್ಷತೆ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ರೋಹಿಣಿ ಪಾಟೀಲ ವಹಿಸುವರು, ಮುಖ್ಯ ಅಥಿತಿಗಳಾಗಿ ಕಿತ್ತೂರಿನ ಮಲ್ಲಿಕಾರ್ಜುನ ಸಾಣಿಕೊಪ್ಪ, ಪತ್ರಕರ್ತ ಈರಣ್ಣಾ ಬಣಜಗಿ, ದೇಗುಲಹಳ್ಳಿಯ ಪ್ರಸಾದ ತುರಮರಿ, ತೇರಗಾಂವದ ಮಡಿವಾಳ್ಳಯ್ಯಾ ಹಿರೇಮಠ, ಸಂಜು ಕರಡಿ, ಭಾಗವಹಿಸಲಿದ್ದಾರೆ.

ಫೆ 14 ಬೆಳಿಗ್ಗೆ ಕರ್ತೃಗದ್ದುಗೆಗೆ ರುದ್ರಾಭೀಷೇಕ, ಮಹ್ನಾಧ್ಯಾ 12-45 ಕ್ಕೆ ಸಾಮೂಹಿಕ ವಿವಾಹ, ಸಂಜೆ 4 ಗಂಟೆಗೆ ರಥೋತ್ಸವ ಇದರ ಸಾನಿಧ್ಯ ಹೊಸೂರಿನ ಗುರುಮಡಿವಾಳೇಶ್ವರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ದೇವರಶೀಗಿಹಳ್ಳಿಯ ಶ್ರೀ ವೀರೇಶ್ವರ ಸ್ವಾಮಿಜಿ, ದೇಮಟ್ಟಿಯ ಪತ್ರೇಶ್ವರ ಮಠದ ಗುರುಸಿದ್ದಯ್ಯಾ ಸ್ವಾಮಿಜಿ ಹಿರೇಮಠ,  ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಸ್ವಾಮಿಜೀ,  ಗರಗದ ಪ್ರಶಾಂತ ದೇವರು, ರಥೋತ್ಸವದ ಅಧ್ಯಕ್ಷತೆ  ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುಖ್ಯಅಥತಿಗಳಾಗಿ  ಸುನೀಲಗೌಡರ ಭಜನ್ನವರ, ಸಿಪಿಐ ಮಲಿಕಾಜಪ್ಪ ದಪ್ಪಿನ, ಸಿಪಿಐ ಪ್ರವೀಣ ಗಂಗೋಳ, ಗ್ರಾಪಂ ಅಧ್ಯಕ್ಷ ಬಸವರಾಜ ಲದ್ದಿಮಠ, ಉಪಾಧ್ಯಕ್ಷಣಿ ಮಹಾದೇವಿ ಮಾಳಗಿ, ಮಸಸ ಕಾರ್ಖಾನೆ ಅಧ್ಯಕ್ಷ ಮೋಹನ ಸಂಬರಗಿ, ಪತ್ರಕರ್ತ ಪ್ರದೇಪ ಮೇಲಿಮನಿ, ಪಿಡಿಓ ಜಯರಾಮ ಕಾದ್ರೋಳ್ಳಿ, ವಿಜಯಕುಮಾರ ಶಿಂಧೆ, ಜಗದೀಶ ಹಿತ್ತಲಮನಿ, ಗಿರಿಧರಗೌಡ್ರ ಕುಲಕರ್ಣಿ, ಅನ್ನಪೂರ್ಣಾ ಹಿರೇಮಠ, ಬಸವರಾಜ ನಾಯ್ಕರ, ವಿಜಯ ಅಂಕಲಗಿಮಠ,  ಶೀತಲ ಅರಗಂಜಿ, ಸುರೇಶ ಕಲಾಲ, ರುದ್ರಪ್ಪ ಪಡಾದ, ಮಲ್ಲಿಕಾರ್ಜುನ ಸಾಣಿಕೊಪ್ಪ, ಹನಮಂತ ಲಂಗೋಟಿ, ಶಂಕರ ಇಟಗಿ, ರುದ್ರಪ್ಪ ಇಟಗಿ, ಯಲ್ಲಪ್ಪ ಗುಡದರಿ, ಈರಯ್ಯಾ ಹಿರೇಮಠ, ಮಹಾವೀರ ಬಡಸದ, ಸುರೇಶ ಮೂಲಿಮಠ, ಕಲ್ಲಪ್ಪ ಸರದಾರ, ಬಿ.ಎಸ್. ಕಿವುಡಸನ್ನವರ, ಅಣ್ಣಪ್ಪ ತಳವಾರ, ಸಚಿನ್ ಸಾಣಿಕೊಪ್ಪ, ಅದೃಶ್ಯಪ್ಪ ಕೊಟಬಾಗಿ, ಸಾವಂತ ಕಿರಬನವರ, ಅನಿಲ ಕಾಳಾಯಿ, ಬಸವರಾಜ ಹುರಕಡ್ಲಿ ಹಾಗೂ ಸ್ವಮಿ ವಿವೇಕಾನಂದ ಮಂಡಳ ಅಂಬಡಗಟ್ಟಿ, ನಂದಿಹಳ್ಳಿ ಗ್ರಾಮದ ಸಮಸ್ತ ಗುರುಹಿರಿಯರು,  ಹಾಗೂ ಗ್ರಾಪಂ ಸಿಬ್ಬಂದಿ, ಸೇರಿದಂತೆ ಭಕ್ತವೃಂದ ಪಾಲ್ಗೋಳಲಿದ್ದಾರೆಂದು ಮಡಿವಾಳೇಶ್ವರ ಟ್ರಸ್ಟ ಕಮೀಟಿಯವರು ಪ್ರಕಟಣೆಗೆ ತಿಳಿಸಿದ್ದಾರೆ.

 

Post a Comment

0 Comments