kittur vijay news.ಕವಿತೆಗಳು ಸಮಾಜದ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಶಾಲಿ ಮಾಧ್ಯಮಗಳಾಗಿವೆ.ಡಾ.ಎಸ್.ಬಿ.ದಳವಾಯಿ


ಕಿತ್ತೂರು ವಿಜಯ ಸುದ್ದಿ 
ಚನ್ನಮ್ಮನ ಕಿತ್ತೂರ:- ಕವಿತೆಗಳು ಸಮಾಜದ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಶಾಲಿ ಮಾಧ್ಯಮಗಳಾಗಿದೆ ಎಂದು ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಅಭಿಪ್ರಾಯ ಪಟ್ಟರು. ಅವರು ಸಮೀಪದ ಅಂಬಡಗಟ್ಟಿಯ ಶ್ರೀ ಮಡಿವಾಳೇಶ್ವವರ ಮಠದ ಆವರಣದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಅಭಿಮಾನಿ ಬಳಗ, ಶ್ರೀ ಶಿವಸಾಯಿ ಶಿಕ್ಷಣ ಹಾಗೂ ಸಮಾಜ ಅಭಿವೃದ್ಧಿ ಸಂಸ್ಥೆ ಅಂಬಡಗಟ್ಟಿ ಮತ್ತು ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನಿವೃತ್ತ ಶಿಕ್ಷಕರಾದ ಶ್ರೀ ಬಿ.ಬಿ.ಕಾದರವಳ್ಳಿ ರಚಿಸಿದ "ಭಾವ ಸ್ಪಂದನ" ಕವನ ಸಂಕಲನದ ಬಿಡುಗಡೆ ಸಮಾರಂಭದ ಅತಿಥಿಗಳಾಗಿ ಮಾತನಾಡುತ್ತ ಸರಳ ಸಜ್ಜನಿಕೆಯ ಶ್ರೀ ಬಿ.ಬಿ.ಕಾದರವಳ್ಳಿ ಶಿಕ್ಷಕರು ನಿವೃತ್ತಿ ನಂತರವೂ ಸಾಹಿತ್ಯ ರಚನೆಯಲ್ಲಿ ಕ್ರಿಯಾಶೀಲರಾಗಿ ಹಲವಾರು ಕೃತಿಗಳನ್ನು ರಚಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಅವರಿಗೆ ಶುಭ ಕೋರಿದರು.

ಖಾನಾಪೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ ಬಡಿಗೇರ ಲೇಖಕರ ಮತ್ತು ಕವನ ಸಂಕಲನದ ಪರಿಚಯ ಮಾಡುತ್ತ ಲೇಖಕರು ಜೀವನದ ವಿವಿಧ ಅನುಭವಗಳು, ಸಮಾಜದ ಸಮಸ್ಯೆಗಳು ಮತ್ತು ಮಾನವೀಯ ಮೌಲ್ಯಗಳನ್ನು ಸುಂದರವಾಗಿ ವೈಕ್ತಪಡಿಸಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸುತ್ತ ತಮ್ಮ ಗುರುಗಳಾದ ಶ್ರೀ ಬಿ.ಬಿ.ಕಾದರವಳ್ಳಿ ಅವರೊಂದಿಗಿನ ಒಡನಾಟ ಮತ್ತು ಕೃತಿಗಳ ರಚನೆಯಲ್ಲಿ ಅವರ ಪರಿಶ್ರಮ ಮತ್ತು ಕಾರ್ಯಕ್ಷಮತೆ ಕುರಿತು ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಅಂಬಡಗಟ್ಟಿಯ ಶ್ರೀ ಮಡಿವಾಳೇಶ್ವವರ ಮಠದ ಪೂಜ್ಯ ಶ್ರೀ ವೀರೇಶ್ವರ ಮಹಾಸ್ವಾಮಿಗಳು ಈ ಕವನ ಸಂಕಲನದ ಮೂಲಕ ಯುವ ಪೀಳಿಗೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿರುವ ಶ್ರೀ ಬಿ.ಬಿ.ಕಾದರವಳ್ಳಿ ಶಿಕ್ಷಕರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಅನೇಕ ಕೃತಿಗಳು ಮೂಡಿ ಬರಲಿ ಎಂದು ಆಶೀರ್ವದಿಸಿದರು. ಶ್ರೀ ಬಸವರಾಜ ದಳವಾಯಿ, ಶ್ರೀ ಪ್ರಕಾಶಗೌಡ್ರು ಪಾಟೀಲ, ಶ್ರೀ ಶಾಮ್ ಕಾದ್ರೋಳ್ಳಿ, ಶ್ರೀ ಮಹಾದೇವ ಹಿತ್ತಲಮನಿ ಮತ್ತಿತರರು ಮಾನಾಡಿದರು. ಪೂಜ್ಯರು, ಅತಿಥಿಗಳು, ಹಿರಿಯರು ದೀಪ ಬೆಳಗಿಸುವದರ ಮೂಲಕ "ಭಾವ ಸ್ಪಂದನ" ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. 85 ವರ್ಷಗಳನ್ನು ಪೂರ್ಣಗೊಳಿಸಿ. 85 ಕವನಗಳನ್ನು ಒಳಗೊಂಡ ಕವನ ಸಂಕಲನವನ್ನು ರಚಿಸಿದ ಶ್ರೀ ಬಿ.ಬಿ.ಕಾದರವಳ್ಳಿ ಶಿಕ್ಷಕರನ್ನು ಪೂಜ್ಯರು, ಶ್ರೀ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಅಭಿಮಾನಿ ಬಳಗ, ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಲೇಖಕರ ಸ್ನೇಹಿತರು ಮತ್ತು ಸಂಬಂಧಿಕರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಬಿ.ಬಿ.ಕಾದರವಳ್ಳಿ ಇವರು ತೀರ ಬಡತನದಲ್ಲಿ ಬೆಳೆದು ಶಿಕ್ಷಣ ಪಡೆದ ನಾನು ಶಿಕ್ಷಕ ವೃತ್ತಿಯನ್ನು ಸಂತಸದಿಂದ ಪೂರ್ಣಗೊಳಿಸಿ ಇದೀಗ ಕೃಷಿ ಕ್ಷೇತ್ರದ ಜೊತೆಗೆ ಬರವಣಿಗೆಯಲ್ಲಿ ತೊಡಗಿದ್ದು ತಾವು ರಚಿಸಿದ ಕವನ ಸಂಕಲನವನ್ನು ನಮ್ಮ ಗ್ರಾಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ ಪ್ರತಿಯೊಬ್ಬರಿಗೆ ಧನ್ಯವಾದಗಳನ್ನು ತಿಳಿಸಿದರು. ಶ್ರೀ ವಿಕ್ರಂ ಋದಾನಪೂರ ಸ್ವಾಗತಿಸಿದರು. ಶ್ರೀ ಈರಣ್ಣ ಹುಕ್ಕೇರಿ ವಂದಿಸಿದರು. ಶ್ರೀ ಬಸವರಾಜ ಹುರಕಡ್ಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇಟಗಿಯ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಜಯ ಸಾಣಿಕೊಪ್ಪ,ಪ್ರಾಚಾರ್ಯರಾದ ಶ್ರೀ ಹುಣಸೀಕಟ್ಟಿ, ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments