ಹೋಳಿ, ರಂಜಾನ್ ಹಬ್ಬದ ಪ್ರಯುಕ್ತ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಪಾಲನಾ ಸಭೆ ಜರುಗಿತು

 



 ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಶಾಂತಿ ಸೌಹಾರ್ದತೆಗೆ ಹೆಸುರುವಾಸಿಯಾದ ಪಟ್ಟಣ. ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬೇದ ಭಾವ ಇಲ್ಲದೆ ಶಾಂತಿ ಸೌಹಾರ್ದತೆಯಿಂದ ಹೋಲಿ ಮತ್ತು ರಂಜಾನ್ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಎಂ. ಎಂ. ದಪ್ಪಿನ ಹೇಳಿದರು.

ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಶಾಂತಿ ಪಾಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬಗಳನ್ನು ನಮ್ಮ ಭಾರತಿಯ ಸಂಸ್ಕೃತಿ ಪ್ರಕಾರ ಆಚರಿಸಬೇಕು. ನಮಗೆ ಗೊತ್ತು ಇರುವ ವ್ಯಕ್ತಿಗಳಿಗೆ ಮಾತ್ರ ಬಣ್ಣವನ್ನು ಹಾಕಬೇಕು. ಭಾರಿ ಲೋಕಸಾಭಾ ಚುನಾವಣೆ ಇರುವುದರಿಂದ ಎಲ್ಲ ಕಡೆಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇದ್ದು ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದರು.

ವೇಳೆ ಪಿಎಸ್ಐ ಪ್ರವೀಣ ಗಂಗೋಳ ಮಾತನಾಡಿ ಬಾರಿ ದೇಶದಾದ್ಯಂತ ಲೋಕಸಾಭಾ ಚುನಾವಣೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಏಕಕಾಲಕ್ಕೆ ಬಂದಿದ್ದು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಳಿ ಹಬ್ಬವನ್ನು ಆಚರಿಸಬೇಕು. ಪ್ರತಿವರ್ಷ ಯಾವ ತರಹ ಹಬ್ಬವನ್ನು ಆಚರಿಸಲಾಗುತ್ತಿತ್ತೋ ಅದೇ ತರಹ ಎಲ್ಲ ಹೋಳಿ ಉತ್ಸವ ಸಮಿತಿಗಳು ಹೋಲಿ ಆಚರಿಸಬೇಕು ಯಾವುದೇ ತರಹದ ಬದಲಾವಣೆ ಮಾಡಬಾರದು. ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಇರುವುದರಿಂದು ಡಿಜೆ ಬಳಸಲು ಅವಕಾಶ ಕೊಡುವುದಿಲ್ಲ. ಬಣ್ಣ ಹಚ್ಚಿಕೊಳ್ಳಲು ಆಸಕ್ತಿ ಇಲ್ಲದವರಿಗೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಬಾರದು. ಎಸ್ಎಸ್ಎಲ್ಸಿ ಪರೀಕ್ಷೆ ಇರುವ ಕಾರಣ ಸಾರ್ವಜನಿಕ ವಾಹನ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಸಮಸ್ಯೆ,ತೊಂದರೆಯಾಗಿದ್ದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ ಅವರು ಯಾರಾದರೂ ಕಾನೂನು ಮೀರಿ ಅಹಿತಕರ ಘಟನಗಳನ್ನು ಮಾಡಲು ಮುಂದಾದರೆ ಅಂತವರನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದರು.

ವೇಳೆ ದಿನೇಶ ವಳಸಂಗ, ಶಿವಾನಂದ ಹಿರೇಮಠ, .ಪಂ. ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಮಾತನಾಡಿದರು

ಸೋಮಶೇಖರ ಮುತ್ತೇನ್ನವರ, ಸಂಜು ಲೀಕಾಪೂರ, ಮುಸ್ತಾಕ ಸುತಗಟ್ಟಿ, ಯಲ್ಲಪ್ಪ ಮಣ್ಣವಡ್ಡರ, ಆನಂದ ಚಕಡಿ, ಶಿವಪ್ಪ ಉಡಕೇರಿ ಸೇರಿದಂತೆ ಇತರರಿದ್ದರು

Post a Comment

0 Comments