ಸಮಾಜ ಸೇವಕಿ ರಂಜನಾ ಬುಲಬುಲೆಗೆ ರಾಜ್ಯ ಮಟ್ಟದ 'ಸಾಮಾಜಿಕ ಸೇವಾ ರತ್ನ' ಪ್ರಶಸ್ತಿ

                                                        ಪ್ರಶಸ್ತಿ ಪುರಸ್ಕೃತ ರಂಜನಾ ಬುಲಬುಲೆ                         ಅವರ ಭಾವಚಿತ್ರ

ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: ಕರ್ನಾಟಕ ರಾಜ್ಯ ಪತ್ರಕರ್ತರ ಧ್ವನಿ ಸಂಘ ಬೆಂಗಳೂರು ವತಿಯಿಂದ ಕೊಡಮಾಡುವ 2024 ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಸಾಮಾಜಿಕ ಸೇವಾ ರತ್ನ” ಪ್ರಶಸ್ತಿಗೆ ಸಮಾಜ ಸೇವಕಿ ರಂಜನಾ ರವಿ ಬುಲಬುಲೆ ಅವರು ಭಾಜನರಾಗಿದ್ದಾರೆ. 

ರಂಜನಾ ಬುಲಬುಲೆ ಅವರು ಕಳೆದ ಹತ್ತು ವರ್ಷಗಳಿಂದ ವಿವಿಧ ಸಮಾಜಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೇ, ಪ್ರಚಾರ ಬಯಸದೇ ಎಲೆ ಮರೆಯ ಕಾಯಿಯಂತೆ ಸದಾ ಮಹಿಳಾ ಪರ ಸದೃಢ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತ ಹಗಲಿರಳು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ಐತಿಹಾಸಿಕ ಕಿತ್ತೂರು ಪಟ್ಟಣದಲ್ಲಿ “ಕದಳಿ ಮಹಿಳಾ ವೇದಿಕೆ” ಕಟ್ಟಿಕೊಂಡು ಅದರ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಸದಸ್ಯರಾಗಿ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಪರಿಸರ ಜಾಗೃತಿ ಆಂದೋಲನ ಮತ್ತು ಸಂರಕ್ಷಣೆ, ಕರೋನಾ ಹಾಗೂ ನೆರೆ ಹಾವಳಿಯಂತಹ  ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಕೈಲಾದ ಸಹಾಯ ಮಾಡುತ್ತ, ಮಹಿಳಾ ಜಾಗೃತಿ ಕಾರ್ಯಕ್ರಮ, ಪ್ರತಿ ತಿಂಗಳು ನಡೆಯುವ ಶಿವಾನುಭವ ಕಾರ್ಯಕ್ರಮ ಹಾಗೂ ಶರಣರ ದರ್ಶನ ಕಾರ್ಯಕ್ರಮಗಳಲ್ಲಿ ವಚನ ಗಾಯನ ಮೊದಲಾದ ಸಂಗೀತ ಸೇವೆ, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪಣೆಯ ವೇಳೆ ಮನೆ ಮನೆಗೆ ಅಕ್ಷತಾ ವಿತರಣೆ, ರಕ್ತದಾನ ಶಿಬಿರ ಮೊದಲಾದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರಾಣಿ ಚನ್ನಮ್ಮನ ವಿಜಯೋತ್ಸವದ ಸವಿನೆನಪಿಗಾಗಿ ಆಚರಿಸುವ ಕಿತ್ತೂರು ಉತ್ಸವದಲ್ಲಿ ಜಾನಪದ ನೃತ್ಯ, ಮ್ಯೂಸಿಕಲ್ ಚೇರ್, ಸಂಗೀತ ಸುಧೆ, ದೇಶಭಕ್ತಿ ಗೀತೆ, ಕುಕ್ಕಿಂಗ್‌ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಅವರಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಕೆಪಿಸಿಸಿ ಸದಸ್ಯೆ    ರೋಹಿಣಿ ಪಾಟೀಲ ಅವರಿಂದ ಪ್ರಶಸ್ತಿಗಳನ್ನು ಪಡೆಯುತ್ತಿರುವುದು                                                       

ಇವರ ಈ ಸಮಾಜ ಸೇವೆಯನ್ನು ಪರಿಗಣಿಸಿದ 'ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ' ಸಂಘ ಇದೇ ಮಾರ್ಚ 24 ರಂದು ರಂದು ಬೆಂಗಳೂರು ನೆಲಮಂಗಲದಲ್ಲಿ ಇರುವ ಎಮ್. ವ್ಹಿ. ಎಮ್. ಕನ್ವೆನ್ಷನ್ ಹಾಲಿನಲ್ಲಿ ಆಯೋಜಿಸಲಾಗಿರುವ 2 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ವನಕಲ್ಲು ಮಠದ ಶ್ರೀ ಬಸವರಾಮಾನಂದ ಮಹಾಸ್ವಾಮಿಗಳು, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಕಾನಿಪ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಮಾತಾ ಮಂಜಮ್ಮ ಜೋಗತಿ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಕಾನಿಪ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ ಅವರು ತಿಳಿಸಿದ್ದಾರೆ.

ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರೊಂದಿಗೆ ಕಿತ್ತೂರು ಉತ್ಸವದಲ್ಲಿ

ಪ್ರಶಸ್ತಿ ಪುರಸ್ಕೃತ ರಂಜನಾ ಬುಲಬುಲೆ ಅವರನ್ನು ಐತಿಹಾಸಿಕ ಕಿತ್ತೂರು ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಂಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಕನ್ನಡ ಸಾಹಿತ್ತಯ ಪರಿಷತ್ತ ಅಧ್ಯಕ್ಷ ಡಾ ಎಸ್. ಬಿ. ದಳವಾಯಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ, ಕಿತ್ತೂರು ವಿಜಯ ವಾರ ಪತ್ರಿಕೆ ವರದಿಗಾರ ಭಾವನಾ ಕಂಬಿ, ರಾಜಕಾರಣಿಗಳು, ಸ್ನೇಹಿತರು, ಕಿತ್ತೂರು ತಾಲೂಕಿನ ಸರ್ವ ಶಿಕ್ಷಕರು, ಕದಳಿ ಮಹಿಳಾ ಮಂಡಳ ಮತ್ತು  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ ಸರ್ವ ಸದಸ್ಯರು, ಸೇರಿದಂತೆ ಇತರರು ಅಭಿನಂದಿಸಿದ್ದಾರೆ.


Post a Comment

0 Comments