ಗಣರಾಜ್ಯೋತ್ಸವದ ನಿಮಿತ್ಯ ದಂಡಾಧಿಕಾರಿಗಳ ಕಚೇರಿಯಲ್ಲಿ ಪೂರ್ವ ಭಾವಿ ಸಭೆ ಜರುಗಿತು

 

ಮಹಾಯೋಗಿ ಜಯಂತಿಯಂದು ವೇಮನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು


ಚನ್ನಮ್ಮನ ಕಿತ್ತೂರಜ 26 ರಂದು ನಡೆಯು ಗಣರಾಜ್ಯೋತ್ಸವದ ಆಚರಣೆಯ ನಿಮಿತ್ಯ ಶುಕ್ರವಾರ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಪೂರ್ವ ಭಾವಿ ಸಭೆ ಜರುಗಿತು.

ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ಗಣರಾಜ್ಯೋತ್ಸವದ ಆಚರಣೆಯ ದಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮಾ ಗಾಂಧಿಜಿ ಅವರ ಭಾವಚಿತ್ರದೊಂದಿಗೆ ಬಿ ಆರ್ ಅಂಬೇಡ್ಕರ ಅವರ  ಭಾವಚಿತ್ರವನ್ನು ಕಡ್ಡಾಯಯವಾಗಿ ಇಡಬೇಕು.  ಧ್ವಜಾರೋಹಣ ಸಮಯದಲ್ಲಿ
ಯಾವುದೇ ತರಹದ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ತಪ್ಪಗಳು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಇಂದಿನ ಸಭೆಗೆ ಹಾಜರಾಗದ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್‌ ನೀಡಲು  ತಿಳಿಸಿದರು.

ಈ ವೇಳೆ ಮಹಾಯೋಗಿ ವೇಮನ ಅವರ ಜಯಂತಿ ಆಚರಿಸಲಾಯಿತು.

ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಲೋಕೋಪಯೋಗಿ ಇಲಾಖೆ ಎಇಇ ಸಂಜೀವ ಮಿರಜಕರ, ಕ್ಷೇತ್ರ ಶೀಕ್ಷಣಾಧಿಕಾರಿ ಆರ್.‌ ಪಿ. ಜುಟ್ಟನವರ ನೋಂದಣಿ ಇಲಾಖೆಯ ರಜನಿ ಪರಟ್ಟಿ, ಕ್ಯೂರೇಟರ್‌ ರಾಘವೇಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.


Post a Comment

0 Comments