ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಕಲಭಾಂವಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ, ಕಲಭಾಂವಿ ಗ್ರಾಮ ಪಂಚಾಯತಿ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ ಪ್ರಥಮ ಪರಿಶಿಷ್ಠ ಪಂಗಡದ ಅಭ್ಯರ್ಥಿಯಾದ ಕಲಭಾಂವಿ ಗ್ರಾಮದ ಶ್ರೀಮತಿ ಶಿವನವ್ವ ಉರ್ಫ ಸೋನವ್ವ ರಾಯಪ್ಪ ಕರಡಿ ಅವರನ್ನು ಮತ್ತು ಚುನಾವಣೆ ಮೂಲಕ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕೊಟಬಾಗಿ ಗ್ರಾಮದ ಶ್ರೀ ಮುಶಪ್ಪ ಚಂದ್ರಪ್ಪ ದೇಮಟ್ಟಿ ಅವರನ್ನು ಕಲಭಾಂವಿ ಗ್ರಾಮ ಪಂಚಾಯತಿಯ ಕಲಭಾಂವಿ, ಕೊಟಬಾಗಿ, ಕಡತನಾಳ ಗ್ರಾಮದ ಜನ ಮುಖಂಡರು, ರಾಜಕೀಯ ನಾಯಕರು, ಸಾರ್ವಜನಿಕರು ಗ್ರಾಮ ಪಂಚಾಯತಿಯ ಚುನಾಯಿತ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಒಳಪಡುವುದಿಲ್ಲವೆಂಬುವುದನ್ನು ಅರಿತು, ರಾಜಕೀಯ ಭೇದಭಾವ ಮರೆತು ಹೃದಯ ಪೂರ್ವಕವಾಗಿ ಅಭಿನಂದಿಸಿದರು.
ಈ ಚುನಾವಣೆ ನಡೆಸಿದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಎಸ್ ಅಜ್ಜನ್ನವರ ಅವರು ಕಲಭಾಂವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರ /ಪಂಚಾಯತಿ ಸದಸ್ಯರ ನಿಸ್ವಾರ್ಥ ಮತ್ತು ಸಾಮಾಜಿಕ ಸೇವೆಯ ,ಅಧಿಕಾರದ ಜವಾಬ್ದಾರಿಯನ್ನು ಕೊಂಡಾಡಿ ಇದೇ ರೀತಿಯ ಸಾಮರಸ್ಯ ಎಂದೆಂದೂ ತಮ್ಮ ಜೊತೆಗಿರಲಿ, ತಮ್ಮ ಸೇವೆ ಬಡವರ ಪರವಾಗಿರಲಿ, ಗ್ರಾಮಾಭಿವೃದ್ದಿ ಕಡೆಗೆ ಸರಕಾರದ ಮಾರ್ಗಸೂಚಿಯನ್ವ ಇರಲಿ ಎಂದು ಕಿವಿಮಾತು ಹೇಳಿದರು. ಗ್ರಾಮ ಪಂಚಾಯತಿ ಸದಸ್ಯರು ಸದರಿ ಚುನಾವಣಾ ಅಧಿಕಾರಿಗಳನ್ನು ಸನ್ಮಾನಿಸಲು ಮುಂದಾದಾಗ ನಾವು ಸರ್ಕಾರಿ ನೌಕರರಾಗಿ ನಮ್ಮ ಕೆಲಸ ನಿರ್ವಹಿಸಿದ್ದೇವೆ. ಇದರ ಅವಶ್ಯಕತೆ ನಮಗಿಲ್ಲವೆಂದು ಸ್ವಾಭಿಮಾನ ಮೇರೆದರು.
