ಸ್ವಾವಲಂಬಿ ಬದುಕಿಗೆ “ಗ್ಯಾರಂಟಿ”
ಯೋಜನೆಗಳು ಪೂರಕವಾಗಿವೆ: ಸಚಿವ
ಸತೀಶ್ ಜಾರಕಿಹೊಳಿ
ಬೆಳಗಾವಿ: ಗೃಹಜ್ಯೋತಿ
ಯೋಜನೆಗಾಗಿ ಬೆಳಗಾವಿ ಜಿಲ್ಲೆಗೆ ಪ್ರತಿವರ್ಷಕ್ಕೆ
516 ಕೋಟಿ ರೂಪಾಯಿಗಳನ್ನು ಸರಕಾರವು
ನೀಡಲಿದೆ. ಗ್ಯಾರಂಟಿ ಯೋಜನೆಗಳ ಮೂಲಕ
ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ರಿಂದ 5 ಸಾವಿರ
ರೂಪಾಯಿ ಖರ್ಚು ಮಾಡಲಿದೆ. ಇದು ಮಕ್ಕಳ
ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ
ಬಳಕೆಯಾಗಬೇಕು. ಅಂದಾಗ ಮಾತ್ರ
ಸರಕಾರದ ಗ್ಯಾರಂಟಿ ಯೋಜನೆಗಳು
ಸಾರ್ಥಕವಾಗಲಿವೆ ಎಂದು ಲೋಕೋಪಯೋಗಿ
ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ
ಶನಿವಾರ(ಆ.5) 200 ಯುನಿಟ್ ವರೆಗೆ ಉಚಿತ
ವಿದ್ಯುತ್ ಒದಗಿಸುವ ಗ್ಯಾರಂಟಿ
ಯೋಜನೆಯಾಗಿರುವ “ಗೃಹಜ್ಯೋತಿ"
ಯೋಜನೆಗೆ ಚಾಲನೆ ನೀಡಿ, ಫಲಾನುಭವಿಗಳಿಗೆ
ಶೂನ್ಯ ವಿದ್ಯುತ್ ಬಿಲ್ ವಿತರಿಸಿ ಅವರು
ಮಾತನಾಡಿದರು.
ಚುನಾವಣೆಯಲ್ಲಿ ನೀಡಿರುವ ಗ್ಯಾರಂಟಿಯ
ಪ್ರಕಾರ “ಗೃಹಜ್ಯೋತಿ” ಯೋಜನೆಯನ್ನು
ಅನುಷ್ಠಾನಗೊಳಿಸುವ ಮೂಲಕ ನಮ್ಮ
ಸರಕಾರವು ನುಡಿದಂತೆ ನಡೆದಿದೆ. ಮೂರು
ತಿಂಗಳ ಅವಧಿಯಲ್ಲಿ ಜಾರಿಗೊಳಿಸಲಾಗುತ್ತಿದೆ.
ಇನ್ನುಳಿದ ಗ್ಯಾರಂಟಿ ಯೋಜನೆಗಳಾದ
ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ
ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
0 Comments