Kittur : ಆಧಾರ್ ಕಾರ್ಡ್ ಕೇಂದ್ರಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ

Aadhar Card Update last Date
ಸರ್ಕಾರದ ಎಲ್ಲಾ ಯೋಜನೆಗಳಿಗೆ ಅರ್ಜಿ ಹಾಕಲು
ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದ್ದು ಇದೇ
ವೇಳೆ ಆಧಾರ್‌ಗೆ ಸಂಬಂಧಿಸಿದ ಹೊಸ ಅಪ್‌ಡೇಟ್
ಹೊರಬಿದ್ದಿದೆ. Aadhar Card ಅನ್ನು ಉಚಿತವಾಗಿ
ನವೀಕರಿಸಲಾಗುತ್ತಿದೆ. ಇದಕ್ಕಾಗಿ UIDAI ಆಧಾರ್
ಪೋರ್ಟಲ್‌ನಲ್ಲಿ ಉಚಿತ ಸೌಲಭ್ಯವನ್ನು
ಒದಗಿಸಲಾಗಿದೆ. ಈ ಹಿಂದೆ ಆಧಾರ್ ಕಾರ್ಡ್
ಅಪ್‌ಡೇಟ್‌ಗೆ ಕೊನೆಯ ದಿನಾಂಕ ಜೂನ್ 14
2023 ಎನ್ನಲಾಗಿತ್ತು, ಆದರೆ ಈ ದಿನಾಂಕವನ್ನು
ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರಿ ಯೋಜನೆಗಳಿಂದ ವಂಚಿತರಾಗುವ
ಸಾಧ್ಯತೆ.

ಆಧಾರ್ ಕಾರ್ಡ್ ಮಾಡಿ 10 ವರ್ಷ ಕಳೆದಿದ್ದರೆ
UIDAI ನೀಡಿರುವ ಈ ಮಾಹಿತಿ
ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು
ಹೇಳಬಹುದು. 10 ವರ್ಷ ಹಳೆಯದಾದ ಮತ್ತು
ನವೀಕರಿಸದಿರುವ ಆಧಾರ್ ಅನ್ನು ಸಾಧ್ಯವಾದಷ್ಟು
ಬೇಗ Update ಮಾಡಬೇಕು ಇಲ್ಲವಾದಲ್ಲಿ
ಸರ್ಕಾರದಿಂದ ಸಿಗುವ ಯೋಜನೆಗಳನ್ನು
ಪಡೆಯಲು ಹಾಗು ಯಾವುದೇ ಬ್ಯಾಂಕ್
ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ
ಎನ್ನಲಾಗಿದೆ.

ಕಿತ್ತೂರು ಪಟ್ಟಣದಲ್ಲಿ
BSNL ಆಫೀಸ್ ಹೊರತುಪಡಿಸಿ ಉಳಿದ
ಆಧಾರ್ ಕಾರ್ಡ್ ಕೇಂದ್ರಗಳು
ಆಟಕ್ಕುಂಟು ಲೆಕ್ಕಕ್ಕಿಲ್ಲ
ಅಟಲ್ ಜೀ ಕಚೇರಿಯ ಆಧಾರ್ ಕಾರ್ಡ್ ಕೇಂದ್ರ
ಉದ್ಘಾಟನೆ ಆದ ದಿನದಿಂದ
ಬಂದ್ ಇದೆ , KVG ಬ್ಯಾಂಕ್,ಪೋಸ್ಟ್ ಆಫೀಸ್ ಆಧಾರ್ ಕಾರ್ಡ್
ಕೇಂದ್ರ ಹೆಸರಿಗಷ್ಟೇ ಸಿಬ್ಬಂದಿ ಇಲ್ಲ ಇದ್ದರೂ ಸರಿಯಾಗಿ
ಬರ್ತಾ ಇಲ್ಲ ಎಂದು ಜನರು ಅಕ್ರೋಶ ವ್ಯಕ್ತಪಡಿಸಿದರು.


Post a Comment

0 Comments