Kitturu :ನೀರಿನ‌ ಸಮಸ್ಯೆ ತಲೆದೂರದಂತೆ ಮುನ್ನೆಚ್ಚರಿಕೆಯಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು : ಶಾಸಕ ಬಾಬಾಸಾಹೇಬ ಪಾಟೀಲ

ಚ.ಕಿತ್ತೂರು: ಬರಗಾಲ ಆವರಿಸಿರುವದರಿಂದ ಸಂಭವನೀಯ ಕುಡಿಯುವ ನೀರಿನ‌ ಸಮಸ್ಯೆ ತಲೆದೂರದಂತೆ ಮುನ್ನೆಚ್ಚರಿಕೆಯಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕಿತ್ತೂರು ಮತಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಕಿತ್ತೂರು ತಾಲೂಕು ಪಂಚಾಯತ ಸಭಾಭವನದಲ್ಲಿ ಮಂಗಳವಾರ ನಡೆದ ವಿವಿಧ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದಿಂದ ಸಾರ್ವಜನಿಕರಿಗೆ ಕೆಲಸದ ಸಮಸ್ಯೆ ಹಾಗೂ ಕುಡಿಯುವ ನೀರಿನ ಕೊರತೆ ಕಾಡಬಹುದು. ಆದ್ದರಿಂದ ಕೆಲಸ ಕೇಳಿಬಂದ ಜನರಿಗೆ ನರೇಗಾ ಕೆಲಸ ನೀಡಬೇಕು ಜೊತೆಗೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ  ಸ್ಪಂದಿಸಿ, ಪರಿಹರಿಸಬೇಕು.  ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ಆದ್ಯತೆ ಕೊಡುವುದರ ಜೊತೆಗೆ ಕೆಲಸ ಕೇಳಿದ ಜನರಿಗೆ ತಕ್ಷಣವೇ ಮನರೇಗಾ ಯೋಜನೆಯಡಿ  ಕೆಲಸ ಒದಗಿಸಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಬೈಲಹೊಂಗಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಿರಣ ಗೋರ್ಪಡೆ, ಕಿತ್ತೂರು ತಾ.ಪಂ. ನ  ಸಹಾಯಕ ನಿರ್ದೇಶಕರುಗಳಾದ ಸುರೇಶ ನಾಗೋಜಿ, ಲಿಂಗರಾಜ ಹಲಕರ್ಣಿಮಠ, ಬೈಲಹೊಂಗಲ ತಾಲೂಕು ಪಂಚಾಯತನ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ್, ಬೈಲಹೊಂಗಲ ಹಾಗೂ ಕಿತ್ತೂರು  ಮತಕ್ಷೇತ್ರದ  ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Post a Comment

0 Comments