ಸಂಗೊಳ್ಳಿ ರಾಯಣ್ಣ ಜ್ಯೋತಿ ಯಾತ್ರೆಗೆ ನೇಗಿನಹಾಳದಲ್ಲಿ ಸ್ವಾಗತ : Mk vani

ಸಂಗೊಳ್ಳಿ ರಾಯಣ್ಣ ಜ್ಯೋತಿ ಯಾತ್ರೆಗೆ ನೇಗಿನಹಾಳದಲ್ಲಿ ಸ್ವಾಗತ.

ನಮ್ಮ ನಾಡಿನ ಕೆಚ್ಚದೆಯ ವೀರನ ಆದರ್ಶ ನಮಗೆಲ್ಲ ಸ್ಪೂರ್ತಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ

ನೇಗಿನಹಾಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನೆಲದ ಸ್ವಾತಂತ್ರ್ಯಕ್ಕಾಗಿ ವೀರಮಾತೆ ಚನ್ನಮ್ಮನ ಬಲಗೈ ಭಂಟನಾಗಿ ನಿಂತು ಬ್ರಿಟಿಷರ್ ವಿರುದ್ಧ ಹೋರಾಡಿ ನಂದಗಡದಲ್ಲಿ ಗಲ್ಲು ಶಿಕ್ಷೆಗೆ ಒಳಗಾದಾಗ ನಮ್ಮ ದೇಶದ ಸ್ವಾತಂತ್ರ್ಯಕಾಗಿ ನನ್ನಂತಹ ರಾಯಣ್ಣ ಮನೆಗೊಬ್ಬ ಹುಟ್ಟಲಿ ಎಂದು ಹೇಳುತ್ತ ಪ್ರಾಣ ಬಲಿದಾನ ಮಾಡಿದರು. ಇವರು ನಮ್ಮೆಲ್ಲರ ಹೆಮ್ಮೆಯ ಆದರ್ಶ ಪುರುಷ, ಅವರ ಹೋರಾಟ ನಮಗೆಲ್ಲ ಸ್ಪೂರ್ತಿ ತುಂಬಲಿ ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.

ಗ್ರಾಮದ ಬಸ್ ನಿಲ್ದಾಣದಲ್ಲಿ ರಾಯಣ್ಣ ಜ್ಯೋತಿ ಯಾತ್ರೆಯ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಯಣ್ಣನ ದೇಶಪ್ರೇಮದ ಕುರಿತು ಪ್ರತಿಯೊಬ್ಬರೂ ಅರೆತುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಕೆಪಿಸಿಸಿ ಸದಸ್ಯರಾದ ಶ್ರೀಮತಿ ರೋಹಿಣಿ ಬಾಬಾಸಾಹೇಬ ಪಾಟೀಲ, ನೇಗಿನಹಾಳ ಪಿಕೆಪಿಎಸ್ ಅದ್ಯಕ್ಷ ನಾನಾಸಾಹೇಬ ಪಾಟೀಲ, ಗ್ರಾ.ಪಂ ಅದ್ಯಕ್ಷೆ ಮಹಾದೇವಿ ಕೋಟಗಿ, ಶಿವಾಜಿ ಮುತ್ತಗಿ, ಸುಭಾಷ್ ರುಮೋಜಿ, ನಾಗಪ್ಪ ಭೋವಿ, ಮಡಿವಾಳಪ್ಪ ಮರಿತಮ್ಮನವರ, ರಾಜು ಕಾರಿಮನಿ, ರುದ್ರಪ್ಪ ಬೋಳೆತ್ತಿನ, ಚಂದ್ರು ಬೆಳಗಾವಿ, ಬಸವರಾಜ ಸಂಗೊಳ್ಳಿ, ವಿಠ್ಠಲ ತಲ್ಲೂರ, ಮಹಾದೇವ ಮಡಿವಾಳರ, ಮಂಜುನಾಥ ಹಾರುಗೊಪ್ಪ ಮತ್ತಿತ್ತರರು ಉಪಸ್ಥಿತರಿದ್ದರು.

Post a Comment

0 Comments