Kittur : ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆ

ಚನ್ನಮ್ಮನ ಕಿತ್ತೂರು: ಸಾರ್ವಜನಿಕರ ಸಲಹೆಯಂತೆ
ಬರುವ ಸ್ವಾತಂತ್ರ್ಯ ಹಬ್ಬವನ್ನು  ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಬಾಬ ಸಾಹೇಬ ಪಾಟೀಲ ಹೇಲಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಟ್ಟಣದ ಸ್ವಚ್ಛತೆಗೆ ಮೊದಲು ಆದ್ಯತೆ ನೀಡುವಂತೆ ಸೂಚಿಸಿದ ಅವರು, ಪರಿಸರದ ಸ್ವಾಸ್ಥ್ಯ ಕಾಪಾಡಲು ಸ್ವಾತಂತ್ರ್ಯದ 76ರ ಸಂಭ್ರಮದ ಪ್ರಯುಕ್ತ ಸ್ವಾತಂತ್ರೋತ್ಸವ ಪೂರ್ವಭಾವಿ ಸಭೆ 76 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳೋಣ.
 ಪಟ್ಟಣ ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಅನೇಕ
ಯೋಜನೆಯನ್ನು ರೂಪಿಸುವ ಕಾರ್ಯಕ್ರಮ ನಡೆದಿದ್ದು,ಸಾರ್ವಜನಿಕರ ಸಹಕಾರ ಅತೀ ಅವಶ್ಯಕ. ಐತಿಹಾಸಿಕ ಕೋಟೆ, ಅಭಿವೃದ್ಧಿಗೆ ಒತ್ತು ನೀಡಿ ಪ್ರವಾಸೋದ್ಯಮ ಬೆಳೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಗೆ
ಹಾಜರಾಗದೇ ನಿರ್ಲಕ್ಷ್ಯ ತೋರಿದ ಕೆಲ ಇಲಾಖೆಯ
ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಶಾಸಕ ಬಾಬಾಸಾಹೇಬ್ ಪಾಟೀಲ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ
ಹಾದಿಮನಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ
ಸುಭಾಷ್ ಸಂಪಗಾವಿ, ಆಷ್ಟಾಕ ಹವಾಲ್ದಾರ್, ಸುನೀಲ ಘಿವಾರಿ, ಚಂದ್ರಗೌಡ ಪಾಟೀಲ, ಶಂಕರ ಹೊಳಿ, ಕೆಲ ಇಲಾಖೆಯ ಅಧಿಕಾರಿಗಳು, ಕೃಷ್ಣಾ ಬಾಳೇಕುಂದರಗಿ, ಶಂಕರ ಬಡಿಗೇರ, ಪ್ರವೀಣ ಜಕ್ಕನಗೌಡರ, ಮಂಜುನಾಥ ಮಾಣಿಕಬಾಯಿ ಗಂಗಪ್ಪನವರ, ಕುಮ್ಬುದ್ದೀನ ಕುತ್ಥುದ್ದಿನ ನದಿಮುಲ್ಲಾ,ಸಾಧಿಕ್ ಸೇರಿದಂತೆ ಇತರರು ಇದ್ದರು.

ವರದಿ : ಮಾಹಾಂತೇಶ್ ಕರಬಸಣ್ಣನವರ್

Post a Comment

0 Comments