ಲೋಕಸಭಾ ಚುನಾವಣೆ: ಭಾರತೀಯ ಜನತಾ ಪಕ್ಷದ 2 ನೇಯ ಪಟ್ಟಿ ಬಿಡುಗಡೆ ಕೆನರಾ ಕ್ಷೇತ್ರದ ಟಿಕೇಟು ಪೆಂಡಿಂಗ್

 



ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: ಭಾರತೀಯ ಜನತಾ ಪಕ್ಷದ 2 ನೇಯ ಪಟ್ಟಿ ಬಿಡುಗಡೆಯಾಗಿದ್ದು ಚಿಕ್ಕೋಡಿ ಅಣ್ಣಾಸಾಹೇಬ ಜೊಲ್ಲೆ, ಬಾಗಲಕೋಟೆ ಪಿ.ಸಿ. ಗದ್ದಿಗೌಡರ, ವಿಜಯಪೂರ ರಮೇಶ ಜಿಗಜಿಣಗಿ, ಗುಲಬರ್ಗಾ ಉಮೇಶ ಜಾಧವ, ಬೀದರ ಭಗವಂತ ಖೂಬಾ, ಕೊಪ್ಪಳ ಬಸವರಾಜ, ಬಳ್ಳಾರಿ ಶ್ರೀ ರಾಮಲು, ಹಾವೇರಿ ಬಸವತಾಜ ಬೊಮ್ಮಾಯಿ, ಧಾರವಾಡ ಪ್ರಲ್ಹಾದ ಜೋಶಿ, ದಾವಣಗೆರೆ ಗಾಯತ್ರಿ ಸಿದ್ದೇಶ್ವರ, ಶಿವಮೊಗ್ಗ ಬಿ, ವೈ. ರಾಘವೇಂದ್ರ, ಉಡುಪಿ ಚಿಕ್ಕಮಗಳೂರು ಕೋಟಾ ಶ್ರೀನಿವಾಶ ಪೂಜಾರಿ, ದಕ್ಷಿಣ ಕನ್ನಡ ಕ್ಯಾ ಬ್ರಿಜೇಶ ಚೌಟ, ತುಮಕೂರು ವಿ ಸೋಮಣ್ಣ, ಮೈಸೂರು ಯದುವೀರ ಒಡೆಯರ, ಚಾಮರಾಜ ನಗರ ಎಸ್ ಬಾಲರಾಜ, ಬೆಂಗಳೂರು ಗ್ರಾಮೀಣ ಡಾ ಸಿ ಎನ್ ಮಂಜುನಾಥ, ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ ಪಿ. ಸಿ. ಮೋಹನ, ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಅವರಿಗೆ ಟಿಕೇಟು ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ಮಹಾರಾಜ ಯಧುವೀರಗೆ ಲಾಟರಿ:

ಮೈಸೂರು ಹಾಲಿ ಸಂಸದ ಪ್ರತಾಪ ಸಿಂಹನಿಗೆ ಕೋಕ್ ಮೈಸೂರು ಮಹಾರಾಜ ಯಧುವೀರಗೆ ಲಾಟರಿ ಹೊಡೆದಿದ್ದು ಮೈಸೂರು ಹಾಲಿ ಸಂಸದ ಪ್ರತಾಪ ಸಿಂಹ ಅವರು ಮುಂದಿನ ನಡೆ ಏನು ಎಂದು ಯಕ್ಷ ಪ್ರಶ್ನೆಯಾಗಿದ್ದು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದ್ದು ಅಧಿಕೃತವಾಗಿ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

 

ಟಿಕೇಟು ಪೈನಲ್ ಆಗದ ಉತ್ತರ ಕನ್ನಡ ಕ್ಷೇತ್ರ:

2 ನೇಯ ಪಟ್ಟಿಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಹಿಂದು ಹುಲಿ ಎಂದು ಪ್ರಖ್ಯಾತಿ ಪಡೆದ ಅನಂತಕುಮಾರ ಹೆಗಡೆ ಅವರ ಟಿಕೇಟು ಪೈನಲ್ ಆಗದೇ ಇರುವುದು ಹಿಂದು ಯುವಕರ ನಿದ್ದಿಕೆಡಿಸಿದ್ದು ಟಿಕೇಟು ಯಾರಿಗೆ ಕೊಡಬೇಕು ಎಂದು ರಾಷ್ಟ್ರ ನಾಯಕರಿಗೆ ಕಗ್ಗಂಟಾಗಿ ಉಳಿದಿದೆ.

ಕೆಲವು ದಿನಗಳ ಹಿಂದೆ ಸಂವಿಧಾನವನ್ನು ಬದಲಾಯಿಸಲು ಭಾರತೀಯಜನತಾ ಪಕ್ಷಕ್ಕೆ 400 ಸ್ಥಾನಗಳು ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು ಹೇಳಿಕೆಯಿಂದ ಅವರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಹೇಳಿಕೆ ಬಿಜೆಪಿ ಪಕ್ಷಕ್ಕೂ ಮುಜುಗರ ಉಂಟು ಮಾಡಿತ್ತು ಈ ಹಿನ್ನಲೆಯಲ್ಲಿ ಬಿಜೆಪಿ ಅವರಗೆ ನೋಟಿಸ್ ಕೂಡಾ ನೀಡಿತ್ತು. ಇದರಿಂದಾಗಿ ಅವರಿಗೆ ಟಿಕೇಟು ಹಂಚಿಕೆಯಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

 

Post a Comment

0 Comments