ಜೊತೆಗೆ ಆರಕ್ಷಕರ ಠಾಣೆ ಕಿತ್ತೂರಿನ ಸಿಬ್ಬಂಧಿಗಳು ಈ ಚುನಾವಣೆ ಕಾರ್ಯದ ಬಂದೋಬಸ್ತಿ ಕರ್ತವ್ಯವನ್ನು ನಿರ್ವಹಿಸಿ. ಪೋಲಿಸ್ ಎಂದರೆ ಭಯ ಪಡುವುದು ಬೇಡ, ನಾವು ಜನಹ್ನೇಹಿ ಪೋಲಿಸರು. ಕಾನೂನನ್ನು ಗೌರವಿಸುವವರನ್ನು ನಾವು ಗೌರವಿಸುತ್ತೇವೆ. ಕಾನೂನನ್ನು ಮೀರಿ ಮೇರೆಯುವವರನ್ನು ನಾವು ನಿರ್ಧಾಕ್ಷೀಣ್ಯವಾಗಿ ಖಂಡಿಸುತ್ತೇವೆ. ನಮಗೆ ಜನರಿಂದ ಯಾವುದೇ ದಾಕ್ಷೀಣ್ಯಬೇಡ, ಸರಕಾರ ನಮ್ಮ ಕರ್ತವ್ಯಕ್ಕೆ ಸಂಬಳ ನೀಡುತ್ತದೆ. ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಪೋಲಿಸ್ ನಂತೆ ಕರ್ತವ್ಯ ನಿರ್ವಹಿಸಬೇಕು ಆಗಲೇ ಆ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ತಾನಾಗಿಯೇ ಜಾರಿಯಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗಾಗಿ ನ್ಯಾಯಾಲಯದ ಮೇಟ್ಟಿಲೇರಿ ಹಣ ಮತ್ತು ಸಮಯ ವ್ಯಯಿಸುವುದರ ಬದಲು, ಗ್ರಾಮದ ಹಿರಿಯರ / ಪಂಚಾಯತಿ ಸದಸ್ಯರ ಸಮಕ್ಷಮ ಬಗೆಹಿರಿಸಿಕೊಳ್ಳುವುದು ಸೂಕ್ತ. ಪ್ರತಿಯೊಂದು ಗ್ರಾಮದಲ್ಲಿ ಪೋಲಿಸ್ ಗಸ್ತು ಪದ್ದತಿ ಇದೆ. ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿಗಳು ಪ್ರತಿವಾರ ಪೋನಿನ್ ನೇರ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಹೆಚ್ಚಾನು ಹೆಚ್ಚು ಜನರು ಸ್ಮಾರ್ಟಪೋನಗಳನ್ನು ಬಳಸುವವರಿದ್ದಾರೆ. ಸಮಾಜ ಬಾಹಿರ / ಕಾನೂನು ಬಾಹಿರ ಚಟುವಟಿಕೆಗಳು ನಡೆದಲ್ಲಿ/ಕಂಡು ಬಂದಲ್ಲಿ ಅವುಗಳನ್ನು ವಿಡಿಯೋ ಚಿತ್ರೀಕರಣದ ಮೂಲಕ ಸಾಕ್ಷಿಯನ್ನಾಗಿ ಬಳಸಿಕೊಂಡು ದೂರು ದಾಖಲಿಸಬಹುದು. ದೂರುದಾರರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಸರ್ವರೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಜೊತೆಗೆ ಕೈಜೋಡಿಸಬೇಕೆಂದು ಜನತೆಗೆ ಕರೆ ನೀಡಿದರು.
ಕಾರ್ಯದರ್ಶಿಗಳಾದ ರುದ್ರಪ್ಪ ಮ ಜಾಂಗಟಿ,
ಸಿಬ್ಬಂದಿಗಳಾದ ಪ್ರವೀಣ ಸೋಮನಟ್ಟಿ,
ಮಡಿವಾಳಪ್ಪ ದಳವಾಯಿ, ವಿಠಲ
ತಳವಾರ,ದೇಮಪ್ಪ ಹೈಬತ್ತಿ, ಇವರೆಲ್ಲರೂ
ಹಾಜರಿದ್ದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ
ತುಂಬು ಹೃದಯದ ಸ್ವಾಗತ ಹಾಗೂ
ಅಭಿನಂದನೆಗಳನ್ನು ಸಲ್ಲಿಸಿದರು.
ಈ ಚುನಾವಣೆಯು ಶಾಂತಿ ಮತ್ತು ಸೌಹಾರ್ಧಯುತವಾಗಿ ನಡೆಯಲೂ ಕಾರಣರಾದ ಸರ್ವರನ್ನು ಗ್ರಾಮ ಪಂಚಾಯತಿ ಪರವಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿವೇಕಾನಂದ ಎಸ್ ಶಿಂದೆಯವರು ಅಭಿನಂದಿಸಿದರು, ಧನ್ಯವಾದಗಳನ್ನು ಸಲ್ಲಿಸಿದರು.
ವರದಿ : ಮಾಹಾಂತೇಶ್ ಕರಬಸಣ್ಣನವರ್, ಕಿತ್ತೂರು
0 Comments