ರಾಜ್ಯ ಮಟ್ಟದ “ಕರ್ನಾಟಕ ಮಾಧ್ಯಮ ಸೇವಾರತ್ನ” ಪ್ರಶಸ್ತಿಗೆ ಸಯುಂಕ್ತ ಕರ್ನಾಟಕ ವರದಿಗಾರ ವಿಠ್ಠಲ ಮಿರಜಕರ ಆಯ್ಕೆ

 ಪ್ರಶಸ್ತಿ ಪುರಸ್ಕೃತ ವಿಠ್ಠಲ ಮಿರಜಕರ       ಅವರ ಭಾವಚಿತ್ರ

ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: 2024 ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಮಾಧ್ಯಮ ಸೇವಾ ರತ್ನ” ಪ್ರಶಸ್ತಿಗೆ ಸಯುಂಕ್ತ ಕರ್ನಾಟಕ ದಿನಪತ್ರಿಕೆ ಕಿತ್ತೂರು ತಾಲೂಕಾ ವರದಿಗಾರರು ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಖಜಾಂಚಿ ವಿಠ್ಠಲ ಮಿರಜಕರ ಭಾಜನರಾಗಿದ್ದಾರೆ.

ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮದಲ್ಲಿ ಕಳೆದ 5 ವರ್ಷಗಳಿಂದ ಕಿತ್ತೂರು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರ ಹಲವಾರು ಸಮಸ್ಯೆಗಳನ್ನು ತಮ್ಮ ವಿಶೇಷ ಲೇಖನಗಳ ಮೂಲಕ ಸರಕಾರದ ಗಮನ ಸೆಳೆದು, ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ.

ಇವರ ಈ ಸಮಾಜ ಸೇವೆಯನ್ನು ಪರಿಗಣಿಸಿದ 'ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ' ಸಂಘ ಇದೇ ಮಾರ್ಚ 24 ರಂದು ರಂದು ಬೆಂಗಳೂರು ನೆಲಮಂಗಲದಲ್ಲಿರುವ ಎಮ್.ವ್ಹಿ.ಎಮ್‌ ಕನ್ವೆನ್ಷನ್ ಹಾಲ್ನಲ್ಲಿ  ಆಯೋಜಿಸಲಾಗಿರುವ 2 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಈ ಪ್ರಶಸ್ತಿಯನ್ನು  ಪ್ರದಾನ ಮಾಡಲಿದ್ದಾರೆ ಎಂದು ಕಾನಿಪ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತ  ವಿಠ್ಠಲ ಮಿರಜಕರ ಅವರನ್ನು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಂಗೇಂದ್ರ ಮಹಾಸ್ವಾಮಿಗಳು, ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಕನ್ನಡ ಸಾಹಿತ್ತಯ ಪರಿಷತ್ತ ಅಧ್ಯಕ್ಷ ಡಾ ಎಸ್. ಬಿ. ದಳವಾಯಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಚಿನಗುಡಿ ಹಾಗೂ ಸರ್ವ ಸದಸ್ಯರು, ರಾಜಕಾರಣಿಗಳು, ಸ್ನೇಹಿತರು, ಸೇರಿದಂತೆ ಇತರರು ಅಭಿನಂದಿಸಿದ್ದಾರೆ.


Post a Comment

0 Comments